ಮಳೆ ನಡುವೆ ಸೂಳೇಕಲ್‌ನಲ್ಲಿ ಬರ ವೀಕ್ಷಣೆ

ಸೂಳೇಕಲ್ ಗ್ರಾಮದ ರೈತರ ಜಮೀನಿನಲ್ಲಿ ಬರದಿಂದ ಹಾಳಾದ ಸೂರ್ಯಕಾಂತಿ ಬೆಳೆಯನ್ನು ಸಚಿವ ಶಿವರಾಜ ತಂಗಡಗಿ ಹಾಗೂ ಅಧಿಕಾರಿಗಳ ತಂಡ ಜಿಟಿಜಿಟಿ ಮಳೆಯಲ್ಲೇ ವೀಕ್ಷಿಸಿದರು. ಡಿಸಿ ಸುರೇಶ ಇಟ್ನಾಳ, ಎಡಿಎ ಡಾ. ಅಭಿಲಾಷಾ ಇತರರಿದ್ದರು.
ಸೂಳೇಕಲ್ ಗ್ರಾಮದ ರೈತರ ಜಮೀನಿನಲ್ಲಿ ಬರದಿಂದ ಹಾಳಾದ ಸೂರ್ಯಕಾಂತಿ ಬೆಳೆಯನ್ನು ಸಚಿವ ಶಿವರಾಜ ತಂಗಡಗಿ ಹಾಗೂ ಅಧಿಕಾರಿಗಳ ತಂಡ ಜಿಟಿಜಿಟಿ ಮಳೆಯಲ್ಲೇ ವೀಕ್ಷಿಸಿದರು. ಡಿಸಿ ಸುರೇಶ ಇಟ್ನಾಳ, ಎಡಿಎ ಡಾ. ಅಭಿಲಾಷಾ ಇತರರಿದ್ದರು.
Published on

ಕನಕಗಿರಿ: ಜಿಟಿಜಿಟಿ ಮಳೆಯ ನಡುವೆಯೇ ಸಚಿವ ಶಿವರಾಜ ತಂಗಡಗಿ ಹಾಗೂ ಅಧಿಕಾರಿಗಳ ತಂಡ ಬುಧವಾರ ತಾಲೂಕಿನ ಸೂಳೇಕಲ್ ಗ್ರಾಮದ ಜಮೀನಿನಲ್ಲಿ ಬರ ಪರಿಸ್ಥಿತಿ ವೀಕ್ಷಿಸಿದರು. 

ಮಧ್ಯಾಹ್ನ 2.50ಕ್ಕೆ ಸೂಳೇಕಲ್‌ನಲ್ಲಿ ಬರ ವೀಕ್ಷಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಆದರೆ, ಸಚಿವರು ಹಾಗೂ ಅಧಿಕಾರಿಗಳು 4.30ರ ಸುಮಾರಿಗೆ ಆಗಮಿಸಿದರು. ಸಚಿವ ಶಿವರಾಜ ತಂಗಡಗಿ ನಾಲ್ಕನೇ ಬಾರಿಗೆ ಸಚಿವರಾಗಿ ಕ್ಷೇತ್ರಕ್ಕೆ ಮೊದಲ ಸಲ ಭೇಟಿ ನೀಡಿದ್ದರಿಂದ ಗಂಗಾವತಿಯಲ್ಲಿ ಸಂಭ್ರಮಾಚರಣೆ, ಮಾರ್ಗಮಧ್ಯದಲ್ಲಿ ಕಾರ್ಯಕರ್ತರಿಂದ ಸನ್ಮಾನ ಸ್ವೀಕರಿಸುತ್ತ ಸೂಳೇಕಲ್ ಗ್ರಾಮಕ್ಕೆ ಬರಲು ತಡವಾಯಿತು. 
ಸಚಿವ ತಂಗಡಗಿ ಹಾಗೂ ಅಧಿಕಾರಿಗಳ ತಂಡ ಸೂಳೇಕಲ್ ಬರುವಷ್ಟರಲ್ಲಿಯೇ ಮಳೆ ಆರಂಭಗೊಂಡಿತ್ತು. ಜಿಟಿಜಿಟಿ ಮಳೆಯ ನಡುವೆಯೇ ಸಚಿವರು ಹಾಗೂ ಅಧಿಕಾರಿಗಳಿಗೆ ಮುಖಂಡರು ಛತ್ರಿ ಹಿಡಿದು ಬೆನಕನಾಳ ರಸ್ತೆಯ ಜಮೀನಿನಲ್ಲಿ ಮಳೆ ಕೊರತೆಯಿಂದ ಹಾಳಾದ ಸೂರ್ಯಕಾಂತಿ, ಸಜ್ಜೆ ಬೆಳೆ ವೀಕ್ಷಿಸಿದರು.
ಬಳಿಕ ಕನಕಗಿರಿ ಪಟ್ಟಣಕ್ಕೆ ಆಗಮಿಸಿದ ಸಚಿವರು ಶ್ರೀ ಕನಕಾಚಲ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ಹೊರಬರಬೇಕು ಎನ್ನುವಷ್ಟರಲ್ಲಿ ಜೋರು ಮಳೆ ಸುರಿಯಿತು. ಮಳೆ ನಡುವೆಯೇ ಸಚಿವರು ಹಾಗೂ ಅಧಿಕಾರಿಗಳ ತಂಡ ಹುಲಿಹೈದರ ಗ್ರಾಮದ ಕಡೆಗೆ ತೆರಳಿದರು. 
ಜಿಲ್ಲಾಧಿಕಾರಿ ಸುರೇಶ ಇಟ್ನಾಳ, ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ರೆಡ್ಡಿ ಶ್ರೀನಿವಾಸ, ತಾಲೂಕು ಅಧ್ಯಕ್ಷ ಹಜರತ್ ಹುಸೇನ್, ಕಾರಟಗಿ ಬ್ಲಾಕ್ ಅಧ್ಯಕ್ಷ ಶರಣೇಗೌಡ, ಪಪಂ ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಜಿಪಂ ಮಾಜಿ ಸದಸ್ಯರಾದ ಅಮರೇಶ ಗೋನಾಳ, ಹನುಮೇಶ ನಾಯಕ, ತಾಪಂ ಮಾಜಿ ಅಧ್ಯಕ್ಷರಾದ ಬಸವಂತಗೌಡ, ಮಲ್ಲಿಕಾರ್ಜುನಗೌಡ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net