ಕೆಸಿಎಸ್ ಕಾಲೇಜಿನಲ್ಲಿ ದೇಸಿ ಮೇಳ

ಗಂಗಾವತಿ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ  ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದಿಂದ ದೇಸಿ ಮೇಳದಲ್ಲಿ ಜಾನಪದ ಮೆರವಣಿಗೆ ಶುಕ್ರವಾರ ನಡೆಯಿತು. ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್, ಪ್ರಾಧ್ಯಾಪಕರಾದ ಬಸವರಾಜ್ ಅಯೋಧ್ಯ, ಡಾ. ಸುರೇಶ ಗೌಡ, ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ. ಜರೀನಾ ಇತರರಿದ್ದರು.

Published on
ಗಂಗಾವತಿ: ನಗರದ ಶ್ರೀ ಕೊಟ್ಟೂರೇಶ್ವರ ವಿದ್ಯಾವರ್ಧಕ ಸಂಘದ ಕೆಸಿಎಸ್ ಮಹಿಳಾ ಪದವಿ ಕಾಲೇಜಿನಲ್ಲಿ ವಿಶ್ವಚೇತನ ವಿದ್ಯಾರ್ಥಿನಿ ಒಕ್ಕೂಟದಿಂದ ದೇಸಿ ಮೇಳ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು.
ಸಂಪ್ರದಾಯಕ ಉಡುಗೆಯೊಂದಿಗೆ ಭಾಗವಹಿಸಿದ್ದ ವಿದ್ಯಾರ್ಥಿನಿಯರು ಮತ್ತು ಉಪನ್ಯಾಸಕಿಯರು, ಚಕ್ಕಡಿಯೊಂದಿಗೆ ಸವಾರಿ ಪರಿಕಲ್ಪನೆಯಡಿ ಜಾನಪದ ಮೆರವಣಿಗೆ ಹಮ್ಮಿಕೊಂಡಿದ್ದರು. ಕೃಷಿ ಪ್ರಧಾನ ದೇಶವಾಗಿದ್ದು, ಕೃಷಿಗೆ ಪೂರಕವಾದ ಎತ್ತು ಮತ್ತು ಚಕ್ಕಡಿಯನ್ನು ಪರಿಚಯಿಸಲಾಯಿತು. ಗ್ರಾಮೀಣ ಸೊಗಡಿನ ಭಕ್ಷ್ಯಗಳ ದೇಸಿ ಔತಣಕೂಟ ನಡೆಯಿತು.
ವಿದ್ಯಾರ್ಥಿನಿಯರು ಮನೆಯಿಂದ ತಯಾರಿಸಿ ತಂದ ರೊಟ್ಟಿ, ಕಾಳುಪಲ್ಲೆ, ಹೋಳಿಗೆ, ಚಿತ್ರಾನ್ನ, ಮೊಸರನ್ನ, ಸಾಂಬರ್ ಮುಂತಾದವುಗಳನ್ನು ಗುರುಗಳೊಂದಿಗೆ ಕುಳಿತು ಸಹಭೋಜನ ಸವಿದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿನಿಯರಿಂದ ಗುರುವಂದನಾ ಕಾರ್ಯಕ್ರಮ ಜರುಗಿತು. ದೇಸಿ ಮೇಳದ ಉದ್ದೇಶ ಕುರಿತು ಪ್ರಾಚಾರ್ಯ ಡಾ.ಶರಣಬಸಪ್ಪ ಕೋಲ್ಕಾರ್ ಮಾಹಿತಿ ನೀಡಿದರು. ಉಪ ಪ್ರಾಚಾರ್ಯ ಡಾ.ಕೆ.ಎಂ. ಬಸವರಾಜ್, ಪ್ರಾಧ್ಯಾಪಕರಾದ ಬಸವರಾಜ್ ಅಯೋಧ್ಯ, ಡಾ. ಸುರೇಶ ಗೌಡ, ಒಕ್ಕೂಟದ ಕಾರ್ಯಾಧ್ಯಕ್ಷೆ ಡಾ. ಜರೀನಾ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net