ಕುಡಿವ ನೀರಿನ ಸಮಸ್ಯೆಯಾಗದಿರಲಿ

ಕನಕಗಿರಿಯ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಅಮೀನಸಾಬ್ ಅತ್ತಾರ್‌ಗೆ ಕನಕಗಿರಿ ಪ್ರಭಾರ ಸಿಡಿಪಿಒ ವಿಜಯಲಕ್ಷ್ಮೀ ಹಾಗೂ ಗಂಗಾವತಿ ಎಸಿಡಿಪಿಒ ಪ್ರಸನ್ನ ಕಲ್ಮನಿ ವರದಿ ಸಲ್ಲಿಸಿದರು. ಕನಕಗಿರಿ ತಾಪಂ ಇಒ ಕೆ.ರಾಜಶೇಖರ್, ಕಾರಟಗಿ ತಾಪಂ ಇಒ ಲಕ್ಷ್ಮೀದೇವಿ ಇತರರಿದ್ದರು.
ಕನಕಗಿರಿಯ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ತಾಪಂ ಆಡಳಿತಾಧಿಕಾರಿ ಅಮೀನಸಾಬ್ ಅತ್ತಾರ್‌ಗೆ ಕನಕಗಿರಿ ಪ್ರಭಾರ ಸಿಡಿಪಿಒ ವಿಜಯಲಕ್ಷ್ಮೀ ಹಾಗೂ ಗಂಗಾವತಿ ಎಸಿಡಿಪಿಒ ಪ್ರಸನ್ನ ಕಲ್ಮನಿ ವರದಿ ಸಲ್ಲಿಸಿದರು. ಕನಕಗಿರಿ ತಾಪಂ ಇಒ ಕೆ.ರಾಜಶೇಖರ್, ಕಾರಟಗಿ ತಾಪಂ ಇಒ ಲಕ್ಷ್ಮೀದೇವಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಾಪಂ ಆಡಳಿತಾಧಿಕಾರಿ ಅಮೀನಸಾಬ್ ಸೂಚನೆ
  • ಕನಕಗಿರಿ ತಾಪಂ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ
ಕನಕಗಿರಿ: ಗ್ರಾಮೀಣ ಭಾಗದ ಜನರಿಗೆ ಕುಡಿವ ನೀರಿನ ಸಮಸ್ಯೆಯಾಗದಂತೆ ಪಿಡಿಒಗಳು ಕ್ರಮವಹಿಸಬೇಕು ಎಂದು ತಾಪಂ ಆಡಳಿತಾಧಿಕಾರಿ ಅಮೀನಸಾಬ್ ಅತ್ತಾರ್ ಸೂಚಿಸಿದರು.
ತಾಪಂ ಸಭಾಂಗಣದಲ್ಲಿ ಆಯೋಜಿಸಿದ್ದ ಕನಕಗಿರಿ ಹಾಗೂ ಕಾರಟಗಿ ತಾಪಂಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಹಾಗೂ ಸಾಮಾನ್ಯ ಸಭೆಯಲ್ಲಿ ಮಾತನಾಡಿದರು. ಪಿಡಿಒಗಳು ಗ್ರಾಪಂ ವ್ಯಾಪ್ತಿಯಲ್ಲಿ ಸ್ವಚ್ಛತೆ ಕಾಪಾಡಬೇಕು. ಪೈಪ್‌ಲೈನ್‌ಗಳನ್ನು ಸರಿಪಡಿಸುವುದು, ನೀರಿನ ಮೇಲ್ತೊಟ್ಟಿ, ಸಂಪ್‌ಗಳನ್ನು ಸ್ವಚ್ಛಗೊಳಿಸಬೇಕು. ಪ್ರಗತಿಯಲ್ಲಿರುವ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಕುರಿತು ಜಾಗ್ರತೆಯಿಂದ ಕೆಲಸ ನಿರ್ವಹಿಸಬೇಕು. ಎಲ್‌ನಿನೋ ಪರಿಣಾಮಗಳನ್ನ್ನು ಅರ್ಥೈಸಿಕೊಂಡು ಪರಿಹಾರ ಕ್ರಮಕ್ಕೆ ಮುಂಜಾಗ್ರತೆ ವಹಿಸಬೇಕು ಎಂದರು.
