ಚಾಲಕರು ರಸ್ತೆ ಸುರಕ್ಷತೆಗೆ ಆದ್ಯತೆ ನೀಡಿ

ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭವನ್ನು ನ್ಯಾ.ಮಹಾಂತೇಶ ದರಗದ ಉದ್ಘಾಟಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​., ಎಸಿ ಕ್ಯಾ.ಮಹೇಶ ಮಾಲಗಿತಿ, ಎಪಿಸಿಒ ದುಂಡಪ್ಪಗೌಡ ಪಾಟೀಲ್​, ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಜಿ.ಎಂ ಸುರೇಶ್​, ಪ್ರಭಾಕರ್​ ಇದ್ದರು.
ಕೊಪ್ಪಳದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭವನ್ನು ನ್ಯಾ.ಮಹಾಂತೇಶ ದರಗದ ಉದ್ಘಾಟಿಸಿದರು. ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​., ಎಸಿ ಕ್ಯಾ.ಮಹೇಶ ಮಾಲಗಿತಿ, ಎಪಿಸಿಒ ದುಂಡಪ್ಪಗೌಡ ಪಾಟೀಲ್​, ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಜಿ.ಎಂ ಸುರೇಶ್​, ಪ್ರಭಾಕರ್​ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನ್ಯಾ.ಮಹಾಂತೇಶ ದರಗದ ಸಲಹೆ
ಕೊಪ್ಪಳ:ಚಾಲಕರು ವೇಗದ ಮಿತಿ, ಚಾಲನೆ ನಿಯಮ ಅರ್ಥಮಾಡಿಕೊಂಡು ಪಾಲಿಸುವ ಮೂಲಕ ರಸ್ತೆ ಸುರಕ್ಷತೆಗೆ ಆದ್ಯತೆ ನೀಡುವಂತೆ ಹಿರಿಯ ಸಿವಿಲ್​ ನ್ಯಾಯಾಧೀಶ ಮಹಾಂತೇಶ ಎಸ್​.ದರಗದ ಸಲಹೆ ನೀಡಿದರು.
ನಗರದ ಆರ್​ಟಿಒ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
ಎಲ್ಲರೂ ನಿಯಮ ಪಾಲಿಸಿದಲ್ಲಿ ಅಪಘಾತ ತಡೆಗಟ್ಟಬಹುದು. ದ್ವಿಚಕ್ರ ವಾಹನ ಸವಾರರು ಕಡ್ಡಾಯವಾಗಿ ಹೆಲ್ಮೆಟ್​ ಧರಿಸಿ. ನಾಲ್ಕು ಚಕ್ರ ವಾಹನ ಸವಾರರು ಸೀಟ್​ ಬೆಲ್ಟ್​ ಧರಿಸಬೇಕು. ಚಾಲನೆ ವೇಳೆ ಮೊಬೈಲ್​ ಬಳಸಬಾರದು. ಎಲ್ಲ ಸುರಾ ಕ್ರಮಗಳನ್ನು ಪಾಲಿಸಿ. ಕಾನೂನು ಮಾಡುವುದೇ ನಮ್ಮ ಸುರಕ್ಷತೆಗಾಗಿ. ಅವಗಳನ್ನು ಪಾಲಿಸಿದಲ್ಲಿ ಅರ್ಥ ಬರಲಿದೆ. 18 ವರ್ಷದೊಳಗಿನ ಮಕ್ಕಳಿಗೆ ವಾಹನ ಚಲಾಯಿಸಲು ಅವಕಾಶ ನೀಡದಿರಿ. ಮಾರಾಟ ಮಾಡಿದ ತಕ್ಷಣ ಖರೀದಿದಾರರ ಹೆಸರಿಗೆ ವರ್ಗಾಯಿಸಿಕೊಳ್ಳಬೇಕು. ವಾಹನ ಸುಸ್ಥಿತಿಯಲ್ಲಿಟ್ಟುಕೊಳ್ಳಿ. ರಸ್ತೆ ಸುರಕ್ಷತಾ ನಿಯಮ ಪಾಲಿಸುವಂತೆ ಕಿವಿ ಮಾತು ಹೇಳಿದರು.
ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ.ರವೀಂದ್ರನಾಥ ಎಂ.ಎಚ್​. ಮಾತನಾಡಿ, ವಾಹನ ಚಾಲಕರು ಸಂಚಾರ ನಿಯಮ ಪಾಲಿಸುವುದು ಕಡ್ಡಾಯ. ಅವಸರದಲ್ಲಿ ಅತಿವೇಗವಾಗಿ ವಾಹನ ಚಲಾಯಿಸಬೇಡಿ. ನಿಧಾನವಾಗಿ ಜಾಗರೂಕತೆಯಿಂದ ಓಡಿಸಿ. ಸಮಯ ಪಾಲಿಸಿ. ನಿಗದಿತ ಸಮಯಕ್ಕೆ ನಿಲ್ದಾಣ ತಲುಪಲು ಮುಂಚಿತವಾಗಿಯೇ ಪ್ರಯಾಣ ಆರಂಭಿಸಿ. ಮದ್ಯ ಸೇವಿಸಿ ಡೆವಿಂಗ್​ ಮಾಡದಿರಿ ಎಂದರು.
ಪ್ರಾದೇಶಿಕ ಸಾರಿಗೆ ಅಧಿಕಾರಿ ಪ್ರಭುಸ್ವಾಮಿ ಹಿರೇಮಠ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಮಾಡಲಾಗಿದೆ. ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ನಿಯಮಗಳ ಅರಿವು ಮೂಡಿಸಲಾಗಿದೆ. ಅಪಘಾತ ತಡೆಗೆ ಜಾಗೃತಿ ಕೈಗೊಳ್ಳಲಾಗಿದೆ. ವಾಹನ ಸುಸ್ಥಿತಿಯಲ್ಲಿಟ್ಟುಕೊಂಡು ನಿರ್ವಹಿಸುವಂತೆ ತಿಳಿಸಿದ್ದಾಗಿ ಕಾರ್ಯಕ್ರಮ ಹಮ್ಮಿಕೊಂಡ ವಿವರ ನೀಡಿದರು.
ಕಾರ್ಯಕ್ರಮದಲ್ಲಿ ದ್ವಿಚಕ್ರ ವಾಹನ ಸವಾರರಿಗೆ ಹೆಮಲೆಟ್​ ವಿತರಿಸಲಾಯಿತು.
ಎಸಿ ಕ್ಯಾ.ಮಹೇಶ ಮಾಲಗಿತಿ, ಎಪಿಸಿಒ ದುಂಡಪ್ಪಗೌಡ ಪಾಟೀಲ್​, ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಜಿ.ಎಂ ಸುರೇಶ್​, ಪ್ರಭಾಕರ್​, ವಿನಾಯಕ ನಾಯಕ, ಮೋಟಾರು ವಾಹನ ನಿರೀಕ್ಷಕರಾದ ವಿಜೇಂದ್ರ ಡವಳಗಿ, ಪಿ.ಮಂಜುನಾಥನ, ಆರ್​.ಪ್ರದಿಪ್​ ಕುಮಾರ್​ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net