ಸತತ ಅಧ್ಯಯನದಿಂದ ಸಾಹಿತ್ಯ ಅಭಿರುಚಿ ಬೆಳೆಸಿಕೊಳ್ಳಿ

ಕೊಪ್ಪಳ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಐಚ್ಚಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳ ತಿರುಳ್ಗನ್ನಡ ಕನ್ನಡ ಸಂಘ ಉದ್ಘಾಟನಾ ಕಾರ್ಯಕ್ರಮವನ್ನು ಸಾಹಿತಿ ರಮೇಶ ಬನ್ನಿಕೊಪ್ಪ ಉದ್ಘಾಟಿಸಿದರು. ಪ್ರಾಂಶುಪಾಲ ವೈ.ಬಿ. ಅಂಗಡಿ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್​ ಕಿಲ್ಲೇದಾರ, ಕನ್ನಡ ವಿಭಾಗದ ಮುಖ್ಯಸ್ಥರಾದ ಯಮನೂರಪ್ಪ ಟಿ, ಡಾ. ತುಕಾರಾಮ್​ ನಾಯ್ಕ, ಡಾ. ಸಿ.ಬಿ. ಹನುಮಂತಪ್ಪ, ಡಾ. ಪ್ರಕಾಶ ಬಳ್ಳಾರಿ, ಡಾ. ಮಹಾಂತೇಶ ನೆಲಾಗಣಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ರಮೇಶ ಬನ್ನಿಕೊಪ್ಪ ಸೂಚನೆ
ಕೊಪ್ಪಳ : ಸಾಹಿತ್ಯ ಎನ್ನುವುದು ಸಿದ್ಧ ವಸ್ತುವಲ್ಲ. ಸತತ ಅಧ್ಯಯನ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಮೂಲಕ ವಿದ್ಯಾರ್ಥಿಗಳು ಕನ್ನಡ ನಾಡು-ನುಡಿ, ಸಂಸತಿ ಹಾಗೂ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬೇಕು ಎಂದು ಸಾಹಿತಿ ರಮೇಶ ಬನ್ನಿಕೊಪ್ಪ ಹೇಳಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಭಾ ಭವನದಲ್ಲಿ ಶುಕ್ರವಾರ ಐಚ್ಚಿಕ ಕನ್ನಡ ವಿಭಾಗದ ವಿದ್ಯಾರ್ಥಿಗಳ ತಿರುಳ್ಗನ್ನಡ ಕನ್ನಡ ಸಂಘ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.
ಜಿಲ್ಲೆಯು ಸಾಹಿತ್ಯ ಕ್ಷೇತ್ರದಲ್ಲಿ ರಾಜ್ಯಕ್ಕೆ ಮಾದರಿಯಾಗಿದ್ದು, ಸಾಹಿತ್ಯ ಎನ್ನುವುದು ಜನರ ಬದುಕಿನ ಅವಿಭಾಜ್ಯ ಭಾಗವಾಗಿದೆ ಎಂದರು.
ಪ್ರಾಂಶುಪಾಲ ವೈ.ಬಿ. ಅಂಗಡಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸಾಹಿತ್ಯ ಮತ್ತು ಸಾಂಸತಿಕ ಮನಸ್ಸನ್ನು ರೂಪಿಸುವಲ್ಲಿ ಇಂತಹ ಸಂಘಗಳ ಅಗತ್ಯವಿದೆ ಎಂದರು.
ಅಂತರಾಷ್ಟ್ರೀಯ ಜಾನಪದ ಹಾಡುಗಾರ ಹಾಗೂ ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಮೆಹಬೂಬ್​ ಕಿಲ್ಲೇದಾರ ಅವರು ಸಂಘವನ್ನು ಉದ್ಘಾಟಿಸಿ, ಅದ್ಭುತ ಜಾನಪದ ಗೀತೆಗಳ ಮೂಲಕ ವಿದ್ಯಾರ್ಥಿಗಳನ್ನು ರಂಜಿಸಿದರು. ಇದೇ ವೇಳೆ ಕನ್ನಡ ವಿಭಾಗದ ಮುಖ್ಯಸ್ಥರಾದ ಯಮನೂರಪ್ಪ ಟಿ. ಅವರು ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು.
ಉಪನ್ಯಾಸಕರಾದ ಡಾ. ವಿಪ್ಲವಿ, ಡಾ. ಮಂಜುಳಾ ಬಿ.ಆರ್​., ಡಾ. ಷಣ್ಮುಖಪ್ಪ ಬೋದುರ, ಡಿ. ಬಸವರಾಜ್​, ಹನುಮಪ್ಪ ಶಲೋಡಿ, ಡಾ. ತುಕಾರಾಮ್​ ನಾಯ್ಕ, ಡಾ. ಸಿ.ಬಿ. ಹನುಮಂತಪ್ಪ, ಡಾ. ಪ್ರಕಾಶ ಬಳ್ಳಾರಿ, ಡಾ. ಮಹಾಂತೇಶ ನೆಲಾಗಣಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net