ಕೊಪ್ಪಳದ ಎನ್.ಜಿ.ಓ ಕಾಲೋನಿಯಲ್ಲಿನ ನಾಗರಾಜ ನಾಯಕ ಡೊಳ್ಳಿನ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮವನ್ನು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಉದ್ಘಾಟಿಸಿದರು. ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕ ಜಿ.ಎಸ್.ಗೋನಾಳ, ಸಮಿತಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಫಕೀರಪ್ಪ ವಜ್ರಬಂಡಿ, ನಿವೃತ್ತ ಉಪನ್ಯಾಸಕ ಎಸ್.ಎ ರಜಪೂತ, ಉಪಪ್ರಾಚಾರ್ಯ ಮಂಜುನಾಥ ಚಿತ್ರಗಾರ ಇದ್ದರು.
ಕೊಪ್ಪಳ : ಪ್ರತಿಯೋಬ್ಬರ ಮನೆಯಲ್ಲಿ ದೇವರ ಮನೆ ಇದ್ದಂತೆ ಪುಸ್ತಕದ ಮನೆ ಇರಲಿ ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷ ಡಾ. ಮಾನಸ ಹೇಳಿದರು.
ನಗರದ ಎನ್.ಜಿ.ಓ ಕಾಲೋನಿಯಲ್ಲಿನ ನಾಗರಾಜ ನಾಯಕ ಡೊಳ್ಳಿನ ಮನೆಯಲ್ಲಿ ಮನೆಗೊಂದು ಗ್ರಂಥಾಲಯ ಅನುಷ್ಠಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮ್ಮೆಲ್ಲರ ಮನೆಯಲ್ಲಿ ಭಕ್ತಿಗಾಗಿ ದೇವರ ಕೋಣೆಗೆ ಮೀಸಲಿರುವಂತೆ, ಪುಸ್ತಕಕ್ಕೂ ಜಾಗ ಮೀಸಲಿರಲಿ. ಇದು ಭಾರತ ಭಾಗ್ಯವಿಧಾತ ಡಾ.ಬಿ.ಆರ್. ಅಂಬೇಡ್ಕರ್ ಕನಸು. ಓದು ಮನುಷ್ಯನನ್ನು ಪ್ರಜ್ಞಾವಂತನನ್ನಾಗಿಸುತ್ತದೆ. ಸಮಾಜದಲ್ಲಿ ಉತ್ತಮ ನಾಗರಿಕರಾಗಲು ಓದು ತುಂಬಾ ಸಹಕಾರಿ. ಒತ್ತಡದ ಬದುಕಿನಲ್ಲಿ ಓದು ಮಾತ್ರ ನಮಗೆ ನೆಮ್ಮದಿ ನೀಡ್ಡುತ್ತದೆ. ಈ ವರೆಗೂ ಲೇಖಕನಿಗೆ ಸಿಕ್ಕ ಗೌರವ ಓದುಗನಿಗೆ ಸಿಗುತ್ತಿರಲಿಲ್ಲ. ಇದನ್ನರಿತು ಕನ್ನಡ ಪುಸ್ತಕ ಪ್ರಾಧಿಕಾರ ಓಗುಗ ಪ್ರತಿ ಮನೆಯಲ್ಲೂ ಇರಲಿ ಎನ್ನುವ ಆಶಯದೊಂದಿಗೆ ಈ ಮನೆಗೊಂದು ಗ್ರಂಥಾಲಯ ಅನುಷ್ಠಾನ ಸಮಾರಂಭ ಹಮ್ಮಿಕೊಳ್ಳಲಾಗುತ್ತಿದೆ ಎಂದರು.
ಗೆಳೆಯರ ಬಳಗ ಗುಡಿಗ್ರಂಥಾಲಯ ನಿಮಾರ್ಣ ಮಾಡಿದ್ದಕ್ಕಾಗಿ, ಮುಖ್ಯ ಶಿಕ್ಷಕಿ ವಿಕಯಲಕ್ಷಿ$್ಮ ಕೆ.ಎಂ., ಶಿಕ್ಷಕಿ ಶಿವಮ್ಮ, ಉಪನ್ಯಾಸಕ ನಿಂಗಪ್ಪ ಕಂಬಳಿ, ಮಾರುತಿ ಕಟ್ಟಿಮನಿ ಅವರನ್ನು ಅವರವರ ಮನೆಗೆ ತೆರಳಿ ಕನ್ನಡ ಪುಸ್ತಕ ಪ್ರಾಧಿಕಾರದಿಂದ ಗೌರವಿಸಿ ಸನ್ಮಾನಿಸಲಾಯಿತು.
ಜಿಲ್ಲಾ ಗ್ರಂಥಾಲಯ ಜಾಗೃತಿ ಸಮಿತಿ ಸಂಚಾಲಕ ಜಿ.ಎಸ್.ಗೋನಾಳ, ಸಮಿತಿ ಸದಸ್ಯರಾದ ಸಾವಿತ್ರಿ ಮುಜುಂದಾರ, ಫಕೀರಪ್ಪ ವಜ್ರಬಂಡಿ, ನಿವೃತ್ತ ಉಪನ್ಯಾಸಕ ಎಸ್.ಎ ರಜಪೂತ, ಉಪಪ್ರಾಚಾರ್ಯ ಮಂಜುನಾಥ ಚಿತ್ರಗಾರ ಇತರರಿದ್ದರು.