338 ಜನರಿಗೆ ಕನ್ನಡಕಗಳ ವಿತರಣೆ

ಶ್ರೀರಾಮನಗರ ಎ.ಕೆ.ಆರ್.ದೇವಿ ಪಿಯು ಕಾಲೇಜಿನಲ್ಲಿ ಆಯೋಜಿಸಿದ್ದ ಶಿಬಿರದಲ್ಲಿ ಕಣ್ಣಿನ ತಪಾಸಣೆ ಮಾಡಿಸಿಕೊಂಡಿದ್ದವರಿಗೆ ಲಯನ್ಸ್ ಕ್ಲಬ್‌ನಿಂದ ಭಾನುವಾರ ಕನ್ನಡಕಗಳನ್ನು ವಿತರಿಸಲಾಯಿತು. ಕ್ಲಬ್‌ನ ಬೆಂಗಳೂರು ವಿಜಯನಗರ ಘಟಕದ ಅಧ್ಯಕ್ಷ ಗಂಗಾಧರರಾವ್, ತಾಲೂಕು ಘಟಕದ ಅಧ್ಯಕ್ಷ ಡಾ.ಜಿ.ದೇವರಾಜ ಚಂದ್ರಪ್ಪ, ಎಕೆಆರ್‌ಡಿ ಕಾಲೇಜು ಪ್ರತಿನಿಧಿ ಬಿ.ಬಸವರಾಜ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಜನರಿಗೆ
  • ರೀಡಿಂಗ್
  • ಕನ್ನಡಕ

ಗಂಗಾವತಿ: ಶ್ರೀರಾಮನಗರದ ಎ.ಕೆ.ಆರ್.ದೇವಿ ಪಿಯು ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಕಣ್ಣು ತಪಾಸಣೆ ಉಚಿತ ಶಿಬಿರದಲ್ಲಿ ಪಾಲ್ಗೊಂಡಿದ್ದ ಲಾನುಭವಿಗಳಿಗೆ ಲಯನ್ಸ್‌ಕ್ಲಬ್‌ನಿಂದ ಕನ್ನಡಕಗಳನ್ನು ಭಾನುವಾರ ಉಚಿತವಾಗಿ ವಿತರಿಸಲಾಯಿತು.

ಭಾರತೀಯ ವೈದ್ಯಕೀಯ ಸಂಘ, ಲಯನ್ಸ್ ಕ್ಲಬ್ ತಾಲೂಕು ಘಟಕ, ಬೆಂಗಳೂರಿನ ವಿಜಯನಗರ ಘಟಕ ಎಕೆಆರ್ ದೇವಿ ಟ್ರಸ್ಟ್ ಸಹಯೋಗದೊಂದಿಗೆ ಇತ್ತೀಚೆಗೆ ಹಮ್ಮಿಕೊಂಡಿದ್ದ ಶಿಬಿರದಲ್ಲಿ 450 ಜನರನ್ನು ತಪಾಸಣೆ ಮಾಡಲಾಗಿತ್ತು. ಭಾನುವಾರ 338 ಜನರಿಗೆ ಕನ್ನಡಗಳನ್ನು ಮತ್ತು 40 ಜನರಿಗೆ ರೀಡಿಂಗ್ ಕನ್ನಡಕಗಳನ್ನು ವಿತರಿಸಲಾಯಿತು.

ಕ್ಲಬ್ ಬೆಂಗಳೂರು ವಿಜಯನಗರ ಘಟಕದ ಅಧ್ಯಕ್ಷ ಗಂಗಾಧರರಾವ್ ಮಾತನಾಡಿದರು. ತಾಲೂಕು ಘಟಕದ ಅಧ್ಯಕ್ಷ ಡಾ.ಜಿ.ದೇವರಾಜ ಚಂದ್ರಪ್ಪ ಮಾಹಿತಿ ನೀಡಿದರು.

ಪದಾಧಿಕಾರಿಗಳಾದ ಹರೀಶ, ಅಭಿಷೇಕ್, ಬಿ.ಸತೀಶ, ಡಿ.ರಾಮಕೃಷ್ಣ, ಸುಬ್ರಮಣ್ಯೇಶ್ವರರಾವ್, ಎಕೆಆರ್‌ಡಿ ಕಾಲೇಜು ಪ್ರತಿನಿಧಿ ಬಿ.ಬಸವರಾಜ, ಸ್ವಯಂ ಸೇವಕರಾದ ಸುಧಾಕರ, ಧನಲಕ್ಷ್ಮೀ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net