ಶಿಕ್ಷಣದೊಂದಿಗೆ ಕೌಶಲ ಅಳವಡಿಸಿಕೊಳ್ಳಿ

ಕೊಪ್ಪಳದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳ.
ಕೊಪ್ಪಳದಲ್ಲಿ ಶುಕ್ರವಾರ ನಡೆದ ಉದ್ಯೋಗ ಮೇಳ.
Published on

ಪ್ರಮುಖ ಮುಖ್ಯಾಂಶಗಳು

  • ಆಯುಕ್ತ ಡಾ.ಗೋಪಾಲಕೃಷ್ಣ ಹೇಳಿಕೆ
ಕೊಪ್ಪಳ: ಶಿಕ್ಷಣದೊಂದಿಗೆ ಕೌಶಲ ಅಳವಡಿಸಿಕೊಳ್ಳುವುದರಿಂದ ಉದ್ಯೋಗ ಪಡೆದುಕೊಳ್ಳುವ ಸಾಧ್ಯತೆ ಅಧಿಕ ಎಂದು ಕಾಲೇಜು ಶಿಕ್ಷಣ ಆಯುಕ್ತ ಡಾ.ಗೋಪಾಲಕೃಷ್ಣ ಎಚ್​. ಹೇಳಿದರು.
ನಗರದ ಸರ್ಕಾರಿ ಪದವಿ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಉದ್ಯೋಗ ಮೇಳದಲ್ಲಿ ವರ್ಚುವಲ್​ ವೇದಿಕೆ ಮೂಲಕ ಭಾಗಿಯಾಗಿ ಮಾತನಾಡಿದರು.
ಪದವಿ ಜತೆಗೆ ಕೌಶಲ ತರಬೇತಿ ಪಡೆದವರಿಗಾಗಿ ಮೇಳ ಆಯೋಜಿಸಲಾಗಿದೆ. ವಿದ್ಯಾರ್ಥಿಗಳಿಗೆ ಕಂಪನಿಯವರು ಒಳ್ಳೆಯ ಉದ್ಯೋಗ ಹಾಗೂ ಉತ್ತಮ ವೇತನ ನೀಡಬೇಕು. ಕೊಪ್ಪಳ ವಿವಿ ವ್ಯಾಪ್ತಿಯ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳಿಗಾಗಿ ಮೇಳ ಆಯೋಜಿಸಿದ್ದು ಉತ್ತಮ ಕೆಲಸ. ಇತರ ಜಿಲ್ಲೆಗಳಲ್ಲೂ ಮೇಲ ಆಯೋಜನೆಗೆ ಸೂಚಿಸಲಾಗುವುದು ಎಂದರು.
ಮೇಳದಲ್ಲಿ 900 ವಿದ್ಯಾರ್ಥಿಗಳು ನೋಂದಣಿ ಮಾಡಿಸಿದರು. ಪ್ರಾಚಾರ್ಯ ವೈ.ಬಿ.ಅಂಗಡಿ, ಬೋಧಕ ಸಿಬ್ಬಂದಿ ಪ್ರಕಾಶ್​ ಗೌಡ, ಡಾ.ಉಮೇಶ್​ ಅಂಗಡಿ, ಅನಿತಾ ಪಾಟೀಲ್​, ಡಾ.ಬಾಲಾಜಿ, ಡಾ.ಮಂಜುನಾಥ್​ ಅರೇಂಟನೂರ್​, ಯಮನೂರಪ್ಪ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net