ಖಾತ್ರಿ ಯೋಜನೆಯಡಿ ಕೆಲಸ ಕೊಡಿ

ಕೊಪ್ಪಳ ತಾಪಂ ಆವರಣದಲ್ಲಿ ಇಒ ದುಂಡಪ್ಪ ತುರಾದಿಗೆ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಸಮಿತಿ ಅಧ್ಯಕ್ಷೆ ಯಲ್ಲಮ್ಮ ಹಾಗೂ ಕಾರ್ಯದರ್ಶಿ ಸುಂಕಪ್ಪ ಗದಗ ಮನವಿ ಸಲ್ಲಿಸಿದರು. ಹುಲುಗಪ್ಪ ಗೋಕಾವಿ, ಖಾಲೆಸಾಬ ಕರಡಿ, ಸುಶೀಲಮ್ಮ, ಮಹೇಶ, ಹುಸೇನ್‌ಸಾಬ ಇದ್ದರು.
ಕೊಪ್ಪಳ ತಾಪಂ ಆವರಣದಲ್ಲಿ ಇಒ ದುಂಡಪ್ಪ ತುರಾದಿಗೆ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಸಮಿತಿ ಅಧ್ಯಕ್ಷೆ ಯಲ್ಲಮ್ಮ ಹಾಗೂ ಕಾರ್ಯದರ್ಶಿ ಸುಂಕಪ್ಪ ಗದಗ ಮನವಿ ಸಲ್ಲಿಸಿದರು. ಹುಲುಗಪ್ಪ ಗೋಕಾವಿ, ಖಾಲೆಸಾಬ ಕರಡಿ, ಸುಶೀಲಮ್ಮ, ಮಹೇಶ, ಹುಸೇನ್‌ಸಾಬ ಇದ್ದರು.
Published on
ಕೊಪ್ಪಳ: ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿ ಕಾರ್ಮಿಕರಿಗೆ ಸಮರ್ಪಕ ಕೆಲಸ ಒದಗಿಸುವುದು ಹಾಗೂ ಬಾಕಿ ಕೂಲಿ ಹಣ ತಕ್ಷಣ ಬಿಡುಗಡೆಗೆ ಒತ್ತಾಯಿಸಿ ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಸಮಿತಿಯಿಂದ ಮಂಗಳವಾರ ಕೊಪ್ಪಳ ತಾಪಂ ಇಒ ದುಂಡಪ್ಪ ತುರಾದಿಗೆ ಮನವಿ ಸಲ್ಲಿಸಲಾಯಿತು.
ಸಂದ ಕಾರ್ಯದರ್ಶಿ ಸಂಕಪ್ಪ ಗದಗ ವಾತನಾಡಿ, ಗ್ರಾಮೀಣ ಪ್ರದೇಶದ ಜನರು ಉದ್ಯೋಗವಿಲ್ಲದೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ. ಗ್ರಾಮ ಪಂಚಾಯಿತಿಗಳು ತಾಂತ್ರಿಕ ದೋಷಗಳ ನೆಪ ಹೇಳಿ ಕಾರ್ಮಿಕರಿಗೆ ಕೆಲಸ ನೀಡಲು ಹಿಂದೇಟು ಹಾಕುತ್ತಿವೆ. ಫಾರಂ ನಂ. 06 ಸಲ್ಲಿಸಿ ತಿಂಗಳು ಕಳೆದರೂ ಕಾರ್ಮಿಕರಿಗೆ ಕೆಲಸ ನೀಡುತ್ತಿಲ್ಲ. ಇಡೀ ಊರಿನವರು ಅರ್ಜಿ ಸಲ್ಲಿಸಿದರೆ ವಾತ್ರ ಕೆಲಸ ನೀಡುತ್ತೇವೆ ಎನ್ನುವ ಪಂಚಾಯಿತಿಗಳ ನಿಯಮಬಾಹಿರ ಧೋರಣೆ ಕೈಬಿಡಬೇಕು. ಕೋಳೂರು, ಚಿಕ್ಕ ಸಿಂದೋಗಿ ಹಾಗೂ ಮಂಗಳಾಪುರ ಗ್ರಾಮಗಳ ಕಾರ್ಮಿಕರಿಗೆ ಕೂಡಲೇ ಉದ್ಯೋಗ ನೀಡಬೇಕು ಹಾಗೂ ಹೊಸದಾಗಿ ಅರ್ಜಿ ಸಲ್ಲಿಸಿದವರಿಗೆ ಜಾಬ್‌ಕಾರ್ಡ್ ವಿತರಿಸಬೇಕು ಎಂದರು.
ಲೋಪದೋಷಗಳಿಂದಾಗಿ ಹಾಗೂ ಎನ್.ಎಂ.ಆರ್. ನಲ್ಲಿನ ತಪ್ಪುಗಳಿಂದಾಗಿ ಕಾರ್ಮಿಕರಿಗೆ ಬರಬೇಕಾದ ಕೂಲಿ ಹಣ ಬಾಕಿ ಉಳಿದಿದೆ. ಇದನ್ನು ಕೂಡಲೇ ಪಾವತಿಸಬೇಕು. ಕೆಲಸ ವಾಡುವ ಸ್ಥಳಗಳಲ್ಲಿ ಕುಡಿವ ನೀರು, ನೆರಳು ಹಾಗೂ ಪ್ರಥಮ ಚಿಕಿತ್ಸೆಗಾಗಿ ಮೆಡಿಕಲ್ ಕಿಟ್ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ವ್ಯಕ್ತಪಡಿಸಿದರು.
ಕರ್ನಾಟಕ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂದ ತಾಲೂಕು ಸಮಿತಿ ಅಧ್ಯಕ್ಷೆ ಯಲ್ಲಮ್ಮ, ಸಂದ ಪದಾಧಿಕಾರಿಗಳಾದ ಹುಲುಗಪ್ಪ ಗೋಕಾವಿ, ಖಾಲೆಸಾಬ ಕರಡಿ, ಮುಮ್ತಾಬೇಗಂ ಕರಡಿ, ಸುಶೀಲಮ್ಮ, ಮಹೇಶ, ಹುಸೇನ್ ಸಾಬ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net