ಕೊಪ್ಪಳದಲ್ಲಿ ಆಯೋಜಿಸಿದ್ದ ರಾಜ್ಯ ಮಟ್ಟದ ಮೂರು ದಿನಗಳ ಸುಧಾರಿತ ಸಂಶೋಧನೆ ಪರಿಕರಗಳು, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸವಾರೋಪದಲ್ಲಿ ಧಾರವಾಡದ ಸಿಎಂಆರ್‌ಡಿ ಸಹಾಯಕ ಪ್ರಾಧ್ಯಾಪಕ ದುಂಡಪ್ಪ ಬಡ್ಲಕ್ಕನವರ ವಾತನಾಡಿದರು. ಪ್ರಾಚಾರ್ಯ ಡಾ. ವೈ. ಬಿ. ಅಂಗಡಿ, ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಪ್ರಕಾಶ್ ಗೌಡ, ಪಿಎಂ-ಉಷಾ ಸಂಚಾಲಕಿ ಪ್ರೊ.ಸುಧಾ ಹೆಗಡೆ, ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಹಿರೇಮಠ ಇತರರಿದ್ದರು.
ದುಂಡಪ್ಪ ಬಡ್ಲಕ್ಕನವರ ಹೇಳಿಕೆ ಅಭಿವೃದ್ಧಿ ಕಾರ್ಯಕ್ರಮ ಸವಾರೋಪ
ಕೊಪ್ಪಳ : ಆಧುನಿಕ ಜಗತ್ತು ಸಂಶೋಧನೆಯಿಂದ ಬದಲಾವಣೆಯಾಗಿದೆ. ಸಂಶೋಧನೆಯು ಸವಾಜವನ್ನು ಅರ್ಥ ವಾಡಿಕೊಳ್ಳುವುದಕ್ಕೆ ಸಹಾಯವಾಗುತ್ತದೆ ಎಂದು ಧಾರವಾಡದ ಸಿಎಂಆರ್‌ಡಿ ಸಹಾಯಕ ಪ್ರಾಧ್ಯಾಪಕ ದುಂಡಪ್ಪ ಬಡ್ಲಕ್ಕನವರ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶನಿವಾರ ರಾಜ್ಯ ಮಟ್ಟದ ಮೂರು ದಿನಗಳ ಸುಧಾರಿತ ಸಂಶೋಧನೆ ಪರಿಕರಗಳು, ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮದ ಸವಾರೋಪದಲ್ಲಿ ವಾತನಾಡಿದರು. ಕಾಲಕ್ಕೆ ತಕ್ಕಂತೆ ಆಗುವ ಬದಲಾವಣೆಗಳನ್ನು ಉಪನ್ಯಾಸಕರು ಅಳವಡಿಸಿಕೊಳ್ಳಬೇಕು ಎಂದರು.
ಕಾಲೇಜಿನ ಐಕ್ಯೂಎಸಿ ಸಂಚಾಲಕ ಪ್ರೊ.ಪ್ರಕಾಶ್ ಗೌಡ ವಾತನಾಡಿ, ಬಹಳ ಕಡಿಮೆ ಸಮಯದಲ್ಲಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಆದರೂ ಕೂಡ ಅಚ್ಚುಕಟ್ಟಾಗಿ ಆಯೋಜನೆ ವಾಡಲಾಗಿದೆ. ವಾಹಿತಿ ಸಂವಹನ ತಂತ್ರಜ್ಞಾನ ಬಳಸಿಕೊಂಡು ಈ ಕಾರ್ಯಕ್ರಮ ವಾಡಲಾಗಿದೆ. ಈ ರೀತಿಯ ಕಾರ್ಯಕ್ರಮಗಳನ್ನು ಪ್ರಾಧ್ಯಾಪಕರು ಉಪಯೋಗ ವಾಡಿಕೊಳ್ಳಬೇಕು ಎಂದು ಹೇಳಿದರು.
ಪ್ರಾಚಾರ್ಯ ಡಾ. ವೈ. ಬಿ. ಅಂಗಡಿ ವಾತನಾಡಿ, ಇಂದಿನ ವಿದ್ಯಾರ್ಥಿಗಳಿಗೆ ಮತ್ತು ಪ್ರಾಧ್ಯಾಪಕರಿಗೆ ತಂತ್ರಜ್ಞಾನ ಸೇರಿದಂತೆ ಇನ್ನಿತರ ಅವಕಾಶಗಳು ಬಹಳ ಇವೆ. ಅವುಗಳನ್ನು ಬಳಸಿಕೊಳ್ಳಬೇಕು. ಈ ರೀತಿಯ ಕಾರ್ಯಕ್ರಮಗಳು ಕೊಟ್ಟಿರುವ ಅನುಭವಗಳನ್ನು ಮರೆಯಬಾರದು. ಅಧ್ಯಾಪಕರು ಪಾಠದ ಜತೆಗೆ ಸಂಶೋಧನೆಯನ್ನು ವಾಡಿ ಎಂದು ಸಲಹೆ ನೀಡಿದರು. ಕಾರ್ಯಕ್ರಮದಲ್ಲಿ ಪಾಲ್ಗೊಂಡವರಿಗೆ ಪ್ರವಾಣ ಪತ್ರಗಳನ್ನು ವಿತರಿಸಲಾಯಿತು.
ಇಂಗ್ಲಿಷ್ ವಿಭಾಗದ ಮುಖ್ಯಸ್ಥ ಡಾ. ಮೃತ್ಯುಂಜಯ ಹಿರೇಮಠ, ಪಿಎಂ-ಉಷಾ ಸಂಚಾಲಕಿ ಪ್ರೊ.ಸುಧಾ ಹೆಗಡೆ, ಪ್ರಾಧ್ಯಾಪಕರಾದ ಡಾ. ಉಮೇಶ ಅಂಗಡಿ, ಡಾ.ಬಾಲಾಜಿ, ಮಂಜುಳಾ ಇತರರಿದ್ದರು.