ಪತ್ರಿಕೆ ಓದಿನ ಹವ್ಯಾಸ ಬೆಳೆಸಿಕೊಳ್ಳಿ

ಕುಷ್ಟಗಿ ತಾಲೂಕಿನ ದೋಟಿಹಾಳ್ ಗ್ರಾಮದಲ್ಲಿ ಪುಸ್ತಕ ಜೋಳಿಗೆ ಕಾರ್ಯಕ್ರಮ ನಡೆಯಿತು.  ಗ್ರಂಥಾಲಯ ಮೇಲ್ವಿಚಾರಕ ಶ್ರೀಕಾಂತ ಕಿರಗಿ, ಕಲಿಕಾ ಟ್ರಸ್ಟ್‌ನ ಪ್ರೇರಕಿ ಶ್ರೀದೇವಿ ರಾಯಚೂರು ಇತರರಿದ್ದರು.
ಕುಷ್ಟಗಿ ತಾಲೂಕಿನ ದೋಟಿಹಾಳ್ ಗ್ರಾಮದಲ್ಲಿ ಪುಸ್ತಕ ಜೋಳಿಗೆ ಕಾರ್ಯಕ್ರಮ ನಡೆಯಿತು. ಗ್ರಂಥಾಲಯ ಮೇಲ್ವಿಚಾರಕ ಶ್ರೀಕಾಂತ ಕಿರಗಿ, ಕಲಿಕಾ ಟ್ರಸ್ಟ್‌ನ ಪ್ರೇರಕಿ ಶ್ರೀದೇವಿ ರಾಯಚೂರು ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪುಸ್ತಕ
  • ಜೋಳಿಗೆ
  • ಕಾರ್ಯಕ್ರಮ
ಕುಷ್ಟಗಿ: ದೋಟಿಹಾಳ ಗ್ರಾಮದಲ್ಲಿ ಕಲಿಕಾ ಟಾಟಾ ಟ್ರಸ್ಟ್‌ನಿಂದ ಪುಸ್ತಕ ಜೋಳಿಗೆ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ನೀಡಲಾಯಿತು.
ಗ್ರಾಪಂ ಗ್ರಂಥಾಲಯ ಹಾಗೂ ಅರಿವು ಕೇಂದ್ರದ ಮೇಲ್ವಿಚಾರಕ ಶ್ರೀಕಾಂತ ಕಿರಿಗಿ ಮಾತನಾಡಿ, ಗ್ರಾಮೀಣರು ಗ್ರಂಥಾಲಯದಲ್ಲಿ ಹೆಚ್ಚಿನ ಸಮಯ ಕಳೆಯುವ ಮೂಲಕ ಪುಸ್ತಕ, ಪತ್ರಿಕೆ ಓದಿನ ಹವ್ಯಾಸ ಬೆಳೆಸಿಕೊಳ್ಳಬೇಕು.
ಗ್ರಂಥಾಲಯ ಕೇಂದ್ರದಲ್ಲಿ ಮ್ಯಾಗಜಿನ್, ಸ್ಪರ್ಧಾತ್ಮಕ ಪುಸ್ತಕಗಳ ಸವಲತ್ತು ಇದೆ. ಈಗಾಗಲೇ ಮನೆ ಮನೆಗೆ ತೆರಳಿ ಪುಸ್ತಕ ಸಂಗ್ರಹಿಸುವ ಕಾರ್ಯ ನಡೆದಿದೆ. ಪ್ರತಿಯೊಬ್ಬರೂ ಅರಿವು ಕೇಂದ್ರದ ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಹಿರಿಯ ನಾಗರಿಕರಾದ ಸಣ್ಣಬಸಣ್ಣ ರ‌್ಯಾವಣಿಕಿ, ಪಂಪಾಪತಿ ಬಿಜ್ಜಲ್, ಸಲೀಂ ಯಲಬುರ್ಗಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net