ಚುನಾವಣೆ ಪ್ರಜಾಪ್ರಭುತ್ವ ವ್ಯವಸ್ಥೆಯ ಬುನಾದಿ

ಕುಷ್ಟಗಿ ತಾಲೂಕಿನ ಬಿಜಕಲ್‌ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ರಚನೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು.
ಕುಷ್ಟಗಿ ತಾಲೂಕಿನ ಬಿಜಕಲ್‌ನ ಸರ್ಕಾರಿ ಪ್ರೌಢ ಶಾಲೆಯಲ್ಲಿ ನಡೆದ ಶಾಲಾ ಸಂಸತ್ ರಚನೆ ಪ್ರಕ್ರಿಯೆಯಲ್ಲಿ ವಿದ್ಯಾರ್ಥಿಗಳು ಮತ ಚಲಾಯಿಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಮುಖ್ಯಶಿಕ್ಷಕ ಬಸವರಾಜ ಬಾಗಲಿ ಅನಿಸಿಕೆ
  • ಶಾಲಾ ಸಂಸತ್ ರಚನೆ
ಕುಷ್ಟಗಿ: ನಮ್ಮನ್ನಾಳುವ ಪ್ರತಿನಿಧಿಗಳನ್ನು ನಾವೇ ಆರಿಸಿಕೊಳ್ಳುವ ಪದ್ಧತಿಯೇ ಚುನಾವಣೆ. ಪ್ರಜಾಪ್ರಭುತ್ವ ವ್ಯವಸ್ಥೆಯ ಭದ್ರ ಬುನಾದಿ ಎಂದು ಮುಖ್ಯಶಿಕ್ಷಕ ಬಸವರಾಜ ಬಾಗಲಿ ಹೇಳಿದರು.
ತಾಲೂಕಿನ ಬಿಜಕಲ್ ಸರ್ಕಾರಿ ಪ್ರೌಢ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಸಂಸತ್ ರಚನೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸಾರ್ವತ್ರಿಕ ಚುನಾವಣೆ ಮಾದರಿಯಲ್ಲೇ ಶಾಲಾ ಸಂಸತ್ ಚುನಾವಣೆ ಪ್ರಕ್ರಿಯೆ ನಡೆಸಲಾಗಿದ್ದು, ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಚುನಾವಣಾ ಪ್ರಕ್ರಿಯೆಯಾಗಿದೆ. ಭವಿಷ್ಯದ ಪ್ರಜೆಗಳಾಗಿ ಪ್ರತಿನಿಧಿಗಳ ಆಯ್ಕೆ ಮಾಡುವುದನ್ನು ತಿಳಿಸಲಾಗುತ್ತಿದೆ. ಪೂರ್ವಗ್ರಹ ಪೀಡಿತರಾಗದೆ ಮತದಾನ ಮಾಡಬೇಕು ಎನ್ನುವುದು ಈ ಪ್ರಕ್ರಿಯೆಯ ಪರಿಕಲ್ಪನೆ ಎಂದರು.
ಮತದಾರರ ಸಾಕ್ಷರತಾ ಕ್ಲಬ್‌ನ (ಈಎಲ್‌ಸಿ) ಉಸ್ತುವಾರಿ ಶಿಕ್ಷಕ ಪ್ರಸನ್ನಕುಮಾರ್ ಭಿಕ್ಷಾವತಿಮಠ ಮಾತನಾಡಿ, ಚುನಾವಣಾ ನಿಯಮಗಳನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು. ಯಾವುದೇ ಮತ ಅಸಿಂಧು ಆಗದಂತೆ ನೋಡಿಕೊಳ್ಳಬೇಕು ಎಂದು ತಿಳಿಸಿದರು. ವಿದ್ಯಾರ್ಥಿನಿ ಅನಿತಾ ಶರಣಪ್ಪ ಯಲಬುರ್ತಿ ಪ್ರಧಾನಮಂತ್ರಿ ಸ್ಥಾನಕ್ಕೆ ಆಯ್ಕೆಯಾದರು.
ಎಸ್ಡಿಎಂಸಿ ಅಧ್ಯಕ್ಷ ವೀರನಗೌಡ ಪೋಲಿಸ್ ಪಾಟೀಲ್, ಸದಸ್ಯ ಸಿದ್ದಪ್ಪ ಛಲವಾದಿ, ಶಿಕ್ಷಕರಾದ ಸಂತೋಷ್ ನಾಗಲೋಟಿ, ವಿಜಯಲಕ್ಷ್ಮೀ ದೇಸಾಯಿ, ಪ್ರಮುಖರಾದ ಶ್ರೀಧರ್ ವಂಕಲಕುಂಟಿ, ಮೌನೇಶ್ ಬಡಿಗೇರ್, ವಿಜಯಕುಮಾರ್ ಬಿರಾದಾರ, ಶಶಿಧರ ಗೊರಬಾಳ, ಹಂಪಯ್ಯ ಜಂಬಲದಿನ್ನಿ , ವೈ.ಬಿ.ಸಂಗೀತಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net