ಅನಗತ್ಯ ಹಣ ವ್ಯರ್ಥ ಮಾಡದಿರಿ

ಸಿದ್ದಾಪುರ ಸಮೀಪದ ಬೆನ್ನೂರಿನಲ್ಲಿ ಕಲ್ಲೇಶ್ವರ ದೇವರ ನೂತನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಸಿದ್ದಾಪುರ ಸಮೀಪದ ಬೆನ್ನೂರಿನಲ್ಲಿ ಕಲ್ಲೇಶ್ವರ ದೇವರ ನೂತನ ರಥೋತ್ಸವ ವಿಜೃಂಭಣೆಯಿಂದ ಜರುಗಿತು.
Published on

ಪ್ರಮುಖ ಮುಖ್ಯಾಂಶಗಳು

  • ರಾಜಗುರು ವಾಮದೇವ ಮಹಾಂತ ಸ್ವಾಮೀಜಿ ಹೇಳಿಕೆ
  • ಸಿದ್ದಾಪುರ ಬೆನ್ನೂರು ಕಲ್ಲೇಶ್ವರ ಜಾತ್ರಾ
ಸಿದ್ದಾಪುರ: ಸಾಮೂಹಿಕ ವಿವಾಹವಾಗುವುದರಿಂದ ಆರ್ಥಿಕ ಹೊರೆ ತಗ್ಗುತ್ತದೆ ಎಂದು ಹಂಪಿ ಸಾವಿರ ದೇವರು ಮಹಾಂತಿನಮಠದ ಎಮ್ಮಿಗನೂರು ರಾಜಗುರು ವಾಮದೇವ ಮಹಾಂತ ಸ್ವಾಮೀಜಿ ಹೇಳಿದರು.
ಸಮೀಪದ ಬೆನ್ನೂರು ಗ್ರಾಮದಲ್ಲಿ ಕಲ್ಲೇಶ್ವರ ಜಾತ್ರಾ ಮಹೋತ್ಸವ ಹಾಗೂ ರಥೋತ್ಸವ ನಿಮಿತ್ತ ಹಮ್ಮಿಕೊಂಡ 8ಜೋಡಿ ಸಾಮೂಹಿಕ ವಿವಾಹ ಕಾರ್ಯಕ್ರಮದ ಸಾನ್ನಿಧ್ಯವಹಿಸಿ ಮಾತನಾಡಿದರು.
ಮದುವೆ ಪ್ರತಿಯೊಬ್ಬರ ಜೀವನದ ಮಹತ್ತರ ಘಟ್ಟ. ಇದಕ್ಕಾಗಿ ಅನಗತ್ಯ ಹಣ ವ್ಯರ್ಥ ಮಾಡುವ ಅಗತ್ಯವಿಲ್ಲ. ಮಾನವರು ಮರೆತು ಬಾಳುವುದಕ್ಕಿಂತ ಅರಿತು ಬಾಳಬೇಕು. ಅಂದಾಗ ಮಾತ್ರ ಬದುಕಿಗೆ ನಿಜವಾದ ಅರ್ಥ ಬರುತ್ತದೆ. ಮಿತ ಸಂತಾನ, ಮಕ್ಕಳ ಶಿಕ್ಷಣಕ್ಕೆ ಪ್ರಾಮುಖ್ಯ ನೀಡಬೇಕು ಎಂದರು.
ತುರ್ವಿಹಾಳ ಗುರುವಿನ ಮಠದ ಶಿವಯ್ಯಸ್ವಾಮಿ, ಪ್ರಭಯ್ಯಸ್ವಾಮಿ ಹಿರೇಮಠ, ಮಲ್ಲಯ್ಯಸ್ವಾಮಿ, ನಾಗಲಿಂಗಯ್ಯಸ್ವಾಮಿ ಹಿರೇಮಠ ಸೇರಿ ಗ್ರಾಮಸ್ಥರಿದ್ದರು. ಸಂಜೆ ಅದ್ದೂರಿಯಾಗಿ ಕಲ್ಲೇಶ್ವರ ದೇವರ ರಥೋತ್ಸವ ಕಾರ್ಯಕ್ರಮ ಜರುಗಿತು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಭಕ್ತರು ರಥಕ್ಕೆ ಉತ್ತತ್ತಿ ಹಾಗೂ ಬಾಳೆಹಣ್ಣು ಸಮರ್ಪಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net