ಕಟ್ಟಡ ಕಾರ್ಮಿಕರ ಬೇಡಿಕೆ ಈಡೇರಿಸಲು ಆಗ್ರಹ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಸವರಾಜ್​ ಶೀಲವಂತರ್​, ಕಾಸಿಂ ಸರ್ದಾರ್​, ಶರಣು ಗಡ್ಡಿ, ತುಕಾರಾಮ್​ ಪಾತ್ರೋಟಿ, ಎಸ್​.ಎ. ಗಫಾರ್​ ಇತರರಿದ್ದರು.
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘಟನೆಗಳ ಸಮನ್ವಯ ಸಮಿತಿ ಪದಾಧಿಕಾರಿಗಳು ಮಂಗಳವಾರ ಕೊಪ್ಪಳದಲ್ಲಿ ಪ್ರತಿಭಟನೆ ನಡೆಸಿದರು. ಪ್ರಮುಖರಾದ ಬಸವರಾಜ್​ ಶೀಲವಂತರ್​, ಕಾಸಿಂ ಸರ್ದಾರ್​, ಶರಣು ಗಡ್ಡಿ, ತುಕಾರಾಮ್​ ಪಾತ್ರೋಟಿ, ಎಸ್​.ಎ. ಗಫಾರ್​ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕಟ್ಟಡ ಕಾರ್ಮಿಕ ಸಂಘಗಳಿಂದ ಪ್ರತಿಭಟನೆ

ಕೊಪ್ಪಳ : ಕಟ್ಟಡ ಕಾರ್ಮಿಕರು ಎದುರಿಸುತ್ತಿರುವ ವಿವಿಧ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವಂತೆ ಆಗ್ರಹಿಸಿ ಕಟ್ಟಡ ಕಾರ್ಮಿಕರು ಮಂಗಳವಾರ ನಗರದ ಅಶೋಕ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಐಎಫ್​ಟಿಯು ಜಿಲ್ಲಾ ಮುಖಂಡ ಬಸವರಾಜ್​ ಶೀಲವಂತರ್​ ಮಾತನಾಡಿ, ಕಟ್ಟಡ ಕಾರ್ಮಿಕರ ಕಲ್ಯಾಣ ನಿಧಿಯನ್ನು ಸರ್ಕಾರ ಸಮರ್ಪಕವಾಗಿ ಬಳಸುತ್ತಿಲ್ಲ. ಬಾಕಿ ಇರುವ ಶೈಕ್ಷಣಿಕ ಸಹಾಯಧನವನ್ನು ತಕ್ಷಣ ಬಿಡುಗಡೆ ಮಾಡಬೇಕು. ಹೈಕೋರ್ಟ್​ ಆದೇಶದಂತೆ ಯಾವುದೇ ವಿಳಂಬವಿಲ್ಲದೆ ಸಹಾಯಧನ ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಮುಖಂಡ ಕಾಸಿಂ ಸರ್ದಾರ್​ ಮಾತನಾಡಿ, ಅಂಬೇಡ್ಕರ್​ ಕಾರ್ಮಿಕ ಸೇವಾ ಕೇಂದ್ರವನ್ನು ರದ್ದುಪಡಿಸಿ, ಕಟ್ಟಡ ಕಾರ್ಮಿಕರ ಸಾಮಾಜಿಕ ಭದ್ರತೆಯನ್ನು ಬಲಪಡಿಸಲು ಮಾಸಿಕ ಪಿಂಚಣಿಯನ್ನು 5 ಸಾವಿರಕ್ಕೆ ಹೆಚ್ಚಿಸಬೇಕು. ಮದುವೆ ಸಹಾಯಧನವನ್ನು 2 ಲಕ್ಷಕ್ಕೆ ಏರಿಸಬೇಕು ಹಾಗೂ ಹೆರಿಗೆ ಸಹಾಯಧನವನ್ನು ನೇರವಾಗಿ ಫಲಾನುಭವಿಗಳ ಬ್ಯಾಂಕ್​ ಖಾತೆಗೆ ಜಮಾ ಮಾಡುವ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಆಗ್ರಹಿಸಿದರು.
ಎಐಯುಟಿಯುಸಿ ಮುಖಂಡ ಶರಣು ಗಡ್ಡಿ ಮಾತನಾಡಿ, ಕಟ್ಟಡ ಕಾರ್ಮಿಕರ ಹೆಸರಿನಲ್ಲಿ ಅನಗತ್ಯವಾಗಿ ಕಿಟ್​ ಖರೀದಿಸುವ ಪದ್ಧತಿ ನಿಲ್ಲಿಸಿ, ಹಣವನ್ನು ನೇರವಾಗಿ ಕಾರ್ಮಿಕರ ಖಾತೆಗೆ ಜಮಾ ಮಾಡಬೇಕೆಂದು ಒತ್ತಾಯಿಸಿದರು.
ಐಎಫ್​ಟಿಯು ಜಿಲ್ಲಾ ಮುಖಂಡರಾದ ತುಕಾರಾಮ್​ ಪಾತ್ರೋಟಿ, ಎಸ್​.ಎ. ಗಫಾರ್​, ಎಐಸಿಸಿಟಿಯು ಮುಖಂಡರಾದ ಹನುಮಂತಪ್ಪ ಹುಲಿಹೈದರ, ಚನ್ನಬಸಪ್ಪ, ಗಾಳೇಪ್ಪ ಮುಂಗೋಲಿ, ಅಮೀರ್​ ಪಾಫಿಾ, ಮಂಜುನಾಥ, ಪಕೀರಪ್ಪ, ಪ್ರಕಾಶ ದೇವರಮನಿ, ನಾಗರಾಜ್​ ಹುಲಿಗಿ, ಶರಣಪ್ಪ ಗೊರ್ಪಡೆ, ಯಮನೂರಪ್ಪ, ಕುಮಾರ್​, ಚಾಂದ್​ ಭಾಫಿಾ, ಬಸವರಾಜ್​ ಬೊಮ್ಮನಾಳ, ನಾಗಪ್ಪ ತಹಶೀಲ್ದಾರ್​, ಯಲ್ಲಪ್ಪ ಬೋಚನಲ್ಲಿ ಮರಿಸ್ವಾಮಿ, ಫಿಣ್ಮುಖ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net