ಜ್ಯೂನಿಯರ್ ಕಾಲೇಜು ಮೈದಾನಕ್ಕೆ ಮಾಜಿ ಪ್ರಧಾನಿ ಇಂದಿರಾಗಾಂಧಿ ಬಂದಿದ್ದು, 2009ವರೆಗೂ ಅವರ ಹೆಸರಿನಲ್ಲಿ ಇಂದಿರಾಗಾಂಧಿ ಕಟ್ಟೆಯಿತ್ತು. ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ರಾಮಕೃಷ್ಣ ಹೆಗಡೆ, ಬಿ.ಎಸ್. ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಸಿದ್ದರಾಮಯ್ಯ ಸೇರಿ ರಾಜ್ಯ ಮತ್ತು ಕೇಂದ್ರದ ಹಲವು ಸಚಿವರು ಮೈದಾನದಲ್ಲಿ ಸಂಚರಿಸಿದ್ದಾರೆ. ಗೋಕಾಕ್ ಚಳವಳಿ ಸಂದರ್ಭದಲ್ಲಿ ಚಿತ್ರನಟ ಡಾ.ರಾಜ್, ಪುನೀತ್‌ರಾಜ (ಬಾಲನಟ),ಶಿವರಾಂ ಬಂದಿದ್ದರು. ಬಹಿರಂಗ ಭಾಷಣಕ್ಕಾಗಿ ಶ್ರುತಿ, ಸೌಂದರ್ಯ, ಪ್ರಕಾಶರಾಜ್, ಜಗ್ಗೇಶ, ಮಂಡ್ಯ ರಮೇಶ, ಗುರುರಾಜ್ ಹೊಸಕೋಟೆ ಇನ್ನೂ ಹಲವು ನಟರು ಬಂದಿದ್ದರು. ನೀನಾಸಂ, ಶಿವಸಂಚಾರ ಮತ್ತು ರಂಗಾಯಣ ಕಲಾವಿದರಿಗೆ ಬಯಲು ರಂಗಮಂದಿರ ಪ್ರಶಸ್ತ ಸ್ಥಳವಾಗಿದ್ದು, ರಂಗ ಮತ್ತು ಸಿನಿಮಾ ಕಲಾವಿದರಿಗೆ ಮೈದಾನ ವೇದಿಕೆಯಾಗಿತ್ತು.