ತಾಲೂಕಿನ ಹೊಸಲಿಂಗಾಪುರ ಅಂಗನವಾಡಿ ಕೇಂದ್ರಗಳಲ್ಲಿ ಹಮ್ಮಿಕೊಂಡ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣದಿಂದ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಕ್ಕಳಿಗೆ ನೋಟ್ ಬುಕ್ ವಿತರಿಸಲಾಯಿತು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ್ ಹಾವಿನ, ಸಿಡಿಪಿಓ ರೋಹಿಣಿ ಕೊಟಗಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ, ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್ ಇದ್ದರು.
ಕೊಪ್ಪಳ : ಮೂರರಿಂದ ಆರು ವಯಸ್ಸಿನ ಮಕ್ಕಳ ದೈಹಿಕ, ಬೌದ್ಧಿಕ, ಮಾನಸಿಕ, ಬೆಳವಣಿಗೆಗೆ ಬುನಾದಿ ಹಂತದ ಶಿಕ್ಷಣ ಬಹಳ ಮುಖ್ಯ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಅಮರೇಶ ಹಾವಿನ ಹೇಳಿದರು.
ತಾಲೂಕಿನ ಹೊಸಲಿಂಗಾಪುರ ಅಂಗನವಾಡಿ ಕೇಂದ್ರಗಳಲ್ಲಿ ಬುಧವಾರ ಹಮ್ಮಿಕೊಂಡ ಮೂರು ವರ್ಷ ಶಾಲಾ ಪೂರ್ವ ಶಿಕ್ಷಣದಿಂದ 1ನೇ ತರಗತಿಗೆ ದಾಖಲಾಗುತ್ತಿರುವ ಮಕ್ಕಳ ಶಾಲಾ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಬಲವರ್ಧನೆಗೆ ಕೆಕೆ.ಆರ್.ಡಿಬಿ, ಜಿಪಂ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಕಲಿಕೆ ಟಾಟಾ ಟ್ರಸ್ಟ್ ಸಹಭಾಗಿತ್ವದಲ್ಲಿ ಜಿಲ್ಲೆಯಲ್ಲಿ ಶಾಲಾ ಪೂರ್ವ ಶಿಕ್ಷಣ ಬಲವರ್ಧನೆ ಕಾರ್ಯಕ್ರಮವನ್ನು ಅನುಷ್ಠಾನ ಮಾಡಲಾಗುತ್ತಿದೆ ಎಂದರು.
ಶಿಶು ಅಭಿವೃದ್ಧಿ ಯೋಜನೆ ಮೂಲಕ ಹೊಸಲಿಂಗಪುರ ಗ್ರಾಮದ 5 ಅಂಗನವಾಡಿ ಕೇಂದ್ರಗಳಿಂದ ಒಟ್ಟು 20 ಮಕ್ಕಳು ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ದಾಖಲಾಗುವ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭದ ಮೂಲಕ ಶಾಲೆಗೆ ಪ್ರವೇಶೋತ್ಸವವನ್ನು ಮಾಡಲಾಯಿತು.
ಕೊಪ್ಪಳ ಸಿಡಿಪಿಓ ರೋಹಿಣಿ ಕೊಟಗಾರ, ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ನಾಗರತ್ನ, ಕಲಿಕೆ ಟಾಟಾ ಟ್ರಸ್ಟ್ ಜಿಲ್ಲಾ ವ್ಯವಸ್ಥಾಪಕ ಅಶೋಕ್, ವಲಯ ಮೇಲ್ವಿಚಾರಕಿ ಸುಮಂಗಲ ಸಜ್ಜನ್ ಇತರರಿದ್ದರು.