ಬಣಜಿಗ ಸಮುದಾಯಕ್ಕೆ ಶೈಕ್ಷಣಿಕ, ಉದ್ಯೋಗ ಮೀಸಲಾತಿಗೆ ಆಗ್ರಹ

ಬಣಜಿಗ ಸಮುದಾಯಕ್ಕೆ ಶೈಕ್ಷಣಿಕ, ಉದ್ಯೋಗ ಮೀಸಲಾತಿಗೆ ಆಗ್ರಹಿಸಿ ಕುಷ್ಟಗಿ ತಹಸೀಲ್ದಾರ್​ ಅಶೋಕ ಶಿಗ್ಗಾಂವಿಗೆ ಮನವಿ ಸಲ್ಲಿಸಲಾಯಿತು.ಬಣಜಿಗ ಸಮುದಾಯದ ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ಟರ್​, ತಾಲೂಕಾಧ್ಯಕ್ಷ ಶಶಿಧರ ಎಂ. ಕವಲಿ,ಪದಾಧಿಕಾರಿಗಳಾಸದ ರವೀಂದ್ರ ಪಾಟೀಲ, ಸೋಮಶೇಖರ ವೈಜಾಪುರ, ಬಸವರಾಜ ಪಡಿ ಇದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಸಿಎಂಗೆ ತಹಸೀಲ್ದಾರ್​ ಮೂಲಕ ಮನವಿ
ಕೊಪ್ಪಳ : ಬಣಜಿಗ ಸಮುದಅಯಕ್ಕೆ ಶೈಕ್ಷಣಿಕ ಹಾಗೂ ಉದ್ಯೋಗ ಕ್ಷೇತ್ರದಲ್ಲಿ ಸೂಕ್ತ ಮೀಸಲಾತಿ ಕಲ್ಪಿಸುವಂತೆ ಒತ್ತಾಯಿಸಿ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಕುಷ್ಟಗಿ ತಾಲೂಕು ಘಟಕದಿಂದ ಕುಷ್ಟಗಿ ತಹಸೀಲ್ದಾರ್​ ಅಶೋಕ ಶಿಗ್ಗಾಂವಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಬಣಜಿಗ ಸಮುದಾಯ ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ಸಮುದಾಯವಾಗಿದ್ದು, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಮತ್ತು ಯುವಕರಿಗೆ ಉದ್ಯೋಗಾವಕಾಶಗಳಲ್ಲಿ ಮೀಸಲಾತಿ ನೀಡುವ ಮೂಲಕ ಸಮಾಜದ ಅಭಿವೃದ್ಧಿಗೆ ಸರ್ಕಾರ ಸ್ಪಂದಿಸಬೇಕು. ಬಣಜಿಗ ಸಮುದಾಯದ ಜನರಿಗೆ ಶೈಕ್ಷಣಿಕ, ಆರ್ಥಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಸರ್ಕಾರ ವಿಶೇಷ ಕ್ರಮ ಕೈಗೊಳ್ಳಬೇಕಿದ್ದು, ಸೂಕ್ತ ಮೀಸಲಾತಿ ಸೌಲಭ್ಯ ಒದಗಿಸುವಂತೆ ಒತ್ತಾಯಿಸಲಾಗಿದೆ.
ಬಣಜಿಗ ಸಮುದಾಯದ ಜಿಲ್ಲಾಧ್ಯಕ್ಷ ವೀರೇಶ ಬಂಗಾರಶೆಟ್ಟರ್​, ತಾಲೂಕಾಧ್ಯಕ್ಷ ಶಶಿಧರ ಎಂ. ಕವಲಿ,ಪದಾಧಿಕಾರಿಗಳಾಸದ ರವೀಂದ್ರ ಪಾಟೀಲ, ಸೋಮಶೇಖರ ವೈಜಾಪುರ, ಬಸವರಾಜ ಪಡಿ, ಉಮೇಶ ಅಕ್ಕಿ, ರಾಜಶೇಖರ ಹೊಕ್ರಾಣಿ, ವೀರೇಶ ಕಲಕಬಂಡಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net