ಅನಗತ್ಯ ಮೊಬೈಲ್ ಆ್ಯಪ್‌ಗಳಿಗೆ ಸ್ಪಂದಿಸದಿರಿ

ಗಂಗಾವತಿ ನಗರ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಸಮಾರೋಪದ ನಿಮಿತ್ತ  ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಹೆಚ್ಚುವರಿ ಎಸ್ಪಿ ಆರ್.ಹೇಮಂತಕುಮಾರ ಬುಧವಾರ ಚಾಲನೆ ನೀಡಿದರು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಪಿಐಗಳಾದ ಪ್ರಕಾಶ ಮಾಳೆ, ರಂಗಪ್ಪ ಎಚ್.ದೊಡ್ಮನಿ ಇತರರಿದ್ದರು.
ಗಂಗಾವತಿ ನಗರ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆ ಸಮಾರೋಪದ ನಿಮಿತ್ತ ಹಮ್ಮಿಕೊಂಡಿದ್ದ ಬೈಕ್ ರ‌್ಯಾಲಿಗೆ ಹೆಚ್ಚುವರಿ ಎಸ್ಪಿ ಆರ್.ಹೇಮಂತಕುಮಾರ ಬುಧವಾರ ಚಾಲನೆ ನೀಡಿದರು. ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್, ಪಿಐಗಳಾದ ಪ್ರಕಾಶ ಮಾಳೆ, ರಂಗಪ್ಪ ಎಚ್.ದೊಡ್ಮನಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹೆಚ್ಚುವರಿ ಎಸ್ಪಿ ಆರ್.ಹೇಮಂತಕುಮಾರ ಸಲಹೆ
  • ಗಂಗಾವತಿ ಅಪರಾಧ ತಡೆ ಮಾಸಾಚರಣೆ ಸಮಾರೋಪ
ಗಂಗಾವತಿ: ಅಪರಾಧಮುಕ್ತ ಸಮಾಜ ನಿರ್ಮಾಣಕ್ಕೆ ಪ್ರತಿಯೊಬ್ಬರ ಸಹಕಾರ ಮುಖ್ಯ ಎಂದು ಹೆಚ್ಚುವರಿ ಎಸ್ಪಿ ಆರ್.ಹೇಮಂತಕುಮಾರ ಹೇಳಿದರು.
ಇಲ್ಲಿನ ನಗರ ಠಾಣೆ ಆವರಣದಲ್ಲಿ ಪೊಲೀಸ್ ಇಲಾಖೆಯಿಂದ ಅಪರಾಧ ತಡೆ ಮಾಸಾಚರಣೆಯ ಸಮಾರೋಪದ ನಿಮಿತ್ತ ಹಮ್ಮಿಕೊಂಡ ಬೈಕ್ ರ‌್ಯಾಲಿಗೆ ಬುಧವಾರ ಚಾಲನೆ ನೀಡಿ ಮಾತನಾಡಿದರು.
ಪ್ರತಿಯೊಬ್ಬರು ಸಂಚಾರಿ ನಿಯಮಾವಳಿ ಪಾಲಿಸಬೇಕಿದ್ದು, ಹೆಲ್ಮೆಟ್ ಕಡ್ಡಾಯ. ಆನ್‌ಲೈನ್ ವಂಚಕರಿಂದ ಜಾಗೃತರಾಗಿರಬೇಕಿದ್ದು, ಮೊಬೈಲ್‌ನಲ್ಲಿ ಬರುವ ಅನಗತ್ಯ ಆ್ಯಪ್‌ಗಳಿಗೆ ಸ್ಪಂದಿಸಬಾರದು. ತಿಂಗಳ ಪರ್ಯಂತ ಜಿಲ್ಲಾದ್ಯಂತ ಅಪರಾಧ ತಡೆ ಮಾಸಾಚರಣೆ ಹಮ್ಮಿಕೊಂಡಿದ್ದು, ಶಾಲಾ-ಕಾಲೇಜುಗಳಲ್ಲಿ ಜಾಗೃತಿ ಮೂಡಿಸಲಾಗಿದೆ. ಅಪರಿಚಿತರಿಂದ ಎಚ್ಚರಿಕೆಯಿಂದ ಇರಬೇಕಿದ್ದು, ಸಿಸಿ ಕ್ಯಾಮರಾಗಳನ್ನು ಅಳವಡಿಸಿಕೊಳ್ಳುವುದು ಸೂಕ್ತ ಎಂದರು.
ಡಿವೈಎಸ್ಪಿ ಜೆ.ಎಸ್.ನ್ಯಾಮಗೌಡರ್ ಮಾತನಾಡಿ, ಕರಪತ್ರಗಳು, ಅಭಿಯಾನ ಮತ್ತು ಉಪನ್ಯಾಸ ಕಾರ್ಯಕ್ರಮಗಳ ಮೂಲಕ ಜನರಲ್ಲಿ ಜಾಗೃತಿ ಮೂಡಿಸಲಾಗಿದ್ದು, ಅಪರಾಧ ಮುಕ್ತ ಸಮಾಜಕ್ಕಾಗಿ ಪೊಲೀಸ್ ಇಲಾಖೆ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ ಎಂದರು.
ನಗರ ಪಿಐ ಪ್ರಕಾಶ ಮಾಳೆ, ಗ್ರಾಮೀಣ ಪಿಐ ರಂಗಪ್ಪ ಎಚ್.ದೊಡ್ಮನಿ, ಸಂಚಾರಿ ಪಿಎಸೈ ಶಾರದಮ್ಮ, ಪಿಎಸೈಗಳಾದ ಇಸ್ಮಾಯಿಲ್, ಜಿ.ಟಿ.ನಾಗರಾಜ್ ಇತರರಿದ್ದರು.
"

ಮಕ್ಕಳ ಕೈಯಲ್ಲಿ ವಾಹನ ನೀಡುವುದು ಅಪರಾಧವಾಗಿದ್ದು, ಪ್ರಕರಣ ದಾಖಲಿಸಿದರೆ ಪಾಲಕರಿಗೆ ಶಿಕ್ಷೆ ಜತೆಗೆ ಭಾರಿ ಪ್ರಮಾಣದ ದಂಡ ಬೀಳಲಿದೆ.

— ಆರ್. ಹೇಮಂತಕುಮಾರ ಹೆಚ್ಚುವರಿ ಎಸ್ಪಿ, ಕೊಪ್ಪಳ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net