ಕನಕಗಿರಿ ತಾಪಂ ಇಒ ಕೆ.ರಾಜಶೇಖರ್, ಕಾರಟಗಿ ತಾಪಂ ಇಒ ಲಕ್ಷ್ಮೀದೇವಿ, ತಾಪಂ ಎಡಿ ವೀರಣ್ಣ ನಕ್ರಳ್ಳಿ, ಕಾರಟಗಿ ತಾಲೂಕು ಯೋಜನಾಧಿಕಾರಿ ರಾಘವೇಂದ್ರ, ಪಿಡಿಒಗಳಾದ ರಾಮು ನಾಯಕ, ಲಕ್ಷ್ಮಣ ಹಿರೇಖೇಡ, ಯುಮಲ್ಲಿಕಾರ್ಜುನ, ಅಮರೇಶ ರಾಥೋಡ್, ಬಸವರಾಜ ಸಂಕನಾಳ, ಹನುಮಂತಪ್ಪ, ಚಂದುಸ್ವಾಮಿ ಇತರರಿದ್ದರು.
ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಿ: ಸಭೆಯಲ್ಲಿ ಆಡಳಿತಾಧಿಕಾರಿ ಅಮೀನಸಾಬ್ ಅತ್ತಾರ್, ಗಂಗಾವತಿ ಎಸಿಡಿಪಿಒ ಪ್ರಸನ್ನ ಕಲ್ಮನಿ ಹಾಗೂ ಕನಕಗಿರಿ ಪ್ರಭಾರ ಸಿಡಿಪಿಒ ಅವರಿಂದ ಇಲಾಖೆ ವರದಿ ಪಡೆದು, ಮೊಟ್ಟೆ ದರ ಹೆಚ್ಚಳಕ್ಕೆ ಸಂಬಂಧಿಸಿದಂತೆ ಜಿಪಂ ಸಿಇಒ ಅವರಿಗೆ ಪ್ರಸ್ತಾವನೆ ಸಲ್ಲಿಸಲು ಅವಕಾಶವಿದ್ದರೆ ಬಳಸಿಕೊಳ್ಳಿ. ಅಂಗನವಾಡಿಗಳ ನಿರ್ಮಾಣಕ್ಕೆ ತಾಪಂ ಅನಿರ್ಬಂಧಿತ ಅನುದಾನ ನೀಡಲಾಗುವುದು. ಪಟ್ಟಣದ ಕರಿಯಮ್ಮ ಕ್ಯಾಂಪ್‌ನಲ್ಲಿ 1 ವರ್ಷದಿಂದ ಸ್ಥಗಿತಗೊಂಡ ಅಂಗನವಾಡಿ ಕಾರ್ಯಾರಂಭಕ್ಕೆ ಡಿಡಿ ಅಮರೇಶಗೆ ಕರೆ ಮಾಡಿ ಸೂಚಿಸಿದರು. ತಾಲೂಕಿನ ನವಲಿ ಗ್ರಾಮದಲ್ಲಿ ಸಹಕಾರ ಇಲಾಖೆಗೆ ಸಂಬಂಧಿಸಿದ ಜಾಗದ ಸಮಸ್ಯೆ ಪರಿಹರಿಸಲು ಇಲಾಖೆ ಅಧಿಕಾರಿ ಇಬ್ರಾಹಿಂಗೆ ನಿರ್ದೇಶಿಸಿದರು. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಸ್ಟೆಲ್‌ಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ಪಶು ಸಂಗೋಪನಾ, ಆರೋಗ್ಯ ಸೇರಿ ಇತರೆ ಇಲಾಖೆಗಳಿಂದ ಪ್ರಗತಿ ವರದಿ ಪಡೆದರು.
ಅನುದಾನವಿಲ್ಲದೇ ಅಭಿವೃದ್ಧಿ ಕಷ್ಟ: ಗ್ರಾಪಂಗಳಿಗೆ 15ನೇ ಹಣಕಾಸು ಯೋಜನೆ ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಅಲ್ಲದೇ, 16ನೇ ಹಣಕಾಸು ಯೋಜನೆಯ ಅನುದಾನ ಬರದ ಕಾರಣ ಗ್ರಾಪಂಗಳಲ್ಲಿ ಅಭಿವೃದ್ಧಿ ಕಾರ್ಯ ನಡೆಸುವುದು ಕಷ್ಟಕರವಾಗಿದೆ ಎಂದು ಪಿಡಿಒ ಸಭೆಗೆ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net