ಶಿಕ್ಷಣ ಗೌರವಯುತ ಬದುಕಿನ ಅಸ್ತ್ರ ಎಂದ್ದದ್ದು ಪುಲೆ

ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿಯಲ್ಲಿ ಜ್ಯೋತಿರಾವ್​ ಫುಲೆ 200 ನೇ ಜನ ವಾರ್ಷಿಕೋತ್ಸವ ಅಂಗವಾಗಿ ಎಐಡಿಎಸ್​ಒನಿಂದ ಮಕ್ಕಳ ಶಿಬಿರ ಆಯೋಜಿಸಲಾಗಿತ್ತು.
ಕೊಪ್ಪಳ ತಾಲೂಕಿನ ಹಿರೇಕಾಸನಕಂಡಿಯಲ್ಲಿ ಜ್ಯೋತಿರಾವ್​ ಫುಲೆ 200 ನೇ ಜನ ವಾರ್ಷಿಕೋತ್ಸವ ಅಂಗವಾಗಿ ಎಐಡಿಎಸ್​ಒನಿಂದ ಮಕ್ಕಳ ಶಿಬಿರ ಆಯೋಜಿಸಲಾಗಿತ್ತು.
Published on

ಪ್ರಮುಖ ಮುಖ್ಯಾಂಶಗಳು

  • ಶರಣು ಗಡ್ಡಿ ಅಭಿಪ್ರಾಯ
  • ಮಕ್ಕಳ ಶಿಬಿರ
ಕೊಪ್ಪಳ : ಶಿಕ್ಷಣ ಎನ್ನುವುದು ಕೇವಲ ಅಕ್ಷರ ಕಲಿಯುವುದಲ್ಲ, ಅದು ಮನುಷ್ಯನ ಗೌರವಯುತ ಬದುಕಿನ ಅಸ್ತ್ರ ಎಂದು ಸಾರಿದ ಕ್ರಾಂತಿಕಾರಿ ಶಿಕ್ಷಕ ಮಹಾತ್ಮ ಜ್ಯೋತಿಬಾ ಫುಲೆ ಎಂದು ಹೋರಾಟಗಾರ ಶರಣು ಗಡ್ಡಿ ಹೇಳಿದರು.
ಮಹಾನ್​ ಮಾನವತಾವಾದಿ ಜ್ಯೋತಿರಾವ್​ ಫುಲೆ 200 ನೇ ಜನ ವಾರ್ಷಿಕೋತ್ಸವ ಅಂಗವಾಗಿ ಎಐಡಿಎಸ್​ಒನಿಂದ ಹಿರೇಕಾಸನಕಂಡಿಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಶಿಬಿರದಲ್ಲಿ ಮಾತನಾಡಿದರು.
ಇಂದಿನ ಸಾಮಾಜಿಕ ವಾತಾವರಣ ಮೌಲ್ಯಗಳಿಲ್ಲದೆ ಕೊಳೆತು ಹೋಗಿದೆ, ಇಂತಹ ಪರಿಸ್ಥಿತಿಯಲ್ಲಿ ಮಕ್ಕಳಿಗೆ ಕೇವಲ ಅಂಕಗಳಿಸಲು ಶಿಕ್ಷಣ ನೀಡುತ್ತಿರುವುದು ವಿಪರ್ಯಾಸ, ಆದ್ದರಿಂದ ಮಕ್ಕಳೆಲ್ಲರೂ ಮಹಾನ್​ ವ್ಯಕ್ತಿಗಳ ಹೋರಾಟದ ಬದುಕು ಮತ್ತು ಅವರು ಪಾಲಿಸಿದ ನೈತಿಕ ಪರಿಚಯಿಸುವುದರಿಂದ ಮಾತ್ರ ಮಕ್ಕಳಲ್ಲಿ ಸದೃಢ ವ್ಯಕ್ತಿತ್ವ ರೂಪಿಸಲು ಸಾಧ್ಯ ಎಂದು ಹೇಳಿದರು.
ಫುಲೆ ಸಾಮಾಜಿಕ ಸಂಪ್ರದಾಯದ ವಿರೋಧದ ಮಧ್ಯೆ ಹೆಣ್ಣು ಮಕ್ಕಳಿಗಾಗಿ ಮತ್ತು ದಲಿತ ದಮನಿತ ಮಕ್ಕಳಿಗಾಗಿ ಶಾಲೆಯನ್ನು ತೆರೆಯದಿದ್ದರೆ, ಇಂದು ನಾವ್ಯಾರೂ ಈ ಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಶಿಕ್ಷಣವು ಪ್ರತಿಯೊಬ್ಬ ವ್ಯಕ್ತಿಗೂ ಉಚಿತವಾಗಿ ಮತ್ತು ಸಮಾನವಾಗಿ ಸಿಗಬೇಕು ಎಂಬ ಅವರ ಆಶಯಕ್ಕೆ. ಸರ್ಕಾರ ಕೆಪಿಎಸ್​ ಮ್ಯಾಗ್ನೆಟ್​ ಹೆಸರಿನಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ ನೀರೆರಚುತ್ತಿದೆ. ಇದು ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡುವ ಸಂಚು ಎಂದು ಹೇಳಿದರು.
ಹಿರೇಕಾಸನಕಂಡಿ ಸಾರ್ವಜನಿಕ ಶಿಕ್ಷಣ ಸಮಿತಿ ದಾಧಿಕಾರಿಗಳಾದ ದೇವಪ್ಪ, ಬಸವರಾಜಪ್ಪ,ವೀರಯ್ಯ, ವೀರೇಶ್​, ಮುದಿಯಪ್ಪ, ಹನುಮಂತಪ್ಪ, ಫಕೀರಗೌಡ್ರು, ಶಾರದ ಗಡ್ಡಿ ಎಐಡಿಎಸ್​ಒ ಜಿಲ್ಲಾ ಸಂಘಟನಾಕಾರ ಪ್ರದಿಪ್​ ಪೂಜಾರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net