ಹಾಸ್ಟೆಲ್‌ನಲ್ಲಿ ಸಹಾಯವಾಣಿ ಸೇರಿ ಸಂಬಂಧಪಟ್ಟ ಅಧಿಕಾರಿಗಳ ನಂಬರ್‌ಗಳನ್ನು ಹಾಕಬೇಕು. ಪೌಷ್ಟಿಕ ಆಹಾರಗಳನ್ನೇ ನೀಡಬೇಕಿದ್ದು, ಆರೋಗ್ಯ ತಪಾಸಣೆಗೆ ಆದ್ಯತೆ ನೀಡಿ ಎಂದು ವಸತಿ ಮೇಲ್ವಿಚಾರಕರಿಗೆ ಸೂಚನೆ ನೀಡಿದರು. ಹಿಂದುಳಿದ ವರ್ಗದ ಇಲಾಖೆ ಉಪನಿರ್ದೇಶಕಿ ನಾಗಮಣಿ, ವಿಸ್ತೀರ್ಣಾಧಿಕಾರಿ ಉಷಾ ಮುಜುಂದಾರ್, ತಾಪಂ ಇಒ ರಾಮರೆಡ್ಡಿ ಪಾಟೀಲ್, ನಗರ ಪಿಐ ಪ್ರಕಾಶ ಮಾಳೆ, ಸಿಡಿಪಿಒ ಜಯಶ್ರೀ ರಾಜಪುರೋಹಿತ್, ಗ್ರೇಡ್ 2 ತಹಸೀಲ್ದಾರ್ ಮಹಾಂತಗೌಡಗೌಡರ್ ಇತರರಿದ್ದರು.