ದುರ್ಗಮ್ಮನಹಳ್ಳದಲ್ಲಿ ಮತ್ತೆ ತುಂಬಿತು ತ್ಯಾಜ್ಯ

ಗಂಗಾವತಿಯಲ್ಲಿ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪಗೆ ದುರ್ಗಮ್ಮನಹಳ್ಳ ಸ್ವಚ್ಛತಾ ಅಭಿಯಾನದ ಸದಸ್ಯರು ಮನವಿ ಸಲ್ಲಿಸಿದರು. ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ನಗರಸಭೆ ಮಾಜಿ ಸದಸ್ಯರಾದ ಉಮೇಶ್ ಸಿಂಗನಾಳ, ನವೀನ ಮಾ.ಪಾಟೀಲ್, ಅಭಿಯಾನದ ಸದಸ್ಯರಾದ ಪ್ರಹ್ಲಾದ್ ಕುಲಕರ್ಣಿ, ಬಸವರಾಜ ಮ್ಯಾಗಳಮನಿ, ಸಂದೇಶ್ ಹಿರೇಮಠ ಇತರರಿದ್ದರು.
ಗಂಗಾವತಿಯಲ್ಲಿ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪಗೆ ದುರ್ಗಮ್ಮನಹಳ್ಳ ಸ್ವಚ್ಛತಾ ಅಭಿಯಾನದ ಸದಸ್ಯರು ಮನವಿ ಸಲ್ಲಿಸಿದರು. ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್, ನಗರಸಭೆ ಮಾಜಿ ಸದಸ್ಯರಾದ ಉಮೇಶ್ ಸಿಂಗನಾಳ, ನವೀನ ಮಾ.ಪಾಟೀಲ್, ಅಭಿಯಾನದ ಸದಸ್ಯರಾದ ಪ್ರಹ್ಲಾದ್ ಕುಲಕರ್ಣಿ, ಬಸವರಾಜ ಮ್ಯಾಗಳಮನಿ, ಸಂದೇಶ್ ಹಿರೇಮಠ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾರ್ಕಿಂಗ್
  • ಸಾರ್ವಜನಿಕರಿಗೆ
  • ಸ್ವಚ್ಛತಾ ಅಭಿಯಾನ

ಗಂಗಾವತಿ:

ನಗರದ ದುರ್ಗಮ್ಮನಹಳ್ಳ ಸ್ವಚ್ಛಗೊಳಿಸುವುದರ ಜತೆಗೆ ಪಾರ್ಕಿಂಗ್ ಜಾಗ ಸಾರ್ವಜನಿಕರಿಗೆ ಮುಕ್ತಗೊಳಿಸಲು ಒತ್ತಾಯಿಸಿ ದುರ್ಗಮ್ಮನಹಳ್ಳ ಸ್ವಚ್ಛತಾ ಅಭಿಯಾನದ ಸದಸ್ಯರು ಶನಿವಾರ ನಗರಸಭೆ ಪರಿಸರ ಇಂಜಿನಿಯರ್ ಶರಣಪ್ಪಗೆ ಮನವಿ ಸಲ್ಲಿಸಿದರು.

