ಗಣೇಶ ಹಬ್ಬ ಆಚರಣೆಯಲ್ಲಿ ಸಂಸ್ಕೃತಿ-ಸಂಪ್ರದಾಯಕ್ಕೆ ಒತ್ತು ನೀಡಲಿ

ಗಂಗಾವತಿ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ನಿಮಿತ್ತ ಪ್ರತಿಷ್ಟಾಪನೆ ಸಮಿತಿಯವರೊಂದಿಗೆ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಶುಕ್ರವಾರ ಮಾತನಾಡಿದರು. ಪಿಐ ಪ್ರಕಾಶ ಆರ್.ಯಾತನೂರ್, ಪಿಎಸೈ ಜಿ.ಟಿ.ನಾಗರಾಜ್ ಇತರರಿದ್ದರು.
ಗಂಗಾವತಿ ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ನಿಮಿತ್ತ ಪ್ರತಿಷ್ಟಾಪನೆ ಸಮಿತಿಯವರೊಂದಿಗೆ ಹಮ್ಮಿಕೊಂಡ ಪೂರ್ವಭಾವಿ ಸಭೆಯಲ್ಲಿ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಶುಕ್ರವಾರ ಮಾತನಾಡಿದರು. ಪಿಐ ಪ್ರಕಾಶ ಆರ್.ಯಾತನೂರ್, ಪಿಎಸೈ ಜಿ.ಟಿ.ನಾಗರಾಜ್ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿವೈಎಸ್ಪಿ ನ್ಯಾಮಗೌಡ ಸಲಹೆ
  • ಗಂಗಾವತಿ ಪ್ರತಿಷ್ಠಾಪನೆ ಸಮಿತಿಯವರೊಂದಿಗೆ ಸಭೆ
ಗಂಗಾವತಿ: ಗಣೇಶ ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸಬೇಕಿದ್ದು, ಸಂಸ್ಕೃತಿ ಮತ್ತು ಸಂಪ್ರದಾಯಕ್ಕೆ ಒತ್ತು ನೀಡಿ 11ದಿನಕ್ಕೆ ಎಲ್ಲ ಗಣೇಶ ಮೂರ್ತಿಗಳು ವಿಸರ್ಜಿಸಲು ಯೋಜನೆ ರೂಪಿಸುವಂತೆ ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಸಲಹೆ ನೀಡಿದರು.
ಪೊಲೀಸ್ ಠಾಣೆ ಆವರಣದಲ್ಲಿ ಗಣೇಶ ಹಬ್ಬದ ನಿಮಿತ್ತ ಪ್ರತಿಷ್ಠಾಪನೆ ಸಮಿತಿಯವರೊಂದಿಗೆ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ಗಣೇಶ ಹಬ್ಬಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ಸಂಪ್ರದಾಯಬದ್ಧವಾಗಿ ಅಚರಿಸಲಾಗುತ್ತಿತ್ತು. ಇತ್ತೀಚೆಗೆ ಸಂಪ್ರದಾಯ ಮರೆಯಾಗುತ್ತಿದ್ದು, ಪರಿಸರಕ್ಕೆ ಮಾರಕವಾದ ಪಿಒಪಿ ಗಣೇಶ ಮತ್ತು ಡಿಜೆ ಅಬ್ಬರ ಹೆಚ್ಚಿದೆ. ಈ ಬಾರಿ ಹಬ್ಬವನ್ನು ಅರ್ಥಪೂರ್ಣವಾಗಿ ಅಚರಿಸುವ ನಿಟ್ಟಿನಲ್ಲಿ ಸಭೆ ಆಯೋಜಿಸಿದ್ದು, ಮಣ್ಣಿನ ಗಣೇಶ ಮೂರ್ತಿ ಪ್ರತಿಷ್ಠಾಪಿಸಿ. ಡಿಜೆ ಕೈಬಿಟ್ಟು, ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಿ.
