ಕಾರ್ಮಿಕರ ಹಕ್ಕುಗಳಿಗೆ ಒತ್ತಾಯ

ಕೊಪ್ಪಳ ತಾಲೂಕು ಸೆಂಟರ್​ ಆಫ್​ ಇಂಡಿಯನ್​ ಟ್ರೇಡ್​ ಯೂನಿಯನ್ಸ್​ ಸಮಿತಿಯಿಂದ ಗುರುವಾರ ನಗರದ ಅಶೋಕ ವೃತ್ತದಿಂದ ಕಿನ್ನಾಳ ರಸ್ತೆಯಲ್ಲಿರುವ ನೌಕರರ ಭವನದವರೆಗೆ ಮೆರವಣಿಗೆ ನಡೆಸಲಾಯಿತು. ಸಿಐಟಿಯು ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ, ಅನ್ನಪೂರ್ಣಮ್ಮ ಬೃಹನ್ಮಠವ, ಬಿಸಿಯೂಟ ಸಂಘದ ಶಂಕ್ರಮ್ಮ ಕಿನ್ನಾಳ, ಅಮರೇಶ ಡಾಣಿ, ಕೊಟ್ರೇಶ್​ ಕೊಪ್ಪಳ, ಸುಂಕಪ್ಪ ಗದಗ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಿಐಟಿಯು ನಿಂದ ಮೆರವಣಿಗೆ
  • ಮೇ ದಿನಾಚರಣೆ
ಕೊಪ್ಪಳ : ವಿಶ್ವ ಕಾರ್ಮಿಕರ ದಿನಾಚರಣೆ ಅಂಗವಾಗಿ ಕೊಪ್ಪಳ ತಾಲೂಕು ಸೆಂಟರ್​ ಆಫ್​ ಇಂಡಿಯನ್​ ಟ್ರೇಡ್​ ಯೂನಿಯನ್ಸ್​ ಸಮಿತಿಯಿಂದ ಗುರುವಾರ ನಗರದ ಅಶೋಕ ವೃತ್ತದಿಂದ ಕಿನ್ನಾಳ ರಸ್ತೆಯಲ್ಲಿರುವ ನೌಕರರ ಭವನದವರೆಗೆ ಮೆರವಣಿಗೆ ನಡೆಸಿ ಬಹಿರಂಗ ಸಭೆ ಆಯೋಜಿಸಲಾಯಿತು.
ಅಸಂಘಟಿತ ಕಾರ್ಮಿಕರಿಗೆ ಕನಿಷ್ಠ 41 ಸಾವಿರ ರೂ. ವೇತನ, ಪಿಂಚಣಿ, ಸಾಮಾಜಿಕ ಭದ್ರತೆ ಸೇರಿದಂತೆ ವಿವಿಧ ಸೌಲಭ್ಯಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒದಗಿಸಬೇಕು ಎಂದು ಒತ್ತಾಯಿಸಲಾಯಿತು. ಕಾರ್ಮಿಕ ವರ್ಗದ ಹಕ್ಕುಗಳ ರಕ್ಷಣೆ, ಬದುಕಲು ಯೋಗ್ಯ ಕೂಲಿ, ಗುತ್ತಿಗೆ ಕಾರ್ಮಿಕರ ಉದ್ಯೋಗ ಭದ್ರತೆ, ಮಹಿಳಾ ನೌಕರರನ್ನು ಕಾರ್ಮಿಕರೆಂದು ಪರಿಗಣಿಸುವುದು, ನಾಲ್ಕು ಕಾರ್ಮಿಕ ಸಂಹಿತೆಗಳನ್ನು ರದ್ದುಪಡಿಸುವುದು ಹಾಗೂ ಕಾರ್ಮಿಕ ವಿರೋಧಿ ನೀತಿಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಲಾಯಿತು.
ಸಿಐಟಿಯು ಜಿಲ್ಲಾ ಅಧ್ಯಕ್ಷ ಹನುಮೇಶ ಕಲ್ಮಂಗಿ, ಅಂಗನವಾಡಿ ಸಂಘದ ಅನ್ನಪೂರ್ಣಮ್ಮ ಬೃಹನ್ಮಠ, ಬಿಸಿಯೂಟ ಸಂಘದ ಶಂಕ್ರಮ್ಮ ಕಿನ್ನಾಳ, ಪಂಚಾಯತ ನೌಕರರ ಸಂಘದ ಅಮರೇಶ ಡಾಣಿ, ಕೊಟ್ರೇಶ್​ ಕೊಪ್ಪಳ, ಕೃಷಿ ಕೂಲಿಕಾರರ ಸಂಘದ ಸುಂಕಪ್ಪ ಗದಗ, ಕಿಲೋರ್ಸ್ಕರ್​ ಕಾರ್ಮಿಕ ಸಂಘದ ಬಸವರಾಜ, ಶರಣಪ್ಪ, ರವಿ ಜೋಶಿ, ರಾಮಕೃಷ್ಣ, ಎಪಿಎಂಸಿ ಹಮಾಲಿ ಕಾರ್ಮಿಕರ ಸಂಘದ ಗಾಳೆಪ್ಪ ಟಪಾಲ್​, ಮಂಜುನಾಥ ಬಂಗಾಳಿ, ರಾಮಣ್ಣ, ಬಸವರಾಜ ಪೂಜಾರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net