ಕೊಪ್ಪಳ ಜಿಲ್ಲಾ ಹಡಪದ ಸಮೂದಾಯದಿಂದ ಸೋಮವಾರ ಡಿಸಿ ಕಚೇರಿಯಲ್ಲಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಲಾಡ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಡಿಸಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದರು. ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ, ಸಂಘಟನಾ ಕಾರ್ಯದರ್ಶಿ ಈಶಪ್ಪ ಮುದ್ದಾಬಳ್ಳಿ, ಮಲ್ಲಿಕಾರ್ಜುನ ಮಿಟ್ಟಿಕೇರಿ, ವಕೀಲರಾದ ಬಿ.ಎಸ್. ವೀರಾಪುರ್, ನೀಲಕಮಲ, ಶರಣಪ್ಪ ಹಲಗೇರಿ, ಶಿವಣ್ಣ, ಪ್ರಕಾಶ್, ಗವಿಸಿದ್ದಪ್ಪ ಇತರರಿದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಹಡಪದ ಸಮೂದಾಯದಿಂದ ಡಿಸಿಗೆ ಮನವಿ
ಕೊಪ್ಪಳ: ಹಡಪದ ಸಮೂದಾಯದ ಬಗ್ಗೆ ಅವಹೇಳನಕಾರಿ ಪದ ಬಳಕೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಕಾರ್ಮಿಕ ಸಚಿವ ಸಂತೋಷ್ ಕುಮಾರ್ ಲಾಡ್ ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ, ಕೊಪ್ಪಳ ಜಿಲ್ಲಾ ಹಡಪದ ಸಮೂದಾಯದಿಂದ ಸೋಮವಾರ ಡಿಸಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಲಾಯಿತು.
ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡುವ ಭರದಲ್ಲಿ ಸಚಿವ ಸಂತೋಷ್ ಲಾಡ್ ಅವರು ಹಡಪದ ಸಮೂದಾಯವನ್ನು ಕೆಣಕುವಂತಹ ನಿಷೇಧಿತ ಪದ ಬಳಸಿ ಸಮಾಜಕ್ಕೆ ಅವಮಾನ ಮಾಡಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಸಚಿವರ ಈ ವರ್ತನೆ ಅಕ್ಷಮ್ಯ ಅಪರಾಧವಾಗಿದ್ದು, ಇದರಿಂದ ಇಡೀ ಸಮಾಜಕ್ಕೆ ನೋವುಂಟಾಗಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.
ಸಮೂದಾಯದ ಘನತೆಗೆ ಧಕ್ಕೆ ತಂದಿರುವ ಸಂತೋಷ್ ಲಾಡ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ಕೈಬಿಡಬೇಕು. ಅವರ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸಿ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ಸಚಿವರು ರಾಜ್ಯದ ಹಡಪದ ಸಮೂದಾಯಕ್ಕೆ ಕ್ಷಮೆ ಯಾಚಿಸಬೇಕು ಎಂದು ಆಗ್ರಹಿಸಿದರು.
ಹೋರಾಟದ ಎಚ್ಚರಿಕೆ
ಹಡಪದ ಸಮುದಾಯದ ಜಿಲ್ಲಾಧ್ಯಕ್ಷ ಹನುಮಂತಪ್ಪ ಸರಿಗಮ ಮಾತನಾಡಿ, ಸಚಿವರು ಕೂಡಲೇ ಕ್ಷಮೆ ಕೇಳದಿದ್ದರೆ ಮತ್ತು ಸರ್ಕಾರ ಅವರ ಮೇಲೆ ಕ್ರಮ ಕೈಗೊಳ್ಳದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಜಿಲ್ಲಾ ಸಂಘಟನಾ ಕಾರ್ಯದರ್ಶಿ ಈಶಪ್ಪ ಮುದ್ದಾಬಳ್ಳಿ, ಮಲ್ಲಿಕಾರ್ಜುನ ಮಿಟ್ಟಿಕೇರಿ, ವಕೀಲರಾದ ಬಿ.ಎಸ್. ವೀರಾಪುರ್, ನೀಲಕಮಲ, ಶರಣಪ್ಪ ಹಲಗೇರಿ, ಶಿವಣ್ಣ, ಪ್ರಕಾಶ್, ಗವಿಸಿದ್ದಪ್ಪ, ಮಾರ್ಕಂಡೇಪ್ಪ ಹಾಗೂ ತಾಲೂಕು, ಯುವ ಘಟಕದ ಅಧ್ಯಕ್ಷರು, ಸದಸ್ಯರು ಇದ್ದರು.