ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್ ಆವಿಷ್ಕಾರ

ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಸೀಡ್ಲಿಂಗ್ ಲ್ಯಾಬ್ ಆವಿಷ್ಕರಿಸಿದ ಟೀಚರ್ ಅಸಿಸ್ಟಂಟ್ ಶೈಕ್ಷಣಿಕ ಆ್ಯಪ್‌ನ್ನು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಬಿಡುಗಡೆಗೊಳಿಸಿದರು. ಸಿಇಒ ಶಾಂತಿ ಕುರುಪಾಟಿ, ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ ಇತರರಿದ್ದರು.
ಗಂಗಾವತಿ ತಾಲೂಕಿನ ವಡ್ಡರಹಟ್ಟಿ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಸೀಡ್ಲಿಂಗ್ ಲ್ಯಾಬ್ ಆವಿಷ್ಕರಿಸಿದ ಟೀಚರ್ ಅಸಿಸ್ಟಂಟ್ ಶೈಕ್ಷಣಿಕ ಆ್ಯಪ್‌ನ್ನು ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಬಿಡುಗಡೆಗೊಳಿಸಿದರು. ಸಿಇಒ ಶಾಂತಿ ಕುರುಪಾಟಿ, ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬೋಧನೆ
  • ಹೆಚ್ಚುವರಿ
  • ಕೆಲಸ
* ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿಕೆ ಸ್‌ಟಾವೇರ್ ಕಂಪನಿ ಆರಂಭ
ಗಂಗಾವತಿ: ಗ್ರಾಮೀಣ ಭಾಗ ಕೇಂದ್ರವಾಗಿಟ್ಟುಕೊಂಡು ಗುಣಮಟ್ಟದ ಶಿಕ್ಷಣ ನೀಡುತ್ತಿರುವ ಶ್ರೀ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆ ಸ್‌ಟಾವೇರ್ ಕಂಪನಿ ಆರಂಭಿಸಿದ್ದು, ಶಿಕ್ಷಣಕ್ಕೆ ಸಂಬಂಧಿಸಿದ ಆ್ಯಪ್‌ಗಳನ್ನು ಆವಿಷ್ಕಾರಗೊಳಿಸುತ್ತಿದೆ ಎಂದು ಸಂಸ್ಥೆ ಅಧ್ಯಕ್ಷ ಸೂರಿಬಾಬು ನೆಕ್ಕಂಟಿ ಹೇಳಿದರು.
ತಾಲೂಕಿನ ವಡ್ಡರಹಟ್ಟಿಯ ಶ್ರೀ ವಿದ್ಯಾನಿಕೇತನ ಪದವಿ ಕಾಲೇಜಿನಲ್ಲಿ ಸೀಡ್ಲಿಂಗ್ ಲ್ಯಾಬ್ ಆವಿಷ್ಕರಿಸಿದ ಟೀಚರ್ ಅಸಿಸ್ಟೆಂಟ್ ಶೈಕ್ಷಣಿಕ ಆ್ಯಪ್‌ನ್ನು ಮಂಗಳವಾರ ಬಿಡುಗಡೆಗೊಳಿಸಿ ಮಾತನಾಡಿದರು.
ಇತ್ತೀಚಿನ ದಿನಗಳಲ್ಲಿ ಎಲ್ಲ ಶಾಲೆಗಳಲ್ಲಿನ ಶಿಕ್ಷಕರಿಗೆ ಬೋಧನೆಗಿಂತ ಹೆಚ್ಚುವರಿ ಕೆಲಸಗಳಿಗೆ ಹೊಂದಾಣಿಕೆ ಮಾಡಿಕೊಳ್ಳುವ ಸ್ಥಿತಿ ಬಂದಿದೆ. ಶಿಕ್ಷಕರನ್ನು ಬೋಧನೆಯತ್ತ ಸೀಮಿತಗೊಳಿಸಿದರೆ ಶೈಕ್ಷಣಿಕ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬಹುದಾಗಿದೆ. ಸಂಸ್ಥೆಯಿಂದ ಆವಿಷ್ಕರಿಸಿದ ಹೊಸ ಆ್ಯಪ್ ಶಿಕ್ಷಕರ ಜತೆಗೆ ಪಾಲಕರು ಮತ್ತು ವಿದ್ಯಾರ್ಥಿಗಳಿಗೆ ಅನುಕೂಲವಾಗಿದೆ.
