ಕೊಪ್ಪಳದಲ್ಲಿ ಸೋಮವಾರ ಶಿಕ್ಷಕರ ಪರಿವೀಕ್ಷಣಾ ಅವಧಿಯ ಘೋಷಿಸಲು ಮತ್ತು ಕಾಲಮಿತಿ ಬಡ್ತಿಗೆ ಆಗ್ರಹ ಜಿಪಿಟಿ ಶಿಕ್ಷಕರಿಂದ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ಪ್ರಾಣೇಶಾಚಾರ್ಯಗೆ ಮನವಿ ಪತ್ರ ಸಲ್ಲಿಸಲಾಯಿತು. ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ, ಕೊಪ್ಪಳ ತಾಲೂಕು ಸಂಚಾಲಕ ಪ್ರಹ್ಲಾದ್ ಹೂಗಾರ್, ನಿರ್ದೇಶಕ ಪರಶುರಾಮ ಶಹಪುರ್, ಶಿಕ್ಷಕ ಕಿರಣ್ ಕುಮಾರ್, ಸಂತೋಷ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಜಿಪಿಟಿ ಶಿಕ್ಷಕರಿಂದ ಮನವಿ
ಕೊಪ್ಪಳ : ಈ ಹಿಂದೆ ನೇಮಕಗೊಂಡ ಪದವೀಧರ ಪ್ರಾಥಮಿಕ ಶಿಕ್ಷಕರ ಪರಿವೀಕ್ಷಣಾ ಅವಧಿಯನ್ನು ತೃಪ್ತಿಕರವೆಂದು ಘೋಷಿಸಲು ಹಾಗೂ ಹಿರಿಯ ಶಿಕ್ಷಕರಿಗೆ ಕಾಲಮಿತಿ ಬಡ್ತಿ ನೀಡುವಂತೆ ಒತ್ತಾಯಿಸಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಗೆ ಸೋಮವಾರ ಶಿಕ್ಷಕರ ಸಂಘಟನೆಯ ವತಿಯಿಂದ ಮನವಿ ಸಲ್ಲಿಸಲಾಯಿತು.
2022-&23ನೇ ಸಾಲಿನಲ್ಲಿ ನೇಮಕಗೊಂಡ ಶಿಕ್ಷಕರು ಈಗಾಗಲೇ ಎರಡು ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ್ದಾರೆ. ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳನ್ನು ಆಯಾ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ಸಲ್ಲಿಸಲಾಗಿದೆ. ಆದರೆ, ಕೊಪ್ಪಳ ತಾಲೂಕು ಹೊರತುಪಡಿಸಿ ಜಿಲ್ಲೆಯ ಉಳಿದ ತಾಲೂಕುಗಳಿಂದ ಈ ಪ್ರಸ್ತಾವನೆಗಳು ಇನ್ನೂ ಉಪ ನಿರ್ದೇಶಕರ ಕಚೇರಿಗೆ ಸಲ್ಲಿಕೆಯಾಗಿಲ್ಲ. ಈ ವಿಳಂಬವನ್ನು ತಪ್ಪಿಸಿ ಕೂಡಲೇ ಪ್ರಸ್ತಾವನೆ ಸಲ್ಲಿಸಲು ನಿರ್ದೇಶನ ನೀಡಬೇಕೆಂದು ಒತ್ತಾಯಿಸಿದರು. 2016ರಲ್ಲಿ ನೇಮಕಗೊಂಡ ಜಿಪಿಟಿ ಶಿಕ್ಷಕರ 10 ವರ್ಷಗಳ ಸೇವಾ ಅವಧಿ ಪೂರ್ಣಗೊಳ್ಳುತ್ತಿರುವುದರಿಂದ, ಸೇವಾ ಪುಸ್ತಕದ ಆಧಾರದ ಮೇಲೆ ವಿಶೇಷ ದೃಢೀಕರಣದೊಂದಿಗೆ ಕಾಲಮಿತಿ ಬಡ್ತಿಯನ್ನು ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕರ ಕಚೇರಿಯ ಪತ್ರಾಂಕಿತ ಸಹಾಯಕ ಪ್ರಾಣೇಶಾಚಾರ್ಯಗೆ ಮನವಿ ಪತ್ರ ಸಲ್ಲಿಸಲಾಯಿತು.
ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಾರುತಿ ಮ್ಯಾಗಳಮನಿ, ಕೊಪ್ಪಳ ತಾಲೂಕು ಸಂಚಾಲಕ ಪ್ರಹ್ಲಾದ್ ಹೂಗಾರ್, ನಿರ್ದೇಶಕ ಪರಶುರಾಮ ಶಹಪುರ್, ಶಿಕ್ಷಕ ಕಿರಣ್ ಕುಮಾರ್, ಸಂತೋಷ ಇತರರಿದ್ದರು.