ಸಮಾನತೆಯ ಹರಿಕಾರ ಡಾ.ಬಿ.ಆರ್.ಅಂಬೇಡ್ಕರ್

ಅಳವಂಡಿ ಸಮೀಪದ ತಿಗರಿಯಲ್ಲಿ ಆಯೋಜಿಸಿದ್ದ ಡಾ.ಬಿ.ಆರ್.ಅಂಬೇಡ್ಕರ್ ಅವರ ಚಿಂತನೆಗಳು ಹಾಗೂ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು. ಪ್ರಮುಖರಾದ ಭೀಮನಗೌಡ, ಡಿಎಂ ಪೂಜಾರ, ಮಲ್ಲಿಕಾರ್ಜುನ ಪೂಜಾರ, ಮಹಾಂತೇಶ ಬೂದಗುಂಪಾ ವಕೀಲರು, ರವಿಚಂದ್ರ ಮಾಟಲದಿನ್ನಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಪ್ರತಿಭಾ
  • ಪುರಸ್ಕಾರ
  • ಕಾರ್ಯಕ್ರಮ
ಅಳವಂಡಿ: ಡಾ.ಬಿ.ಆರ್. ಅಂಬೇಡ್ಕರ್ ಅವರು ವಿಶ್ವ ಕಂಡ ಶ್ರೇಷ್ಠ ನಾಯಕ. ಅವರ ಚಿಂತನೆಗಳು ಜೀವನ ನಡೆಸುವ ದಾರಿದೀಪಗಳಾಗಿವೆ ಎಂದು ಹಿರಿಯ ವಕೀಲ ಡಿಎಂ ಪೂಜಾರ ತಿಳಿಸಿದರು.
ಸಮೀಪದ ತಿಗರಿ ಗ್ರಾಮದಲ್ಲಿ ಆಯೋಜಿಸಿದ್ದ ಅಂಬೇಡ್ಕರ್ ಹಾಗೂ ಜಗಜೀವನ ರಾಮ್ ಅವರ ಜಯಂತಿ ಅಂಗವಾಗಿ ಕಾನೂನು ಅರಿವು ಜಾಗೃತಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ದೇಶಿಸಿ ಮಂಗಳವಾರ ಮಾತನಾಡಿದರು.
ಸಮಾನತೆಯ ಹರಿಕಾರ ಅಂಬೇಡ್ಕರ್ ಅವರು ಶಿಕ್ಷಣದ ಜತೆಗೆ ಸಂಘಟನೆ ಅವಶ್ಯ ಎಂದು ಸಾರಿದ ಮಹಾನ್ ನಾಯಕರಾಗಿದ್ದಾರೆ. ಅವರ ಆದರ್ಶಗಳನ್ನು ಸರ್ವರೂ ಅಳವಡಿಸಿಕೊಳ್ಳಬೇಕು ಎಂದರು. ವಕೀಲ ರವಿಚಂದ್ರನ್ ಮಾಟಲದಿನ್ನಿ ಮಾತನಾಡಿ, ಎಲ್ಲರೂ ಕಾನೂನು ಹಾಗೂ ಹಕ್ಕುಗಳ ಬಗ್ಗೆ ಅರಿವು ಹೊಂದುವುದು ಅವಶ್ಯವಾಗಿದೆ. ಪ್ರತಿಯೊಬ್ಬರೂ ಶಿಕ್ಷಣ ಪಡೆದಾಗ ಮಾತ್ರ ಕಾನೂನಿನ ಜ್ಞಾನ ಮೂಡುತ್ತದೆ ಎಂದರು. ಪ್ರಮುಖರಾದ ಹನುಮನಗೌಡ, ಭರಮಜ್ಜಿ , ಗೌರಿ ಗೋನಾಳ, ಕೆಎಸ್ ಮೈಲಾರಪ್ಪ ವಕೀಲರು ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net