ವೈವಿಧ್ಯಮಯ ಮಳಿಗೆಗಳು: ಮೇಳದಲ್ಲಿ 30 ಮಳಿಗೆಗಳಲ್ಲಿ ಕರಕುಶಲ ವಸ್ತುಗಳಿಂದ ಸಾವಯವ ಆಹಾರ ಪದಾರ್ಥಗಳವರೆಗೆ ವೈವಿಧ್ಯಮಯ ವಸ್ತುಗಳ ಸಂಗ್ರಹವಿದೆ. ವಿಶೇಷವಾಗಿ ಕಿನ್ನಾಳ ಗೊಂಬೆಗಳು, ಲವಾಣಿ ಉಡುಗೆಗಳು, ಬಿದಿರಿನ ಬುಟ್ಟಿಗಳು, ಸಾವಯವ ಉತ್ಪನ್ನಗಳು, ಬಾಳೆ ನಾರಿನ ಕಲಾಕೃತಿಗಳು ಹಾಗೂ ಸಿರಿಧಾನ್ಯದ ಉತ್ಪನ್ನಗಳು ಗ್ರಾಹಕರ ಗಮನ ಸೆಳೆಯುತ್ತಿವೆ. ಸಾರ್ವಜನಿಕರು ಮಹಿಳೆಯರು ತಯಾರಿಸಿದ ಉತ್ಪನ್ನಗಳನ್ನು ಖರೀದಿಸಿದರು. ಸ್ವಸಹಾಯ ಗುಂಪಿನ ಮಹಿಳೆಯರಿಗೆ ಉತ್ತಮ ಆದಾಯ ಗಳಿಸಲು ಮೇಳ ಸಹಕಾರಿಯಾಗಿದ್ದು, ಉತ್ಪನ್ನಗಳಿಗೆ ವಾರುಕಟ್ಟೆ ಜತೆಗೆ ಮಹಿಳಾ ಉದ್ಯಮಶೀಲತೆಗೆ ಉತ್ತೇಜನ ನೀಡುವಲ್ಲಿ ಪ್ರಮುಖ ಪಾತ್ರವಹಿಸಿದೆ.