ಗಂಗಾವತಿ ಬಿಜೆಪಿ ಕಚೇರಿಯಲ್ಲಿ ಡಾ.ಶ್ಯಾಮಾಪ್ರಸಾದ ಮುಖರ್ಜಿ ಜನ್ಮದಿನ ಆಚರಿಸಲಾಯಿತು. ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಬಿಎಲ್‌ಎ1 ವೀರೇಶ ಬಲ್ಕುಂದಿ, ಪಕ್ಷದ ಜಿಲ್ಲಾ ಕಚೇರಿ ಕಾರ್ಯದರ್ಶಿ ಶ್ರೀನಿವಾಸ ಧೂಳಾ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ರಮೇಶ ಹೊಸ್ಮಲಿ, ಭಾರತಿ ಆಗಲೂರು, ಮಾಲಾನಾಯ್ಕರ್ ಇತರರಿದ್ದರು.
ಗಂಗಾವತಿ: ಬಿಜೆಪಿ ಕಚೇರಿಯಲ್ಲಿ ವಿವಿಧ ಮೋರ್ಚಾದಿಂದ ಭಾರತೀಯ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಾಪ್ರಸಾದ ಮುಖರ್ಜಿ ಅವರ 125ನೇ ಜನ್ಮದಿನ ಆಚರಿಸಲಾಯಿತು.
ಭಾವಚಿತ್ರಕ್ಕೆ ಪುಷ್ಪಾರ್ಪಣೆ ಸಲ್ಲಿಸಿದ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು ಮಾತನಾಡಿ, ಮುಖರ್ಜಿ ಅವರ ತ್ಯಾಗ, ನಿಸ್ವಾರ್ಥ ಸೇವೆ ಮತ್ತು ಸಂಘಟನಾ ಮನೋಭಾವದಿಂದ ದೇಶದಲ್ಲಿ ಬಿಜೆಪಿ ಹಲವು ರಾಜ್ಯದಲ್ಲಿ ಅಧಿಕಾರದಲ್ಲಿದ್ದರೆ, ಕಳೆದ 15 ವರ್ಷಗಳಿಂದ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಸಮರ್ಪಣಾ ಮನೋಭಾವನೆ ಪಕ್ಷ ಎತ್ತರಕ್ಕೆ ಬೆಳೆಯಲು ಕಾರಣವಾಗಿದ್ದು, ರಾಜಕಾರಣಿಗಳು ಮತ್ತು ಕಾರ್ಯಕರ್ತರಿಗೆ ಮಾದರಿಯಾಗಿದ್ದಾರೆ ಎಂದರು.
ಬಿಎಲ್‌ಎ1 ವೀರೇಶ ಬಲ್ಕುಂದಿ, ಪಕ್ಷದ ಜಿಲ್ಲಾ ಕಚೇರಿ ಕಾರ್ಯದರ್ಶಿ ಶ್ರೀನಿವಾಸ ಧೂಳಾ, ವಿವಿಧ ಮೋರ್ಚಾ ಪದಾಧಿಕಾರಿಗಳಾದ ರಮೇಶ ಹೊಸ್ಮಲಿ, ಭಾರತಿ ಆಗಲೂರು, ಮಾಲಾನಾಯ್ಕರ್, ಹನುಶಿಲ್ಪಿ, ಮಂಜುನಾಥ ಕೋಲ್ಕಾರ್, ಸರಸ್ವತಿ,ರಾಜೇಶ್ವರಿ, ದಿಲ್‌ಕ್ವಿಶ್ ಬೇಗಂ ಇತರರಿದ್ದರು.