ಮಕ್ಕಳ ಕಲಿಕೆ ಪ್ರೋತ್ಸಾಹಿಸಿ

ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಲಿಕಾ ಹಬ್ಬದಲ್ಲಿ ಶಿಕ್ಷಕರ ಸಂದ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ ಮಾತನಾಡಿದರು. ಬಿಇಒ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಯೋಗಾನಂದ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ್​, ಜಿಲ್ಲಾ ಸಹಕಾರಿ ಬಸವರಾಜ ತಾಲೂಕು ಅಧ್ಯಕ್ಷ ಹೊಳೆಬಸಯ್ಯ ಇದ್ದರು.
ಕೊಪ್ಪಳ ತಾಲೂಕಿನ ಬಿ.ಹೊಸಳ್ಳಿ ಗ್ರಾಮದಲ್ಲಿ ಗುರುವಾರ ನಡೆದ ಕಲಿಕಾ ಹಬ್ಬದಲ್ಲಿ ಶಿಕ್ಷಕರ ಸಂದ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ ಮಾತನಾಡಿದರು. ಬಿಇಒ ಹನುಮಂತಪ್ಪ, ಗ್ರಾಪಂ ಅಧ್ಯಕ್ಷ ಯೋಗಾನಂದ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ್​, ಜಿಲ್ಲಾ ಸಹಕಾರಿ ಬಸವರಾಜ ತಾಲೂಕು ಅಧ್ಯಕ್ಷ ಹೊಳೆಬಸಯ್ಯ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಇಒ ಹನುಮಂತಪ್ಪ ಸಲಹೆ
  • ಕ್ಲಸ್ಟರ್​ ಮಟ್ಟದ ಕಲಿಕಾ ಹಬ್ಬ
ಕೊಪ್ಪಳ: ಕಲಿಕ ಹಬ್ಬ ಮೂಲಕ ಕಲಿಕೆಯಲ್ಲಿ ಹಿಂದುಳಿದ ಮಕ್ಕಳನ್ನು ಗುರುತಿಸಿ ಪ್ರೋತ್ಸಾಹಿಸಿ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಹನುಮಂತಪ್ಪ ಎಚ್​.ಸಲಹೆ ನೀಡಿದರು.
ತಾಲೂಕಿನ ಬಿ.ಹೊಸಳ್ಳಿ ಗ್ರಾಮದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬಹದ್ದೂರ ಬಂಡಿ ಕ್ಲಸ್ಟರ್​ ಮಟ್ಟದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಮಕ್ಕಳಲ್ಲಿ ಕನಿಷ್ಠ ಕಲಿಕಾ ಮಟ್ಟ ಬೆಳೆಸಬೇಕು. ಅದಕ್ಕಾಗಿ ಹತ್ತಾರು ಯೋಜನೆಗಳಿವೆ. ಅವುಗಳನ್ನು ಶಿಕ್ಷಕರು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿ. ಕಲಿಕಾ ಹಬ್ಬ ಮೂಲಕ ಮಕ್ಕಳನ್ನು ಪ್ರೋತ್ಸಾಹಿಸಿ ಎಂದು ಸಲಹೆ ನೀಡಿದರು.
ಶಿಕ್ಷಕರ ಸಂದ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಕಮಲಾಪುರ ಮಾತನಾಡಿ, ಕ್ಲಸ್ಟರ್​ನಲ್ಲಿ ಉತ್ತಮ ಕಾರ್ಯಚಟುವಟಿಕೆ ನಡೆಯುತ್ತಿವೆ. ಸಮೂಹ ಸಂಪನ್ಮೂಲ ವ್ಯಕ್ತಿ ಬಸವ ಅವರು ಅರಳು ಮಲ್ಲಿಗೆ ಎಂಬ ವಿಶೆಷ ಮಾಸಪತ್ರಿಕೆ ರಚಿಸಿದ್ದಾರೆ, ಮಕ್ಕಳಿದಂದಲೇ ಚಿತ್ರ ಲೇಖನ ಬರೆಸಿದ್ದಾರೆ. ಅಲ್ಲದೇ ಶಿಕ್ಷಕರ ಸವಾಲುಗಳು, ಪರಿಹಾರ ವಿವರ ಒದಗಿಸಿದ್ದಾರೆ. ಇದೊಂದು ಮಾದರಿ ಕಾರ್ಯವೆಂದು ಶ್ಲಾಘಿಸಿದರು.
ಗ್ರಾಮದಲ್ಲಿ ಜೋಡೆತ್ತಿನ ಬಂಡಿ ಮೂಲಕ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ ಇನ್ನಿತರ ಕಲೆಗಳು ಗಮನ ಸೆಳೆದವು. ಮಕ್ಕಳು ಜಾಥಾ ಮೂಲಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ವಿದ್ಯಾರ್ಥಿಗಳು ಬಗೆ ಬಗೆ ವಸ್ತ್ರ ತೊಟ್ಟು ನಗೆ ಬೀರಿದರು.
ಗ್ರಾಪಂ ಅಧ್ಯಕ್ಷ ಯೋಗಾನಂದ, ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಶರಣಬಸನಗೌಡ ಪಾಟೀಲ್​, ಜಿಲ್ಲಾ ಸಹಕಾರಿ ಬಸವರಾಜ ತಾಲೂಕು ಅಧ್ಯಕ್ಷ ಹೊಳೆಬಸಯ್ಯ, ಜಿಲ್ಲಾ ಸಂಘಟನಾ ಕಾರ್ಯದರ್ಶಿ ಪೂರ್ಣಿಮಾ ತುಪ್ಪದ, ಸುಜಾತ ಕುರಿ, ಮುಖ್ಯ ಶಿಕ್ಷಕ ಕಳಕಪ್ಪ ಮೇಟಿ, ಶಿಕ್ಷಣ ಸಂಯೋಜಕ ವೀರೇಶ್​ ಅರಳಿಕಟ್ಟಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net