ಮೌಲ್ಯಮಾಪನ ಗುರಿಯಾಗಿಟ್ಟುಕೊಂಡು ರೂಪಿಸಲಾಗಿದ್ದು, ಬರವಣಿಗೆಯ ಉತ್ತರ ಪತ್ರಿಕೆಗಳನ್ನು ಮೌಲ್ಯ ಮಾಪನ ಮಾಡುವ ಸಾಮರ್ಥ್ಯವಿದೆ. ಅದರೊಂದಿಗೆ ಉತ್ತರದಲ್ಲಿರುವ ತಪ್ಪುಗಳು, ಏನು ಬರೆಯಬಹುದಾಗಿತ್ತು ? ವಿದ್ಯಾರ್ಥಿಗಳು ಮತ್ತು ಪಾಲಕರಿಗೂ ಕಿವಿ ಮಾತು ಹೇಳಲಿದೆ. ಮಕ್ಕಳ ಪ್ರತಿಯೊಂದು ಶೈಕ್ಷಣಿಕ ಸಾಮರ್ಥ್ಯವನ್ನು ಕಾಲಕಾಲಕ್ಕೆ ತಿಳಿಸುವ ಆ್ಯಪ್ ಪಾಲಕರಿಗೂ ವರದಾನವಾಗಿದೆ. ಅದರೊಂದಿಗೆ ಶಿಕ್ಷಕರ ಲೆಸನ್ ಪ್ಲಾನ್, ಸ್ಟಡಿಮಟಿರಿಯಲ್, ಸಿದ್ಧತೆ, ಟೀಚಿಂಗ್ ಆ್ಯಡ್ಸ್ ಸೇರಿ ಬೋಧನೆಗೆ ಪೂರಕವಾದ ಎಲ್ಲ ಅಂಶಗಳನ್ನು ಹೊಸ ಆ್ಯಪ್ ನೀಡಲಿದೆ.
ಮಕ್ಕಳಲ್ಲಿರುವ ಕೌಶಲ ಗುರುತಿಸಲಿದ್ದು, ಎಲ್ಲ ಅಂಶಗಳನ್ನು ಕ್ಷಣಾರ್ಧದಲ್ಲಿ ವಿಶ್ಲೇಷಿಸಲಿದೆ. ಈಗಾಗಲೇ ವಿದ್ಯಾನಿಕೇತನ ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಪ್ರಾಯೋಗಿಕವಾಗಿ ಅಳವಡಿಸಿಕೊಳ್ಳಲಾಗಿದ್ದು, ಇತರೆ ಶಾಲೆಗಳಿಗೂ ಒದಗಿಸಲು ಸಂಸ್ಥೆ ಸಿದ್ಧವಿದೆ. ಬರಹದ ಮೌಲ್ಯಮಾಪನ ಆ್ಯಪ್ ದೇಶದಲ್ಲಿ ಇದೇ ಮೊದಲು. ಸ್‌ಟಾವೇರ್ ಕಂಪನಿ ಆರಂಭದಿಂದ ಪ್ಲೇಸ್ಮೆಂಟ್‌ಗಳಾಗುತ್ತಿದ್ದು, ಕೆಲ ಸಂಸ್ಥೆಗಳು ಇಲ್ಲಿಂದಲೇ ಪ್ಲೇಸ್ಮೆಂಟ್ ಮಾಡಲು ಉತ್ಸುಕ ಹೊಂದಿವೆ ಎಂದರು.
ಸಾಫ್ಟ್‌ವೇರ್ ಕಂಪನಿ ಉದ್ದೇಶ ಮತ್ತು ಹೊಸ ಆ್ಯಪ್ ಕುರಿತು ಸೀಡ್ಲಿಂಗ್ ಲ್ಯಾಬ್ ಸಿಇಒ ಶಾಂತಿ ಕುರುಪಾಟಿ ಮಾಹಿತಿ ನೀಡಿದರು. ಆ್ಯಪ್ ಕಾರ್ಯನಿರ್ವಹಣೆ ಕುರಿತು ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆ ಉಪಾಧ್ಯಕ್ಷ ಆದರ್ಶ ನೆಕ್ಕಂಟಿ, ಪ್ರಾಚಾರ್ಯರಾದ ಉಮಾಶಂಕರರಾವ್, ಜಗನ್ನಾಥರಾವ್, ಕೆ.ಎಸ್.ಮಲ್ಲಿಕಾರ್ಜುನ, ಅಭಿಷೇಕ, ಶೈಕ್ಷಣಿಕ ನಿರ್ದೇಶಕಿ ಎಂ.ನಳಿನಿ ಇತರರಿದ್ದರು.
"

ಗ್ರಾಮೀಣ ಭಾಗವನ್ನು ಗುರಿಯಾಗಿಟ್ಟುಕೊಂಡು ಸೀಡ್ಲಿಂಗ್ ಲ್ಯಾಬ್ ಸಾಫ್ಟ್‌ವೇರ್ ಕಂಪನಿ ಆರಂಭಿಸಿದ್ದು, ಬೆಂಗಳೂರಿನಲ್ಲಿ ಕಚೇರಿ ಹೊಂದಿರುವ ಕಂಪನಿ ಶೀಘ್ರವೇ ವಡ್ಡರಹಟ್ಟಿಯಲ್ಲೂ ಕಾರ್ಯಾರಂಭ ಮಾಡಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net