ನಗರಸಭೆ ನೈರ್ಮಲೀಕರಣ ಸಿಬ್ಬಂದಿಯೊಂದಿಗೆ ದುರ್ಗಮ್ಮನಹಳ್ಳಕ್ಕೆ ಭೇಟಿ ನೀಡಿದ ಅಭಿಯಾನದ ಸದಸ್ಯರು, ದುರ್ಗಮ್ಮನ ಹಳ್ಳದ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು.
ಅಭಿಯಾನದ ಸಂಚಾಲಕ ಡಾ.ಶಿವಕುಮಾರ ಮಾ.ಪಾಟೀಲ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ‘ನಮ್ಮ ಊರು ನಮ್ಮ ಹಳ್ಳ’ ಸಮಾನ ಮನಸ್ಕರ ತಂಡದಿಂದ ದುರ್ಗಮ್ಮನ ಹಳ್ಳವನ್ನು ಸಂಪೂರ್ಣ ಸ್ವಚ್ಛಗೊಳಿಸಲಾಗಿತ್ತು. ಅಮೃತ್ ನಗರ ಯೋಜನೆಯಡಿ ಹಳ್ಳಕ್ಕೆ ತಡೆಗೋಡೆ ನಿರ್ಮಿಸಲು ಹೋರಾಟ ನಡೆಸಲಾಗಿತ್ತು. ಆದರೆ, ಹಳ್ಳದಲ್ಲಿ ಮತ್ತೆ ಗಿಡಗಂಟಿಗಳು ಬೆಳೆದು, ಕಸ-ಕಡ್ಡಿ ತುಂಬಿಕೊಂಡಿದೆ. ಹಳ್ಳದ ದಂಡೆಯಲ್ಲೇ ಚನ್ನಬಸವಸ್ವಾಮಿಗಳ ಮಠ, ಗ್ರಾಮದೇವತೆ ಶ್ರೀದುರ್ಗಾದೇವಿ ದೇವಸ್ಥಾನದಂತಹ ಪವಿತ್ರ ಸ್ಥಳಗಳಿದ್ದರೂ, ಹಳ್ಳದ ಸ್ವಚ್ಛತೆ ಕಾಪಾಡುವಲ್ಲಿ ನಗರಸಭೆ ವಿಫಲವಾಗಿದೆ.
ಚನ್ನಬಸವಸ್ವಾಮಿ ಮಠ, ಶಿವ ಚಿತ್ರಮಂದಿರದ ಎದುರು ಹಾಗೂ ಇಸ್ಲಾಂಪುರ ಸೇತುವೆ ಸಮೀಪ ಅಮೃತ್ ನಗರ ಯೋಜನೆಯಡಿ ನಿರ್ಮಿಸಲಾದ ಪಾರ್ಕಿಂಗ್ ಸ್ಥಳಗಳು ಸಮರ್ಪಕವಾಗಿ ಬಳಕೆಯಾಗುತ್ತಿಲ್ಲ. ಹಳ್ಳಕ್ಕೆ ಕಸ ಹಾಕುವುದನ್ನು ತಡೆಗಟ್ಟಬೇಕು. ಹಳ್ಳದ ಎರಡೂ ದಂಡೆಗಳಿಂದ ಹರಿಯುವ ಕೊಳಚೆ ನೀರನ್ನು ಯುಜಿಡಿ ವ್ಯವಸ್ಥೆಗೆ ಸಂಪರ್ಕಿಸಿ, ಹಳ್ಳದಲ್ಲಿ ಕಾಲುವೆ ನೀರು ಮಾತ್ರ ಹರಿಯುವಂತೆ ಕ್ರಮ ಕೈಗೊಳ್ಳಬೇಕು ದುರ್ಗಮ್ಮನ ಹಳ್ಳವನ್ನು ಸ್ವಚ್ಛಗೊಳಿಸಿ ಅಭಿವೃದ್ಧಿಪಡಿಸಬೇಕೆಂದು ಒತ್ತಾಯಿಸಿದರು.
ನಗರಸಭೆ ಮಾಜಿ ಸದಸ್ಯರಾದ ಉಮೇಶ್ ಸಿಂಗನಾಳ, ನವೀನ ಮಾ.ಪಾಟೀಲ್, ಅಭಿಯಾನದ ಸದಸ್ಯರಾದ ಪ್ರಹ್ಲಾದ್ ಕುಲಕರ್ಣಿ, ಬಸವರಾಜ ಮ್ಯಾಗಳಮನಿ, ಸಂದೇಶ್ ಹಿರೇಮಠ, ಹರನಾಯಕ, ಮಂಜುನಾಥ, ನಾಗರಾಜ ನಾಯಕ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net