ಗಂಗಾವತಿ ತಾಲೂಕಿನ ಬಂಡ್ರಾಳ ಸ.ಕಿ.ಪ್ರಾ.ಶಾಲೆಯನ್ನು ಮುಚ್ಚದಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯರು ಗ್ರಾಮದ ಶಾಲೆ ಮುಂದೆ ಪ್ರತಿಭಟನೆ ನಡೆಸಿದರು. ರಾಜ್ಯ ಸಮಿತಿ ಕಾರ್ಯದರ್ಶಿ ಸಿಂಧು ಕೌದಿ, ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಸುಂಕಾಪುರ, ಕಾರ್ಯದರ್ಶಿ ಕೆ.ಪರುಶುರಾಂ ಬಂಡ್ರಾಳ್ ಇತರರಿದ್ದರು.
ಗಂಗಾವತಿ: ತಾಲೂಕಿನ ಬಂಡ್ರಾಳ ಸ.ಕಿ.ಪ್ರಾ.ಶಾಲೆಯನ್ನು ಮುಚ್ಚದಂತೆ ಒತ್ತಾಯಿಸಿ ಎಐಡಿಎಸ್‌ಒ ಜಿಲ್ಲಾ ಸಮಿತಿ ಸದಸ್ಯರು ಗ್ರಾಮದ ಶಾಲೆ ಮುಂದೆ ಭಾನುವಾರ ಪ್ರತಿಭಟನೆ ನಡೆಸಿದರು.
ಹಾಜರಾತಿ ಕಡಿಮೆ ನೆಪದಲ್ಲಿ ಬಂಡ್ರಾಳ ಶಾಲೆಯನ್ನು ಸಮೀಪದ ವೆಂಕಟಗಿರಿ ಶಾಲೆಯಲ್ಲಿ ವಿಲೀನಗೊಳಿಸಲು ಸರ್ಕಾರ ನಿರ್ಧರಿಸಿದೆ. ಶಾಲೆಯನ್ನು ಮುಚ್ಚದಂತೆ ಒತ್ತಾಯಿಸಿ ಸಮಿತಿ ಸದಸ್ಯರು, ಪಾಲಕದೊಂದಿಗೆ ಪ್ರತಿಭಟಿಸಿದರು.
ಸಾರ್ವಜನಿಕ ಶಿಕ್ಷಣ ಉಳಿಸಿ ಹೋರಾಟ ಸಮಿತಿ ಗ್ರಾಮ ಕಾರ್ಯದರ್ಶಿ ಕೆ.ಪರುಶುರಾಮ್ ಬಂಡ್ರಾಳ್ ಮಾತನಾಡಿ, ಕೆಪಿಸಿಎಸ್ ಮ್ಯಾಗ್ನೇಟ್ ನೆಪದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವುದು ಖಂಡನೀಯ. ರಾಜ್ಯದಲ್ಲಿ 40ಸಾವಿರ ಶಾಲೆಗಳನ್ನು ಮುಚ್ಚಲು ನಿರ್ಧರಿಸಿದೆ. ಖಾಸಗೀಕರಣಕ್ಕೆ ಆದ್ಯತೆ ನೀಡುವುದಕ್ಕಾಗಿ ಸರ್ಕಾರ ಶಾಲೆಗಳನ್ನು ಮುಚ್ಚಲಾಗುತ್ತಿದ್ದು, ಬಡ ಮತ್ತು ಶೋಷಿತ ವರ್ಗದ ಮಕ್ಕಳಿಗೆ ಅನ್ಯಾಯವಾಗಲಿದೆ.
ಶಾಲೆ ವಿಲೀನ ಪ್ರಕ್ರಿಯೆ ಕೈಬಿಡದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ಸಮಿತಿ ರಾಜ್ಯ ಕಾರ್ಯದರ್ಶಿ ಸದಸ್ಯೆ ಸಿಂಧು ಕೌದಿ, ಗ್ರಾಮ ಘಟಕದ ಅಧ್ಯಕ್ಷ ನಾಗರಾಜ ಸುಂಕಾಪುರ, ಪದಾಧಿಕಾರಿಳಾದ ಬೆಟ್ಟಪ್ಪ ಜೀರಾಳ್, ಮದರ್‌ಸಾಬ್, ಹುಸೇನ್ ಪೀರಾ, ಮಲ್ಲೇಶ ಪಾಟೀಲ್, ಭೀಮಣ್ಣ, ನನ್ನೆಸಾಬ್, ದುರುಗಪ್ಪ, ರಹೆಮತ್,ಲಕ್ಷ್ಮಣ ಯಾದವ್ ಇತರರಿದ್ದರು.