ಕೇಸರಹಟ್ಟಿ ಗ್ರಾಮದ ಅವಿವಾಹಿತ 33 ವರ್ಷದ ದೇವರಾಜ ಮಾ.ಪಾ. ಕೊಲೆಯಾದ ವ್ಯಕ್ತಿ. ಈತ ಆಸ್ತಿಗಾಗಿ ಆಗಾಗ ಕುಡಿದು ಬಂದು ಮನೆಯಲ್ಲಿ ಗಲಾಟೆ ಮಾಡುತ್ತಿದ್ದನು. ಜೂ.28ರ ರಾತ್ರಿ ಕುಡಿದು ಮನೆಗೆ ಬಂದ ದೇವರಾಜ, ಹಣ, ಆಸ್ತಿಗಾಗಿ ಗಲಾಟೆ ಮಾಡುತ್ತಿದ್ದಾಗ ಅಣ್ಣನಾದ ಅಯ್ಯನಗೌಡ, ಮಾವನಾದ ಉಪ್ಪಿನ ಬೆಟಗೇರಿಯ ಗಂಗಾಧರ ಮಾ.ಪಾ. ಹೊಡೆದಿದ್ದು, ಸ್ಥಳದಲ್ಲಿಯೇ ದೇವರಾಜ ಮೃತಪಟ್ಟಿದ್ದಾನೆ. ಆಗ ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಆರೋಪಿಗಳು ಶವವನ್ನು ಕೌದಿಯಲ್ಲಿ ಸುತ್ತಿಕೊಂಡು ಬೈಕ್‌ನಲ್ಲಿ ಚಿರ್ಚನಗುಡ್ಡ ತಾಂಡಾದ ಗುಡ್ಡಕ್ಕೆ ತಂದು ಪೆಟ್ರೋಲ್ ಸುರಿದು ಸುಟ್ಟಿರುವುದನ್ನು ತನಿಖೆಯಲ್ಲಿ ಒಪ್ಪಿಕೊಂಡಿದ್ದಾರೆ.