ಪಾರಂಪರಿಕ ಶೈಲಿಯಲ್ಲಿ ಆನೆಗೊಂದಿ ಅಭಿವೃದ್ಧಿ

ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು. ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಪ್ರಮುಖರಾದ ವೀರೇಶ ಬಲ್ಕುಂದಿ, ರಾಜೇಶ್ವರಿ ಸುರೇಶ ಇತರರಿದ್ದರು.
ಗಂಗಾವತಿ ತಾಲೂಕಿನ ಆನೆಗೊಂದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಗಾಲಿ ಜನಾರ್ದನರೆಡ್ಡಿ ಶನಿವಾರ ಭೂಮಿಪೂಜೆ ನೆರವೇರಿಸಿದರು. ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ.ಆಗೋಲಿ, ಪ್ರಮುಖರಾದ ವೀರೇಶ ಬಲ್ಕುಂದಿ, ರಾಜೇಶ್ವರಿ ಸುರೇಶ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿಕೆ
  • ವಿವಿಧ ಕಾಮಗಾರಿಗೆ ಭೂಮಿಪೂಜೆ
ಗಂಗಾವತಿ: ವಿಜಯನಗರ ಸಾಮ್ರಾಜ್ಯದ ತೊಟ್ಟಿಲು ಆನೆಗೊಂದಿಯನ್ನು ಪಾರಂಪರಿಕ ಶೈಲಿಯಲ್ಲಿ ಅಭಿವೃದ್ಧಿಪಡಿಸಲಾಗುತ್ತಿದ್ದು, ಮೊದಲ ಹಂತದಲ್ಲಿ 10 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕ ಗಾಲಿ ಜನಾರ್ದನರೆಡ್ಡಿ ಹೇಳಿದರು.
ಆನೆಗೊಂದಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಆನೆಗೊಂದಿ ಭಾಗದ ಅಭಿವೃದ್ಧಿ ಕೈಗೆತ್ತಿಕೊಂಡಿದ್ದು, ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆಯಡಿ 10 ಕೋಟಿ ರೂ. ಮಂಜೂರಾಗಿದೆ. ಅಗಸಿ ಬಾಗಿಲಿನಿಂದ ನವವೃಂದಾವನ ಗಡ್ಡಿ, ಚಿಂತಾಮಣಿಯವರೆಗೆ 4 ಕೋಟಿ ರೂ.ವೆಚ್ಚದಲ್ಲಿ ರಸ್ತೆ, ಚರಂಡಿ, ುಟ್‌ಪಾತ್ ಮತ್ತು ಒಂದು ಕೋಟಿ ರೂ.ವೆಚ್ಚದಲ್ಲಿ ಸ್ಮಾರಕಗಳ ಮಾದರಿಯಲ್ಲಿ 84 ಸ್ಟೋನ್ ಲೈಟ್ ವ್ಯವಸ್ಥೆ ಮಾಡಲಾಗುವುದು ಎಂದು ತಿಳಿಸಿದರು.
ತುಂಗಾರತಿಗಾಗಿ ನವವೃಂದಾವನ ಸಂಪರ್ಕದ ನದಿ ತೀರದಲ್ಲಿ ಪ್ಲಾಟ್‌ಾರಂ ನಿರ್ಮಾಣ ಜತೆಗೆ 64 ಶಿಲಾಮಂಟಪ ಸಂಪರ್ಕಕ್ಕೆ ರಸ್ತೆ, ಪ್ರವಾಸಿಗರಿಗೆ ಮಂಟಪ ಮಾದರಿಯಲ್ಲಿ ವಿಶ್ರಾಂತಿ ಧಾಮ ಕಲ್ಪಿಸಲಾಗುವುದು. ಈಗಾಗಲೇ ಪ್ರಾಚ್ಯವಸ್ತು ಇಲಾಖೆಯೊಂದಿಗೆ ಚರ್ಚಿಸಿದ್ದು, ಪಾರಂಪರಿಕ ರೀತಿಯಲ್ಲಿ ವಿನ್ಯಾಸ ರೂಪಿಸಲಾಗುತ್ತಿದೆ. ಅದರಂತೆ ಆನೆಗೊಂದಿ ಭಾಗದ ಹೊರವಲಯದಲ್ಲಿ 12 ಎಕರೆ ಪ್ರದೇಶದಲ್ಲಿ ವಾಹನ ಪಾರ್ಕಿಂಗ್, ಕ್ಯಾಂಟೀನ್, ಶೌಚಗೃಹ ಮತ್ತು ವಿಶ್ರಾಂತಿ ಶೆಡ್ ನಿರ್ಮಿಸುವ ಯೋಜನೆಯಿದೆ ಎಂದರು.
