ವಿಜಯನಗರ ಕಾಲುವೆಗೆ ನೀರು ಬಿಡುಗಡೆಗೆ ಆಗ್ರಹ

ತಾಲೂಕಿನ ಮುನಿರಾಬಾದ್​ದಲ್ಲಿ ಕಾಲುವೆಗೆ ನೀರು ಬಿಡುಗಡೆಗೆ ಮಾಡದಿದ್ದರೆ ಮುನಿರಾಬಾದ್​ ಡ್ಯಾಮ್​ ಎದುರು ರೈತರ ಪ್ರತಿಭಟನೆ ಮಾಡುವುದಾಗಿ ಸಭೆ ಮಾಡಿದರು. ರೈತರಾದ ಕಾಶಯ್ಯ ಹರ್ಲಾಪುರ, ಪ್ರಭುರಾಜ್​ ಪಾಟೀಲ್​, ಖಾಜಾಸಾಬ ಹೊಸಳ್ಳಿ, ಮಹೇಶ್ವರಗೌಡ, ಹನುಮಂತಪ್ಪ ಬಿಂಗಿ, ಹರಿಕೃಷ್ಣ, ದೇವರಾಜ್​ ಪಾಟೀಲ್​, ಶರಣಬಸಪ್ಪ ಆನೆಗೊಂದಿ, ಪ್ರದಿಪ ಹಿಟ್ನಾಳ್​, ಬೀರಪ್ಪ ಶಿವಪುರ ಇದ್ದರು.
ತಾಲೂಕಿನ ಮುನಿರಾಬಾದ್​ದಲ್ಲಿ ಕಾಲುವೆಗೆ ನೀರು ಬಿಡುಗಡೆಗೆ ಮಾಡದಿದ್ದರೆ ಮುನಿರಾಬಾದ್​ ಡ್ಯಾಮ್​ ಎದುರು ರೈತರ ಪ್ರತಿಭಟನೆ ಮಾಡುವುದಾಗಿ ಸಭೆ ಮಾಡಿದರು. ರೈತರಾದ ಕಾಶಯ್ಯ ಹರ್ಲಾಪುರ, ಪ್ರಭುರಾಜ್​ ಪಾಟೀಲ್​, ಖಾಜಾಸಾಬ ಹೊಸಳ್ಳಿ, ಮಹೇಶ್ವರಗೌಡ, ಹನುಮಂತಪ್ಪ ಬಿಂಗಿ, ಹರಿಕೃಷ್ಣ, ದೇವರಾಜ್​ ಪಾಟೀಲ್​, ಶರಣಬಸಪ್ಪ ಆನೆಗೊಂದಿ, ಪ್ರದಿಪ ಹಿಟ್ನಾಳ್​, ಬೀರಪ್ಪ ಶಿವಪುರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮುನಿರಾಬಾದ್​ ಡ್ಯಾಮ್​ ಎದುರು ರೈತರ ಪ್ರತಿಭಟನೆ
ಕೊಪ್ಪಳ : ತುಂಗಭದ್ರಾ ಜಲಾಶಯದಿಂದ ವಿಜಯನಗರ ಎಡದಂಡೆ, ಹಿರೇಹಳ್ಳ ಎಡದಂಡೆ ಹಾಗೂ ಬಲದಂಡೆ ಕಾಲುವೆಗಳಿಗೆ ತಕ್ಷಣ ನೀರು ಬಿಡುಗಡೆ ಮಾಡುವಂತೆ ಆಗ್ರಹಿಸಿ ಜುಲೈ 20ರಂದು ಮುನಿರಾಬಾದ್​ ಡ್ಯಾಮ್​ ಎದುರು ಪಕ್ಷಾತಿತವಾಗಿ ಉಗ್ರ ಪ್ರತಿಭಟನೆ ನಡೆಸಲು ಮುನಿರಾಬಾದ್​ನಲ್ಲಿ ರೈತರ ನಿರ್ಧರಿಸಿದ್ದಾರೆ.
