ವಿವಿಧ ಅಭಿವೃದ್ಧಿ ಕೆಲಸಗಳಿಂದ ಸಾರ್ಥಕ

ಶಾಸಕ ಶಿವರಾಜ ತಂಗಡಗಿ ಜನ್ಮದಿನಾಚರಣೆ ಪ್ರಯುಕ್ತ ಕಾರಟಗಿಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಿಸಲಾಯಿತು. ಪ್ರಮುಖರಾದ ವೆಂಕಟೇಶ್ ತಂಗಡಗಿ, ಶಿವರೆಡ್ಡಿ ನಾಯಕ, ಮಂಜುನಾಥ ಮೇಗೂರು ಇದ್ದರು.
ಶಾಸಕ ಶಿವರಾಜ ತಂಗಡಗಿ ಜನ್ಮದಿನಾಚರಣೆ ಪ್ರಯುಕ್ತ ಕಾರಟಗಿಯಲ್ಲಿ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಿಸಲಾಯಿತು. ಪ್ರಮುಖರಾದ ವೆಂಕಟೇಶ್ ತಂಗಡಗಿ, ಶಿವರೆಡ್ಡಿ ನಾಯಕ, ಮಂಜುನಾಥ ಮೇಗೂರು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಹೇಳಿಕೆ
  • ಶಾಸಕ ತಂಗಡಗಿ ಹುಟ್ಟುಹಬ್ಬ ಆಚರಣೆ
ಕಾರಟಗಿ: ಕ್ಷೇತ್ರದಲ್ಲಿ 3ಬಾರಿ ಗೆಲುವು ಸಾಧಿಸಿ ಶಾಸಕ ತಂಗಡಗಿ ಸಚಿವರಾಗಿ ಕಾರ್ಯನಿರ್ವಹಿಸಿ ಸಾಕಷ್ಟು ಜನಪರ ಅಭಿವೃದ್ಧಿ ಕೆಲಸ ಮಾಡಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶರಣೇಗೌಡ ಮಾಲಿಪಾಟೀಲ್ ಹೇಳಿದರು.
ಪಟ್ಟಣ ಸೇರಿದಂತೆ ಸುತ್ತಲಿನ ವಿವಿಧ ಗ್ರಾಮಗಳಲ್ಲಿ ಶಾಸಕ ಶಿವರಾಜ ತಂಗಡಗಿ 56ನೇ ಹಟ್ಟುಹಬ್ಬವನ್ನು ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ರೈಸ್ ಟೆಕ್ನಾಲಜಿ ಪಾರ್ಕ್, ಕೆರೆ ತುಂಬಿಸುವ ಯೋಜನೆ, ಕನಕಗಿರಿ, ಕಾರಟಗಿ ತಾಲೂಕು ರಚನೆ ಸೇರಿ ವಿವಿಧ ಅಭಿವೃದ್ಧಿಗಳಿಂದ ಸಾರ್ಥಕತೆ ಮೂಡಿಸಿದ್ದಾರೆ ಎಂದರು.
ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿದರು. ಸರ್ಕಾರಿ ಬಾಲಕರ ಹಾಗೂ ಬಾಲಕಿಯರ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್, ಪೆನ್ ವಿತರಿಸಿ ಸಿಹಿ ಊಟ ಏರ್ಪಡಿಸಲಾಗಿತ್ತು. ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ದೊಡ್ಡಬಸವ ಬೂದಿ, ಪ್ರಮುಖರಾದ ಶಿವರೆಡ್ಡಿ ನಾಯಕ, ಚನ್ನಬಸಪ್ಪ ಸುಂಕದ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net