ಬುದ್ಧಿಮಾಂಧ್ಯ ಯುವಕ ಸಾವು

ಕೊಪ್ಪಳದಲ್ಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಡಿ ನಡೆಯುತ್ತಿರುವ ನಿರಾಶ್ರಿತರ ಬುದ್ಧಿಮಾಂದ್ಯ ಪುರುಷರ ಅನುಪಾಲನ ಗೃಹ.
ಕೊಪ್ಪಳದಲ್ಲಿನ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಡಿ ನಡೆಯುತ್ತಿರುವ ನಿರಾಶ್ರಿತರ ಬುದ್ಧಿಮಾಂದ್ಯ ಪುರುಷರ ಅನುಪಾಲನ ಗೃಹ.
Published on

ಪ್ರಮುಖ ಮುಖ್ಯಾಂಶಗಳು

  • ಸಕಾಲಕ್ಕೆ ಚಿಕಿತ್ಸೆ ಕೊಡಿಸದ ಅಧಿಕಾರಿಗಳು ?
ಕೊಪ್ಪಳ : ನಗರದ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಡಿಯಲ್ಲಿ ನಡೆಯುತ್ತಿರುವ ನಿರಾಶ್ರಿತರ ಬುದ್ಧಿಮಾಂದ್ಯ ಪುರುಷರ ಅನುಪಾಲನ ಗೃಹದಲ್ಲಿ ಮಂಗಳವಾರ ಬೆಂಗಳೂರು ಮೂಲದ ಬಬ್ಲೂ (35) ಎಂಬ ಯುವಕ ಮೃತಪಟ್ಟಿದ್ದಾನೆ. ಕ್ಯಾನ್ಸರ್​ ನಿಂದ ಬಳಲುತ್ತಿದ್ದ ಯುವಕನಿಗೆ ಸಕಾಲಕ್ಕೆ ಚಿಕಿತ್ಸೆ ಕೊಡಿಸಿಲ್ಲವೆಂಬ ಆರಂಭ ಕೇಳಿಬಂದಿದೆ.
ಕ್ಯಾನ್ಸರ್​ ಹಾಗೂ ಬಹುಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದ. ಚಿಕಿತ್ಸೆಗಾಗಿ ಆಗಾಗ ಕೊಪ್ಪಳ ಜಿಲ್ಲಾಸ್ಪತ್ರೆಗೆ ಕರೆದೊಯ್ಯಲಾಗುತ್ತಿತ್ತು. ಇತ್ತೀಚೆಗೆ ವೈದ್ಯರು ಈತನ ಸ್ಥಿತಿ ಗಂಭೀರವಾಗಿರುವುದನ್ನು ಗಮನಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್​ ಆಸ್ಪತ್ರೆಗೆ ದಾಖಲಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು. ಆದರೆ, ಅಧಿಕಾರಿಗಳು ವೈದ್ಯರ ನಿರ್ದೇಶನವನ್ನು ಪಾಲಿಸುವಲ್ಲಿ ವಿಳಂಬ ಮಾಡಿದ್ದಾರೆನ್ನಲಾಗಿದೆ. ಮಂಗಳವಾರ ಬೆಳಿಗ್ಗೆ ಅನುಪಾಲನ ಗೃಹದಲ್ಲೆ ಯುವಕ ಕೊನೆಯುಸಿರೆಳೆದಿದ್ದಾನೆ.
ಈ ಅನುಪಾಲನ ಗೃಹ ಆರಂಭವಾಗಿ ಕೇವಲ 9 ತಿಂಗಳು ಕಳೆದಿದೆ. ಆರಂಭದಲ್ಲಿ ಬೆಂಗಳೂರಿನಿಂದ ಸುಮಾರು 20 ಜನರನ್ನು ಇಲ್ಲಿಗೆ ಕರೆತರಲಾಗಿತ್ತು. ಈಗಾಗಲೇ 6 ಜನ ಬುದ್ಧಿಮಾಂದ್ಯರು ಸಾವನ್ನಪ್ಪಿದ್ದಾರೆ. ಕಳೆದ ಫೆಬ್ರವರಿ ತಿಂಗಳ ಒಂದೇ ವಾರದಲ್ಲಿ ಇಬ್ಬರು ಮೃತಪಟ್ಟಿದ್ದಾರೆ.
ಅನುಪಾಲನ ಗೃಹದ ಅವ್ಯವಸ್ಥೆಯ ಬಗ್ಗೆ ಗಂಭೀರ ಆರೋಪಗಳು ಕೇಳಿಬರುತ್ತಿವೆ. ನಿವಾಸಿಗಳಿಗೆ ಪೌಷ್ಟಿಕ ಆಹಾರ ಹಾಗೂ ಕುಡಿಯಲು ಶುದ್ಧ ನೀರಿನ ವ್ಯವಸ್ಥೆಯೂ ಇಲ್ಲ ಎನ್ನಲಾಗಿದೆ. ಅನಾರೋಗ್ಯಕ್ಕೊಳಗಾದವರಿಗೆ ಸಕಾಲದಲ್ಲಿ ಸೂಕ್ತ ಚಿಕಿತ್ಸೆ ಸಿಗುತ್ತಿಲ್ಲ. ಕೇಂದ್ರ ನಿರ್ವಹಿಸಲು ಅಗತ್ಯವಿರುವಷ್ಟು ಸಿಬ್ಬಂದಿ ಇಲ್ಲದಿರುವುದು ಸಮಸ್ಯೆಗೆ ಕಾರಣ ಎನ್ನಲಾಗುತ್ತಿದೆ.
"

ವಾರದ ಹಿಂದೆ ಯುವಕನನ್ನು ಆಸ್ಪತ್ರೆಗೆ ಕರೆದೊಯ್ದಾಗ ಹುಬ್ಬಳ್ಳಿಗೆ ಕರೆದೊಯ್ಯಲು ವೈದ್ಯರು ಹೇಳಿದ್ದರು. ಆದರೆ ನಮ್ಮ ಅಧಿಕಾರಿಗಳು ಬೆಂಗಳೂರಿಗೆ ಹೋಗಿದ್ದರಿಂದ ತಕ್ಷಣ ಕರೆದೊಯ್ಯಲು ಸಾಧ್ಯವಾಗಲಿಲ್ಲ. ಇಂದು ಬೆಳಿಗ್ಗೆ ಆತ ಮೃತಪಟ್ಟಿದ್ದಾನೆ.

"

ನಿರಾಶ್ರಿತ ಬುದ್ಧಿಮಾಂಧ್ಯರನ್ನು ಅನುಪಾಲನ ಗೃಹಕ್ಕೆ ಕಳಿಸಿದ್ದಾರೆ. ಯುವಕನಿಗೆ ಕ್ಯಾನ್ಸರ್​ ಹಾಗೂ ಬಹುಅಂಗಾಂಗ ವೈಫಲ್ಯವಿತ್ತು. ಚಿಕಿತ್ಸೆ ಕೊಡಿಸಿದ್ದೆವು. ಫಲಕಾರಿಯಾಗದೆ ಮೃತಪಟ್ಟಿದ್ದಾನೆ. ಕೇಂದ್ರದ ಬಹುತೇಕರಿಗೆ ಅನಾರೋಗ್ಯ ಇದೆ.&ವೆಂಕಟೇಶ ದೇಶಪಾಂಡೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net