

ಪ್ರಮುಖ ಮುಖ್ಯಾಂಶಗಳು
ಕೊಪ್ಪಳ : ಕೊಪ್ಪಳ ನಗರ ಹಾಗೂ ಭಾಗ್ಯನಗರದ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮಕ್ಕೆ ಅಳವಡಿಸಲಾಗಿದ್ದ ಬ್ಯಾನರ್ಗಳಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾವಚಿತ್ರ ಇಲ್ಲದಿರುವುದು ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ನಮ್ಮ ನಾಯಕ ಸಿದ್ದರಾಮಯ್ಯನವರು ಕೇವಲ ಪ್ಲೇಕ್ಸ್ನಲ್ಲಿ ಇಲ್ಲಾ ಎಂಬುದು ಮುಖ್ಯವಲ್ಲ. ಅನೇಕ ಜನಪರ ಕಾರ್ಯಕ್ರಮಗಳ ಮೂಲಕ ಇಡೀ ರಾಜ್ಯದ ಜನತೆಯ ಮನಸ್ಸಿನಲ್ಲಿ ಶಾಶ್ವತವಾಗಿದ್ದಾರೆ. ಯಾರೋ ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಹಾಕಿರುವ ಪಕ್ಷದ ಪ್ಲೇಕ್ಸ್ ನಲ್ಲಿ ಅವರಿಲ್ಲ ಎನ್ನಾಬಾರದು. ಅವರು ರಾಜ್ಯದ ಪ್ರತಿಯೊಬ್ಬ ವ್ಯಕ್ತಿಯ ಮನಸ್ಸಿನಲ್ಲಿದ್ದಾರೆ.
— ರಾಘವೇಂದ್ರ ಹಿಟ್ನಾಳ ಶಾಸಕ ಕೊಪ್ಪಳ.