ದ್ಯಾಮಾಂಬಿಕಾ ದೇವಿ ಜಾತ್ರೆ ವೈಭವ

ಹುಣಸಿಹಾಳದಲ್ಲಿ ಜರುಗಿದ ಗ್ರಾಮದೇವತೆ ದ್ಯಾಮಾಂಬಿಕಾ ದೇವಿ ಜಾತ್ರೆಗೆ ಅಪಾರ ಭಕ್ತರು ಸಾಕ್ಷಿಯಾದರು.
ಹುಣಸಿಹಾಳದಲ್ಲಿ ಜರುಗಿದ ಗ್ರಾಮದೇವತೆ ದ್ಯಾಮಾಂಬಿಕಾ ದೇವಿ ಜಾತ್ರೆಗೆ ಅಪಾರ ಭಕ್ತರು ಸಾಕ್ಷಿಯಾದರು.
Published on

ಪ್ರಮುಖ ಮುಖ್ಯಾಂಶಗಳು

  • ಮೆರವಣಿಗೆ
  • ನಡೆದು
  • ಸೀಮೆಗೆ
ಯಲಬುರ್ಗಾ: ತಾಲೂಕಿನ ಹುಣಸಿಹಾಳ ಗ್ರಾಮದಲ್ಲಿ ಇತ್ತೀಚಿಗೆ ದ್ಯಾಮಾಂಬಿಕಾ ದೇವಿ ಜಾತ್ರೆ ಅದ್ದೂರಿಯಾಗಿ ನಡೆಯಿತು. ಮೂರು ವರ್ಷಗಳಿಗೊಮ್ಮೆ ನಡೆಯುವ ಜಾತ್ರಾ ಮಹೋತ್ಸವ ಇದಾಗಿದ್ದು, ದೇವಿಗೆ ಬೆಳಗ್ಗೆ ವಿಶೇಷ ಅಲಂಕಾರ, ಅಭಿಷೇಕ, ಪೂಜೆ ನೆರವೇರಿತು. ಕಾಯಿ, ಕರ್ಪೂರ ಹಾಗೂ ನೈವೇದ್ಯ ಅರ್ಪಿಸಲಾಯಿತು.
ಉಡಿ ತುಂಬುವುದು ಸೇರಿ ನಾನಾ ಧಾರ್ಮಿಕ ಕಾರ್ಯಗಳು ನಡೆದವು. ತಮ್ಮ ಹರಕೆಗಳನ್ನು ಭಕ್ತರು ತೀರಿಸಿದರು. ಪ್ರಮುಖ ಬೀದಿಗಳಲ್ಲಿ  ದ್ಯಾಮಮ್ಮನ ಉತ್ಸವ ಮೂರ್ತಿ ಮೆರವಣಿಗೆ ನಡೆದು ಸೀಮೆಗೆ ತೆರಳಿ ಮರಳಿ ದೇವಸ್ಥಾನ ತಲುಪಿತು.
ನಿಲೋಗಲ್, ಗುನ್ನಾಳ, ಬೇವೂರು, ಮುರಡಿ, ನರಸಾಪುರ, ತರಲಕಟ್ಟಿ, ಕೋಳಿಹಾಳ, ಮ್ಯಾದನೇರಿ ಮತ್ತಿತರ ಗ್ರಾಮಗಳಿಂದ ಆಗಮಿಸಿದ್ದ ಭಕ್ತರು ದೇವಿಯ ದರ್ಶನ ಪಡೆದುಕೊಂಡರು. ಒಂಬತ್ತು ದಿನಗಳವರೆಗೆ ಆಯೋಜಿಸಿದ್ದ ಪುರಾಣ ಮಂಗಲಗೊಂಡಿತು.
ಪ್ರಮುಖರಾದ ಹನುಮಂತ ತಳವಾರ, ಶಿವಸಂಗಪ್ಪ ಹುಚನೂರ, ಗುರುರಾಜ ನೆಲಜೇರಿ, ಭೀಮನಗೌಡ ಪೊಲೀಸ್ ಪಾಟೀಲ್, ಹೇಮಣ್ಣ ಗೌಡ್ರ, ಶಿವಮೂರ್ತೆಪ್ಪ ಬಡಿಗೇರ, ಚಂದ್ರಣ್ಣ ಬಡಿಗೇರ, ರುದ್ರಪ್ಪ ಹುಚನೂರ, ಮೌನೇಶ ಬಡಿಗೇರ, ಶಂಕ್ರಪ್ಪ ಬಡಿಗೇರ, ಬಸಪ್ಪ ಹರಿಜನ ಇತರರಿದ್ದರು. 
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net