ಶೀಘ್ರವೇ ಕೆಲಸ ಆರಂಭ: ಅಂಜನಾದ್ರಿ ಅಭಿವೃದ್ಧಿಗೆ ಭೂಮಿ ಗೊಂದಲವಿದ್ದು, ಅರಣ್ಯ ಇಲಾಖೆಯಿಂದ ಇತ್ಯರ್ಥಪಡಿಸಲು ಜಿಲ್ಲಾಡಳಿತಕ್ಕೆ ಸೂಚಿಸಲಾಗಿದೆ. ಕಾನೂನಾತ್ಮಕ ರೀತಿಯಲ್ಲಿ ಬಗೆಹರಿಸುವ ವಿಶ್ವಾಸವಿದ್ದು, 250 ಕೋಟಿ ರೂ. ಅಭಿವೃದ್ಧಿಗೆ ಮೀಸಲಿಡಲಾಗಿದೆ. ಬೆಟ್ಟದ ವ್ಯಾಪ್ತಿ ಅರಣ್ಯ ಇಲಾಖೆಗೆ ಬರಲ್ಲ ಎಂಬುವುದರ ಕುರಿತು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ. ವಾಲಿಕಿಲ್ಲಾ ಮ್ಯಾಗೋಟದ ಆದಿಶಕ್ತಿ ದೇವಾಲಯದ ಮುಖ್ಯಸ್ಥ ಬ್ರಹ್ಮಾನಂದ ಸ್ವಾಮೀಜಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮನೋಹರಗೌಡ ಹೇರೂರು, ಗ್ರಾಮೀಣ ಮಂಡಲ ಅಧ್ಯಕ್ಷ ಡಿ.ಕೆ. ಆಗೋಲಿ, ಪ್ರಮುಖರಾದ ಮಲ್ಲಿಕಾರ್ಜುನಸ್ವಾಮಿ, ಮಂಜುನಾಥ ಕಲಾಲ್, ಟಿ.ಜಿ.ಬಾಬು, ವೀರೇಶ ಬಲ್ಕುಂದಿ, ರಾಜೇಶ್ವರಿ ಸುರೇಶ, ಲಕ್ಷ್ಮಣನಾಯ್ಕ ಇತರರಿದ್ದರು.
"

ವಿವಿಧ ಇಲಾಖೆ ಮತ್ತು ಯೋಜನೆಗಳಿಂದ ಅನುದಾನ ಕ್ರೋಢೀಕರಿಸಿ ಕ್ಷೇತ್ರದ ಅಭಿವೃದ್ಧಿ ಕೈಗೊಳ್ಳಲಾಗುತ್ತಿದ್ದು, ಅವಧಿ ಪೂರ್ಣಗೊಳ್ಳುವ ಮೊದಲೇ ಚುನಾವಣೆ ಪೂರ್ವದಲ್ಲಿ ನೀಡಿದ ಭರವಸೆಯಂತೆ ಅಭಿವೃದ್ಧಿ ಕಾಮಗಾರಿ ನಿರ್ವಹಿಸಲಾಗುವುದು. — > ಗಾಲಿ ಜನಾರ್ದನರೆಡ್ಡಿ ಶಾಸಕ, ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net