ದೇವಿ ಪುರಾಣ ಮಂಗಳೋತ್ಸವ ಫೆ. 8ಕ್ಕೆ

ಕೊಪ್ಪಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಲೇಬಗೇರಿ ಶ್ರೀ ಭಿಮಾಂಬಿಕಾ ಸೇವಾ ಸಮಿತಿಯ ಪದಾಧಿಕಾರಿಗಳು ಪುರಾಣ ಮಂಗಲೋತ್ಸವದ ಕುರಿತು ಮಾಹಿತಿ ನೀಡಿದರು
ಕೊಪ್ಪಳದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಲೇಬಗೇರಿ ಶ್ರೀ ಭಿಮಾಂಬಿಕಾ ಸೇವಾ ಸಮಿತಿಯ ಪದಾಧಿಕಾರಿಗಳು ಪುರಾಣ ಮಂಗಲೋತ್ಸವದ ಕುರಿತು ಮಾಹಿತಿ ನೀಡಿದರು
Published on

ಪ್ರಮುಖ ಮುಖ್ಯಾಂಶಗಳು

  • ದೇವಸ್ಥಾನ ಸಮಿತಿಯಿಂದ ಮಾಹಿತಿ
ಕೊಪ್ಪಳ: ತಾಲೂಕಿನ ಲೇಬಗೇರಿ ಗ್ರಾಮದ ಶ್ರೀ ಭೀಮಾಂಬಿಕಾ ದೇವಿಯ 25ನೇ ವರ್ಫಿದ ಪುರಾಣ ಮಹಾಮಂಗಲೋತ್ಸವ ಹಾಗೂ ರಜತ ಮಹೋತ್ಸವದ ಅಂಗವಾಗಿ ಫೆಬ್ರವರಿ 8ರಂದು 33 ಸಾಮೂಹಿಕ ವಿವಾಹ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ದೇವಸ್ಥಾನ ಸೇವಾ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಕೊಪ್ಪಳ ಗುರುವಾರ ಸುದ್ದಿಗೋಷ್ಠಿಯಲ್ಲಿ ಸಮಿತಿಯ ಪದಾಧಿಕಾರಿಗಳು ತಿಳಿಸಿದರು.
ಕಳೆದ 25 ವರ್ಷಗಳಿಂದ ನಿರಂತರವಾಗಿ ನಡೆದುಕೊಂಡು ಬಂದಿರುವ ಪುರಾಣ ಪ್ರವಚನವು ಈ ವರ್ಷ ರಜತ ಮಹೋತ್ಸವದ ಸಂಭ್ರಮದಲ್ಲಿದೆ. ಈ ಸ್ಮರಣೀಯ ಅಂಗವಾಗಿ ಗ್ರಾಮದಲ್ಲಿ ವಿವಿಧ ಧಾರ್ಮಿಕ ಹಾಗೂ ಸಾಂಸತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಕುಂಭೋತ್ಸವ ಮತ್ತು ಲಘು ರಥೋತ್ಸವ ಕಾರ್ಯಕ್ರಮವು ಫೆ. 7ರಂದು ಜರುಗಲಿದೆ.
ಈ ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಕೊಪ್ಪಳದ ಗವಿಮಠದ ಅಭಿನವ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲೆಯ ಸಂಸದರು, ಶಾಸಕರು, ಮಾಜಿ ಸಂಸದರು-ಶಾಸಕರು ಹಾಗೂ ನಗರ ಸ್ಥಳಿಯ ಸಂಸ್ಥೆಗಳ ಅಧ್ಯಕ್ಷರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದರು.
ಸೇವಾ ಸಮಿತಿ ಅಧ್ಯಕ್ಷ ದ್ಯಾಮಣ್ಣ ಮ್ಯಾದ್ನೇರಿ, ಕಾರ್ಯದರ್ಶಿ ಶೇಖರಪ್ಪ ಮಂಗಳೂರು, ದ್ಯಾಮಣ್ಣ ಕರಿಗಾರ, ಪಕೀರಗೌಡ, ಬಸವರಾಜ ಯತ್ನಟ್ಟಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net