ಕವಲೂರು: ಸಾವಿತ್ರಿಬಾಯಿ ಫುಲೆ ಮಕ್ಕಳು ಭೂಮಿಯ ಮೇಲಿನ ನಕ್ಷತ್ರಗಳು ಎಂಬುದಾಗಿ ಕರೆದ ಮಾತೆ ಎಂದು ಮುಖ್ಯಶಿಕ್ಷಕ ಜಿ.ಎಸ್.ಗೌಡರ್ ಹೇಳಿದರು.
ಗ್ರಾಮದ ಶ್ರೀಮತಿ ಗಿರಿಯಮ್ಮ ಪರಪ್ಪ ಹೆಬ್ಬಾಳ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಸಾವಿತ್ರಿಬಾಯಿ ಫುಲೆ ಅವರ ಜನ್ಮದಿನ ಆಚರಣೆ ಕಾರ್ಯಕ್ರಮದಲ್ಲಿ ಮಾತಣಾಡಿದರು.
ಸಾವಿತ್ರಿಬಾಯಿ ಫುಲೆ ಮಹಿಳೆಯರ ಶಿಕ್ಷಣಕ್ಕಾಗಿ ಶ್ರಮಿಸಿದ ಕಾರ್ಯಕರ್ತೆಯಾಗಿದ್ದರು ಮತ್ತು ಸಾಮಾಜಿಕವಾಗಿ ತಾರತಮ್ಯಗಳಿಂದ ಮುಕ್ತರಾಗಲು ಶಿಕ್ಷಣವನ್ನು ಪಡೆಯಲು ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿದರು ಎಂದರು.