ಸರ್ಕಾರಿ ಪದವಿ ಕಾಲೇಜಿಗೆ ದಾಖಲಾಗಿ

ಹನುಮಸಾಗರದ ಸಪಪೂ ಕಾಲೇಜಿಗೆ ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರ ತಂಡ ಭೇಟಿ ನೀಡಿ ಮಾಹಿತಿ ಒಳಗೊಂಡ ಕರಪತ್ರವನ್ನು ಉಪನ್ಯಾಸಕ ಲಕಪತಿ ರಾಠೋಡಗೆ ನೀಡಿತು. ಉಪನ್ಯಾಸಕರಾದ ಬೋಜರಾಜ್, ವಿಶ್ವನಾಥ ಕೋಳೂರ, ದುರುಗೇಶ, ಮಹಾಂತೇಶ ಗವಾರಿ, ನಿಂಗಪ್ಪ ಗೋಟೂರ ಉಪಸ್ಥಿತರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಉಪನ್ಯಾಸಕ ಬೊಜರಾಜ್ ಸಲಹೆ
  • ಹನುಮಸಾಗರ ಪದವಿ ಕಾಲೇಜಿನ ಉಪನ್ಯಾಸಕರ ತಂಡ ಭೇಟಿ
ಹನುಮಸಾಗರ: ಪಟ್ಟಣದ ಹಾಗೂ ಹನುಮನಾಳ ಸಪಪೂ ಕಾಲೇಜುಗಳಿಗೆ ಬುಧವಾರ ಕುಷ್ಟಗಿಯ ಸರ್ಕಾರಿ ಪದವಿ ಕಾಲೇಜಿನ ಉಪನ್ಯಾಸಕರ ತಂಡ ಭೇಟಿ ನೀಡಿ ಪದವಿ ಕಾಲೇಜಿನ ಬಗ್ಗೆ ಮನವರಿಕೆ ಮಾಡಿತು.
ಪದವಿ ಕಾಲೇಜಿನ ಉಪನ್ಯಾಸಕ ಬೊಜರಾಜ್ ಮಾತನಾಡಿ, ಸರ್ಕಾರಿ ಪದವಿ ಕಾಲೇಜಿನಲ್ಲಿ ಎಲ್ಲ ಮೂಲ ಸೌಲಭ್ಯಗಳಿವೆ. ಪಿಯು ನಂತರ ಅಧಿಕ ಶುಲ್ಕ ನೀಡಿ ಖಾಸಗಿ ಕಾಲೇಜುಗಳಿಗೆ ಸೇರುವ ಬದಲು ನಿಮಗೆ ಸಮೀಪವಿರುವ ಸರ್ಕಾರಿ ಪದವಿ ಕಾಲೇಜಿಗೆ ದಾಖಲಾಗಿ. ಕುಷ್ಟಗಿ ಸರ್ಕಾರಿ ಪದವಿ ಕಾಲೇಜಿನಲ್ಲಿ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ವಿಭಾಗಗಳಿದ್ದು, ಗುಣಾತ್ಮಕ ಶಿಕ್ಷಣ ನೀಡುವಲ್ಲಿ ಉಪನ್ಯಾಸಕರು ಕಾರ್ಯನಿರ್ವಹಿಸುತ್ತಿದ್ದಾರೆ.
ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣದ ಜತೆಯಲ್ಲಿ ವಸತಿ ನಿಲಯಗಳು, ಕಂಪ್ಯೂಟರ್ ತರಬೇತಿ, ಗ್ರಂಥಾಲಯ, ಆಟೋಟಗಳ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದರು. ಉಪನ್ಯಾಸಕರಾದ ವಿಶ್ವನಾಥ ಕೋಳೂರ, ದುರುಗೇಶ, ಮಹಾಂತೇಶ ಗವಾರಿ, ನಿಂಗಪ್ಪ ಗೋಟೂರ ತಂಡದಲ್ಲಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net