ಕಾಮಿಡಿ ಶೋ, ಗಾಯನ, ನಾಟಕ, ನೃತ್ಯ ಸೇರಿದಂತೆ ಕಲಾವಿದರನ್ನು ಪ್ರೋತ್ಸಾಹಿಸುವಂತ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿ. ಸ್ಥಳೀಯ, ರಾಜ್ಯ ಮತ್ತು ಅಂತರಾಷ್ಟ್ರೀಯ ಕಲಾವಿದರನ್ನು ಆಹ್ವಾನಿಸಿ, ಮನೆ ಮಂದಿಯೆಲ್ಲ ನೋಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಿ. ಎಲ್ಲ ಗಣೇಶ ಮೂರ್ತಿಗಳು 11ನೇ ದಿನಕ್ಕೆ ಹೋಗುವ ವ್ಯವಸ್ಥೆಯಾಗಬೇಕು. ಜೋಕುಮಾರಸ್ವಾಮಿ ಬರುವಷ್ಟರಲ್ಲಿ ಗಣೇಶ ಮೂರ್ತಿಗಳು ವಿಸರ್ಜನೆಯಾದರೆ ಹಬ್ಬಕ್ಕೂ ಅರ್ಥ ಬರಲಿದೆ. ಈ ಹಿಂದೆ ಏನಾಗಿತ್ತೂ ಎಂಬುವುದರ ಬಗ್ಗೆ ಯೋಚಿಸುವುದರ ಬದಲೂ ಬದಲಾಗೋಣ.ಹಬ್ಬಕ್ಕೆ ಐತಿಹಾಸಿಕ ಮೆರಗು ನೀಡುವ ಜವಾಬ್ದಾರಿ ಸಮಿತಿಗಳ ಮೇಲಿದೆ. ಪಿಒಪಿ ಗಣೇಶ ಮತ್ತು ಡಿಜೆಗೆ ಲಕ್ಷಗಟ್ಟಲೇ ಮುಂಗಡ ಹಣ ನೀಡುವ ಸಮಿತಿಯವರ ಗಮನಕ್ಕಾಗಿ ಸಭೆ ಆಯೋಜಿಸಿದ್ದು, ಯೋಚಿಸಿ ಉತ್ತಮ ನಿರ್ಧಾರಕ್ಕೆ ಬರುವುದು ಸೂಕ್ತ ಎಂದರು.
ನಗರ ಪಿಐ ಪ್ರಕಾಶ ಆರ್ ಯಾತನೂರ್ ಮಾತನಾಡಿ, ಪ್ರತಿಷ್ಟಾಪನೆ ಸಮಿತಿಯವರು ಒಮ್ಮತಾಭಿಪ್ರಾಯದ ಮೇರೆಗೆ ಹಬ್ಬವನ್ನು ಸಂಸ್ಕೃತಿ ಮತ್ತು ಸಂಪ್ರದಾಯಬದ್ಧವಾಗಿ ಆಚರಿಸೋಣ. ಇಲಾಖೆ ಸಲಹೆಯನ್ನು ಸಕಾರತ್ಮಕ ರೀತಿಯಲ್ಲಿ ಪಡೆದುಕೊಳ್ಳಬೇಕಿದ್ದು, ಸಾರ್ವಜನಿಕರು ಮೆಚ್ಚುವ ರೀತಿಯಲ್ಲಿ ಹಬ್ಬ ಅಚರಿಸೋಣ. ಒಮ್ಮತಾಭಿಪ್ರಾಯಕ್ಕೆ ಜು.18ಕ್ಕೆ ಮತ್ತೊಮ್ಮೆ ಸಭೆ ಆಯೋಜಿಸಲಾಗುವುದು ಎಂದರು.
ಪಿಎಸೈ ಜಿ.ಟಿ.ನಾಗರಾಜ್, ಪ್ರತಿಷ್ಟಾಪನೆ ಸಮಿತಿ ಪದಾಧಿಕಾರಿಗಳಾದ ದುರುಗಪ್ಪ ನಾಯಕ, ಶಾಂತಯ್ಯಸ್ವಾಮಿ, ಪ್ರಕಾಶ, ಮಹೆಬೂಬ್, ಎಚ್.ಕೃಷ್ಣ, ಷಣ್ಮುಖಪ್ಪ ನಾಯಕ ಇತರರಿದ್ದರು.
"

ಎಲ್ಲ ಪ್ರತಿಷ್ಟಾಪನೆ ಸಮಿತಿ ಒಗ್ಗಟ್ಟಾಗಿ ಅರ್ಥಪೂರ್ಣವಾಗಿ ಗಣೇಶ ಹಬ್ಬ ಅಚರಿಸಬೇಕಿದ್ದು, ತಾಲೂಕು ಕ್ರೀಡಾಂಗಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವ ಮೂಲಕ ಜನರಿಗೆ ಮಾದರಿಯಾಗಲಿ.

— > ಜೆ.ಎಸ್.ನ್ಯಾಮಗೌಡರ್ ಡಿವೈಎಸ್ಪಿ, ಗಂಗಾವತಿ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net