ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಿ

ಮಾನಸಿಕ ಆರೋಗ್ಯ ಹಾಗೂ ಮಾದಕ ವಸ್ತುಗಳ ವ್ಯಸನ ತರಬೇತಿ ಕಾರ್ಯಗಾರವನ್ನು ಡಿಎಚ್​ ಒ ಡಾ.ಟಿ.ಲಿಂಗರಾಜು ಉದ್ಘಾಟಿಸಿದರು. ಮನೋವೈದ್ಯರಾದ ರವಿಕುಮಾರ, ಪುಷ್ಪಾ ತೆರೇಸಾ, ಶಿವಾನಂದ ವಿ.ಪಿ. ಇದ್ದರು.
ಮಾನಸಿಕ ಆರೋಗ್ಯ ಹಾಗೂ ಮಾದಕ ವಸ್ತುಗಳ ವ್ಯಸನ ತರಬೇತಿ ಕಾರ್ಯಗಾರವನ್ನು ಡಿಎಚ್​ ಒ ಡಾ.ಟಿ.ಲಿಂಗರಾಜು ಉದ್ಘಾಟಿಸಿದರು. ಮನೋವೈದ್ಯರಾದ ರವಿಕುಮಾರ, ಪುಷ್ಪಾ ತೆರೇಸಾ, ಶಿವಾನಂದ ವಿ.ಪಿ. ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಾ.ಟಿ.ಲಿಂಗರಾಜು ಸೂಚನೆ
  • ಮಾನಸಿಕ ಆರೋಗ್ಯ ತರಬೇತಿ ಕಾರ್ಯಗಾರ
ಕೊಪ್ಪಳ : ಮಾನಸಿಕ ಮತ್ತು ದೈಹಿಕ ಆರೋಗ್ಯ ಒಂದೇ ನಾಣ್ಯದ ಎರಡು ಮುಖ. ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳ ಮಾನಸಿಕ ಆರೋಗ್ಯದ ಕಡೆ ಗಮನ ಹರಿಸಬೇಕು ಎಂದು ಡಿಎಚ್​ಒ ಡಾ.ಟಿ.ಲಿಂಗರಾಜು ಹೇಳಿದರು.
ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ವಸತಿ ನಿಲಯ ಪಾಲಕರಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಮಾನಸಿಕ ಆರೋಗ್ಯ ಹಾಗೂ ಮಾದಕ ವಸ್ತುಗಳ ವ್ಯಸನ ತರಬೇತಿ ಕಾರ್ಯಗಾರದಲ್ಲಿ ಮಾತನಾಡಿದರು.
ವಸತಿ ನಿಲಯಗಳಲ್ಲಿ ಅಭ್ಯಾಸ ಮಾಡುತ್ತಿರುವ ಹದಿ-ಹರೆಯದ ಮಕ್ಕಳಲ್ಲಿ ಏನಾದರೂ ಮಾನಸಿಕ ಸಮಸ್ಯೆಗಳು ಇದ್ದರೆ ತಮ್ಮ ಸಮಿಪದ ತಾಲೂಕಾ ಅಥವಾ ಜಿಲ್ಲಾಸ್ಪತ್ರೆಗಳಲ್ಲಿ ಸಂಪರ್ಕಿಸಿ ಕಾಯಿಲೆ ಗುಣಪಡಿಸಿಕೊಳ್ಳಬಹುದು. ಸೂಕ್ತ ಸಮಯದಲ್ಲಿ ರೋಗಲಕ್ಷಣಗಳನ್ನು ಗುರುತಿಸಿ, ಆಪ್ತ ಸಮಾಲೋಚನೆ ಹಾಗೂ ಚಿಕಿತ್ಸೆಯನ್ನು ಪಡೆದರೆ, ಆ ವ್ಯಕ್ತಿಯು ಇತರರಂತೆ ಜೀವನ ನಡೆಸಬಹುದು. ಪ್ರಾಥಮಿಕ ಆರೋಗ್ಯ ಕೇಂದ್ರಗಳು ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಸಾರ್ವಜನಿಕ ಆಸ್ಪತ್ರೆಗಳಲ್ಲಿಯೂ ಸಹ ಪ್ರಾಥಮಿಕ ಹಂತಗಳಲ್ಲಿ ಮಾನಸಿಕ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.
ಮನೋವೈದ್ಯ ಡಾ.ರವಿಕುಮಾರ ಮಾತನಾಡಿ, ಮಾನಸಿಕ ಕಾಯಿಲೆ ಬರುವುದಕ್ಕೆ ಒತ್ತಡ, ಜೀವನ ಶೈಲಿ, ಜೀವನದಲ್ಲಿ ಬರುವಂತಹ ಆಘಾತಕಾರಿ ಘಟನೆ ಸೇರಿ ಹಲವಾರು ಕಾರಣಗಳಿವೆ. ಪ್ರಾರಂಭಿಕ ಹಂತದಲ್ಲಿ ಈ ರೋಗಗಳನ್ನು ಗುರುತಿಸಿ ವೈದ್ಯಕಿಯ ಸಹಾಯ ಪಡೆದು ಆಪ್ತಸಮಾಲೋಚನೆ ಸೇರಿದಂತೆ ಔಷಧೋಪಚಾರಗಳನ್ನು ಪಡೆದಲ್ಲಿ ಗುಣಪಡಿಸಬಹುದು. ಮಾದಕ ವಸ್ತುಗಳ ವ್ಯಸನ ಯುವಕರಲ್ಲಿ ಅತೀ ಹೆಚ್ಚಾಗಿ ಕಾಣಸಿಕೊಳ್ಳುತ್ತಿದ್ದು, ಇದರಿಂದ ದೈಹಿಕವಾಗಿ ದುಷ್ಪರಿಣಾಮ ಉಂಟಾಗುತ್ತದೆ. ಮಾನಸಿಕವಾಗಿಯೂ ವ್ಯಕ್ತಿಯು ನಿಯಂತ್ರಣವನ್ನು ಕಳೆದುಕೊಳ್ಳುತ್ತಾನೆ ಎಂದರು.
ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ, ಮನೋವೈದ್ಯೆ ಪುಷ್ಪಾ ತೆರೇಸಾ, ಜಿಲ್ಲೆಯ ಎಲ್ಲಾ ವಸತಿ ನಿಲಯದ ಪಾಲಕರು, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ಸಿಬ್ಬಂದಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net