ಪರೀಕ್ಷೆ ಬರೆದರೂ ಫಲಿತಾಂಶ ಶೂನ್ಯ

ವಿದ್ಯಾರ್ಥಿನಿ ಪ್ರವೇಶ ಪತ್ರದಲ್ಲಿ ಮೇಲ್ವಿಚಾರಕರು ಸಹಿ ಮಾಡಿರುವುದು.
ವಿದ್ಯಾರ್ಥಿನಿ ಪ್ರವೇಶ ಪತ್ರದಲ್ಲಿ ಮೇಲ್ವಿಚಾರಕರು ಸಹಿ ಮಾಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ವಿದ್ಯಾರ್ಥಿನಿಗೆ ಅನ್ಯಾಯ
  • ಗೈರೆಂದು ದಾಖಲಿಸಿದ ಅಧಿಕಾರಿ
ಕೊಪ್ಪಳ: ವಿದ್ಯಾರ್ಥಿನಿಯೊಬ್ಬಳು ನವೋದಯ ಪ್ರವೇಶ ಪರೀಕ್ಷೆ ಬರೆದಿದ್ದರೂ, ಗೈರಾಗಿದ್ದಾಳೆಂದು ಶೂನ್ಯ ಫಲಿತಾಂಶ ಪ್ರಕಟಿಸಿರುವ ಘಟನೆ ನಡೆದಿದೆ.
ಕೊಪ್ಪಳ ತಾಲೂಕಿನ ಘಟ್ಟಿರಡ್ಡಿಹಾಳ ಗ್ರಾಮದ ಸಂಗೀತಾ ತಂದೆ ಮಹೇಶ ಡಂಬಳ ಎಂಬ ಬಾಲಕಿ 2025, ಡಿಸೆಂಬರ್​ 13ರಂದು ಕೊಪ್ಪಳದಲ್ಲಿ ನಡೆದ ನವೋದಯ 6ನೇ ತರಗತಿ ಪ್ರವೇಶ ಪರೀಕ್ಷೆ ಬರೆದಿದ್ದಾಳೆ. ಪ್ರವೇಶ ಪತ್ರ ಹಾಗೂ ಪ್ರಶ್ನೆ ಪತ್ರಿಕೆಯಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥ ಹಾಜರಾದ ಬಗ್ಗೆ ಸಹಿ ಮಾಡಿದ್ದಾರೆ. ಇತ್ತೀಚೆಗೆ ಫಲಿತಾಂಶ ಪ್ರಕಟಗೊಂಡಿದ್ದು, ಶೂನ್ಯವೆಂದು ತೋರಿಸಿದೆ. ಪದೇ ಪದೆ ಚೆಕ್​ ಮಾಡಿದಾಗಲೂ ಶೂನ್ಯವೆಂದೇ ತೋರಿಸಿದೆ. ಈ ಬಗ್ಗೆ ಶಾಲೆಯಲ್ಲಿ ವಿಚಾರಿಸಿದಾಗ ಬಾಲಕಿ ಪರೀಕ್ಷೆಗೆ ಹಾಜರಾಗಿಲ್ಲ. ಗೈರಾಗಿದ್ದಾಳೆ. ಹೀಗಾಗಿ ಫಲಿತಾಂಶ ಶೂನ್ಯ ಬಂದಿದೆ ಎಂದು ತಿಳಿಸಿದ್ದಾರೆ.
ಪರೀಕ್ಷಾ ಕೇಂದ್ರದ ಮೇಲ್ವಿಚಾರಕ ಗೈರಾಗಿದ್ದಾಳೆಂದು ಮಾಹಿತಿ ನೀಡಿದ್ದಾರೆ. ಹೀಗಾಗಿ ನಾವೇನು ಮಾಡಲಾಗದು. ಸಿಬ್ಬಂದಿ ನೇಮಕ, ಪ್ರವೇಶ ಪರೀಕ್ಷೆ ಪ್ರಕ್ರಿಯೆ ಜಿಲ್ಲಾಡಳಿತ ನಡೆಸುತ್ತದೆಂದು ಸಾಗಹಾಕಿ ಕಳಿಸಿದ್ದಾರೆ. ಜಿಲ್ಲಾಧಿಕಾರಿಗಳು ಪರಿಶೀಲಿಸಿದಾಗ ವಿದ್ಯಾರ್ಥಿನಿ ಬೇರೊಂದು ದಾಖಲಾತಿ ಸಂಖ್ಯೆ ಸ್ಥಳದಲ್ಲಿ ಕುಳಿತು ಪರೀೆ ಬರೆದಿದ್ದಾಳೆ. ಅದನ್ನು ಗಮನಿಸಿದರೂ 87 ಅಂಕಗಳು ಬಂದಿವೆ. ಬಾಲಕಿ ಪ್ರವೇಶ ಬಯಸಿದ ವಿಭಾಗದಲ್ಲಿ ಅರ್ಹತೆ ಪಡೆದಿಲ್ಲವೆಂದು ತಿಳಿದು ಬಂದಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net