ಜಲಾಶಯಕ್ಕೆ ಪ್ರಸ್ತುತ ಸುಮಾರು 1,137 ಕ್ಯೂಸೆಕ್​ ಒಳಹರಿವು ಇದ್ದು, 3,493 ಕ್ಯೂಸೆಕ್​ ನೀರನ್ನು ಬಲದಂಡೆ ಕಾಲುವೆ ಹಾಗೂ ನದಿಯ ಮೂಲಕ ಹೊರಹರಿಸಲಾಗುತ್ತಿದೆ. ಜಲಾಶಯದಲ್ಲಿ ಸುಮಾರು 26 ಟಿಎಂಸಿ ನೀರು ಸಂಗ್ರಹವಿರುವುದರಿಂದ ವಿಜಯನಗರ ಕಾಲುವೆಗಳಿಗೆ ನೀರು ಹರಿಸಲು ಯಾವುದೇ ಅಡ್ಡಿಯಿಲ್ಲ ಎಂದು ರೈತರು ಒತ್ತಾಯಿಸಿದ್ದಾರೆ. ಹಲವು ಬಾರಿ ಸಭೆ ನಡೆಸಿ ತುಂಗಭದ್ರಾ ಮಂಡಳಿ ಹಾಗೂ ನೀರಾವರಿ ಇಲಾಖೆಗೆ ಮನವಿ ಸಲ್ಲಿಸಿದ್ದರೂ, ಸರ್ಕಾರದ ಆದೇಶದ ನೆಪ ಹೇಳಿ ಅಧಿಕಾರಿಗಳು ಕಾಲುವೆಗಳಿಗೆ ನೀರು ಬಿಡಲು ನಿರಾಕರಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ.
ರೈತರೊಂದಿಗೆ ಸೌಜನ್ಯದಿಂದ ವರ್ತಿಸದೇ ಬೇಜವಾಬ್ದಾರಿಯಿಂದ ಪ್ರತಿಕ್ರಿಯಿಸುತ್ತಿರುವ ಅಧಿಕಾರಿಗಳ ನಡೆ ಖಂಡನೀಯ. ಸುಮಾರು 600 ವರ್ಷಗಳ ಇತಿಹಾಸ ಹೊಂದಿರುವ ವಿಜಯನಗರ ಕಾಲುವೆಯನ್ನು ಸಾವಿರಾರು ರೈತರು ಅವಲಂಬಿಸಿದ್ದು, ಬಚಾವತ್​ ತೀರ್ಪು ಹಾಗೂ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಪಿನ ಪ್ರಕಾರ ವಿಜಯನಗರ ಕಾಲುವೆಗಳ ಐತಿಹಾಸಿಕ ನೀರಿನ ಬಳಕೆಗೆ ಆದ್ಯತೆ ನೀಡಬೇಕಾಗಿದೆ ಎಂದು ರೈತರು ನೆನಪಿಸಿದ್ದಾರೆ. ವಾರ್ಷಿಕ 5.71 ಟಿಎಂಸಿ ಐತಿಹಾಸಿಕ ನೀರಿನ ಹಕ್ಕು ಇರುವುದರಿಂದ ಸರ್ಕಾರ ತಾರತಮ್ಯ ಮಾಡದೆ ನಿಗದಿತ ಪ್ರಮಾಣದ ನೀರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ರಾಂಪುರ, ಮಲ್ಲಾಪುರ, ಆನೆಗೊಂದಿ, ಸಾಣಾಪುರ, ತಿಮ್ಮಾಪುರ, ಬಸಾಪುರ, ಹೊಸ ಹರ್ಲಾಪುರ, ಶಿವಪುರ, ಅಗಳಿಕೇರಾ, ಹಿಟ್ನಾಳ್​, ಹುಲಿಗಿ, ಹೊಸಳ್ಳಿ, ಮುನಿರಾಬಾದ್​ ಸೇರಿದಂತೆ ಹಲವು ಗ್ರಾಮಗಳ ರೈತರು ಈ ಹೋರಾಟದಲ್ಲಿ ಭಾಗವಹಿಸಲಿದ್ದಾರೆ. ಕಾಲುವೆಗಳಿಗೆ ನೀರು ಹರಿಸದಿದ್ದರೆ ಕೃಷಿ ಚಟುವಟಿಕೆ ಸಂಪೂರ್ಣ ಸ್ಥಗಿತಗೊಂಡು ಜನ ಹಾಗೂ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆಯೂ ಎದುರಾಗಲಿದೆ ಎಂದು ಎಚ್ಚರಿಸಿದ್ದಾರೆ.
ರೈತರಾದ ಕಾಶಯ್ಯ ಹರ್ಲಾಪುರ, ಪ್ರಭುರಾಜ್​ ಪಾಟೀಲ್​, ಖಾಜಾಸಾಬ ಹೊಸಳ್ಳಿ, ಮಹೇಶ್ವರಗೌಡ, ಹನುಮಂತಪ್ಪ ಬಿಂಗಿ, ಹರಿಕೃಷ್ಣ, ದೇವರಾಜ್​ ಪಾಟೀಲ್​, ಶರಣಬಸಪ್ಪ ಆನೆಗೊಂದಿ, ಪ್ರದಿಪ ಹಿಟ್ನಾಳ್​, ಬೀರಪ್ಪ ಶಿವಪುರ, ರವಿಕುಮಾರ ಛಲಸಾನಿ, ಪ್ರಸಾದ ರೆಡ್ಡಿ, ಅಂಬರೇಶ ಹಾಗೂ ಖಾಜಾಹುಸೇನ ಬಸಾಪೂರ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net