ಗುಳೆ ಬಿಡಿ ಇದ್ದೂರಲ್ಲೇ ಖಾತ್ರಿ ಕೆಲಸ ಮಾಡಿ

ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ಗ್ರಾಮಸ್ಥರು ಕೂಲಿಕಾರರ ಕೆಲಸದ ಬೇಡಿಕೆ ಮನವಿಯನ್ನು ಪಿಡಿಒ ಶಿವಪುತ್ರಗೆ ಶುಕ್ರವಾರ ಸಲ್ಲಿಸಿದರು. ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ್ ಹಿರೇಮಠ ಇದ್ದರು.
ಕುಷ್ಟಗಿ ತಾಲೂಕಿನ ಗುಮಗೇರಾದಲ್ಲಿ ಗ್ರಾಮಸ್ಥರು ಕೂಲಿಕಾರರ ಕೆಲಸದ ಬೇಡಿಕೆ ಮನವಿಯನ್ನು ಪಿಡಿಒ ಶಿವಪುತ್ರಗೆ ಶುಕ್ರವಾರ ಸಲ್ಲಿಸಿದರು. ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ, ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ್ ಹಿರೇಮಠ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ ಸಲಹೆ
ಕುಷ್ಟಗಿ: ಗುಳೆ ಹೋಗುವುದನ್ನು ಬಿಟ್ಟು ಸ್ಥಳೀಯವಾಗಿಯೇ ನರೇಗಾ ಕೆಲಸ ಮಾಡಿ ಸ್ವಾವಲಂಬಿ ಜೀವನ ನಡೆಸಬೇಕೆಂದು ಜಿಲ್ಲಾ ಐಇಸಿ ಸಂಯೋಜಕ ಶ್ರೀನಿವಾಸ್ ಚಿತ್ರಗಾರ ಹೇಳಿದರು.
ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ಕೆರೆ ಅಂಗಳದಲ್ಲಿ ಹಮ್ಮಿಕೊಂಡಿದ್ದ ಹೂಳೆತ್ತುವ ಕಾಮಗಾರಿಗೆ ಚಾಲನೆ ನೀಡಿ ಶುಕ್ರವಾರ ಮಾತನಾಡಿದರು. ಕೂಲಿಕಾರರಿಗೆ ನರೇಗಾ ವರದಾನವಾಗಿದೆ. ಕೆಲಸದ ಸ್ಥಳದಲ್ಲಿ ಕುಡಿವ ನೀರು ಸೇರಿ ಮೂಲ ಸೌಕರ್ಯ ಕಲ್ಪಿಸಲಾಗಿದೆ. ಜಾಬ್‌ಕಾರ್ಡ್ ಹೊಂದಿರುವ ಎಲ್ಲರೂ ಹೂಳೆತ್ತುವ ಕೆಲಸಕ್ಕೆ ಹಾಜರಾಗಿ ಪೂರ್ಣಪ್ರಮಾಣದ ಕೂಲಿ ಪಡೆದುಕೊಳ್ಳಬೇಕೆಂದು ತಿಳಿಸಿದರು.
ಪಿಡಿಒ ಶಂಕ್ರಪ್ಪ ಮಂಕಣಿ ಮಾತನಾಡಿ, ಪ್ರಧಾನಮಂತ್ರಿ ಶ್ರಮ ಯೋಗಿ ಮಾನ್-ಧನ್, ಅಸಂಘಟಿತ ವಲಯದ ಕಾರ್ಮಿಕರಿಗಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸ್ವಯಂ ಪ್ರೇರಿತ ಮತ್ತು ಕೊಡುಗೆ ಆಧಾರಿತ ಪಿಂಚಣಿ ಯೋಜನೆಯಾಗಿದೆ. ಈ ಯೋಜನೆಯಡಿ 60 ವರ್ಷದ ನಂತರ ಪ್ರತಿ ತಿಂಗಳು 3 ಸಾವಿರ ರೂ. ಖಚಿತ ಪಿಂಚಣಿ ದೊರೆಯುತ್ತದೆ. 18ರಿಂದ 40 ವರ್ಷದೊಳಗಿನವರಾಗಿದ್ದು, ಮಾಸಿಕ 15 ಸಾವಿರಕ್ಕಿಂತ ಕಡಿಮೆ ಆದಾಯ ಹೊಂದಿರಬೇಕು. ಆದಾಯ ತೆರಿಗೆ ಪಾವತಿದಾರರಾಗಿರಬಾರದು. ಈ ನಿಯಮಗಳಿಗೊಳಪಟ್ಟವರು ಯೋಜನೆ ಪ್ರಯೋಜನ ಪಡೆದುಕೊಳ್ಳಬಹುದು ಎಂದು ತಿಳಿಸಿದರು.
ನಂತರ ಗುಮಗೇರಿ, ಹಿರೇಮನ್ನಾಪುರ, ಜುಮಲಾಪುರ ಗ್ರಾಮ ಪಂಚಾಯಿತಿಗಳಿಗೆ ಭೇಟಿ ನೀಡಿ ಕೂಲಿಕಾರರಿಂದ ಕೆಲಸದ ಬೇಡಿಕೆ ಪಡೆದುಕೊಂಡರು. ತಾಲೂಕು ಐಇಸಿ ಸಂಯೋಜಕ ಚಂದ್ರಶೇಖರ್‌ಜಿ, ಗ್ರಾಪಂ ಸಿಬ್ಬಂದಿ ಶಿವಲಿಂಗಪ್ಪ, ಹನುಮಗೌಡ, ಸಿದ್ದಯ್ಯ, ಸುನಂದಾ, ದೇವೇಂದ್ರಪ್ಪ, ಕಾಯಕ ಬಂಧುಗಳಾದ ಶಿವಪುತ್ರ, ತಿಪ್ಪಮ್ಮ, ಮಾನನಗೌಡ, ಹನುಮೇಶ್, ಹನುಮಂತ ಆಂಜನೇಯ, ಶಿಲ್ಪಾ ಡೊಳ್ಳಿನ್ ಹಾಗೂ ಕಾಯಕ ಬಂಧುಗಳಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net