ತೆರಿಗೆ ವಂಚಿಸುತ್ತಿರುವ ವ್ಯಾಪಾರಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ
ಕೊಪ್ಪಳದಲ್ಲಿ ತೆರಿಗೆ ವಂಚಿಸುತ್ತಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ವಿವಿಧ ಸಂಟನೆಗಳಿಂದ ಶುಕ್ರವಾರ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಅವರಿಗೆ ಮನವಿ ಸಲ್ಲಿಸಲಾಯಿತು. ಎಸ್.ಎ.ಗಫಾರ್, ಬಸವರಾಜ್ ಶೀಲವಂತರ್, ಮಂಗಳೇಶ ರಾಥೋಡ್, ಅಪ್ಪಣವರ, ಮೊಹಮ್ಮದ್ ಗೌಸ್ ನೀಲಿ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ವಿವಿಧ ಸಂಟನೆಗಳಿಂದ ಎಡಿಸಿಗೆ ಮನವಿ
ಕೊಪ್ಪಳ: ಜಿಲ್ಲೆಯ ವಿವಿಧ ವ್ಯಾಪಾರಸ್ಥರು ಗ್ರಾಹಕರಿಗೆ ಅಧಿಕೃತ ರಶೀದಿ ನೀಡದೆ ಸರ್ಕಾರಕ್ಕೆ ಕೋಟ್ಯಂತರ ರೂಪಾಯಿ ತೆರಿಗೆ ವಂಚಿಸುತ್ತಿದ್ದಾರೆ ಎಂದು ಆರೋಪಿಸಿ, ಅವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಜನಪರ ಸಂಘಟನೆಗಳ ಒಕ್ಕೂಟ ಹಾಗೂ ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದಿಂದ ಆಗ್ರಹಿಸಲಾಯಿತು.
ಜಿಲ್ಲೆಯಲ್ಲಿ ನಡೆಯುತ್ತಿರುವ ವ್ಯವಸ್ಥಿತ ತೆರಿಗೆ ಚೋರಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ. ಜಿಲ್ಲೆಯ ಬಹುತೇಕ ಅಂಗಡಿ-ಮುಂಗಟ್ಟುಗಳಲ್ಲಿ ವ್ಯಾಪಾರಸ್ಥರು ಗ್ರಾಹಕರಿಗೆ ಅಧಿಕೃತ ರಶೀದಿ ನೀಡುತ್ತಿಲ್ಲ. ಬಿಲ್ ಕೇಳಿದರೆ ತೆರಿಗೆ ಹೆಚ್ಚಾಗುತ್ತದೆ ಎಂಬ ನೆಪ ಹೇಳಿ ಕೈಬರಹದ ಚೀಟಿ ನೀಡಿ ವಂಚಿಸುತ್ತಿದ್ದಾರೆ. ರಶೀದಿ ಇಲ್ಲದ ಕಾರಣ ವಸ್ತುಗಳಲ್ಲಿ ದೋಷ ಕಂಡುಬಂದಾಗ ಗ್ರಾಹಕರಿಗೆ ವಾರಂಟಿ ಪಡೆಯಲು ಅಥವಾ ಬದಲಾಯಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇದು ಗ್ರಾಹಕ ಸಂರಕ್ಷಣಾ ಕಾಯ್ದೆಯ ನೇರ ಉಲ್ಲಂಘನೆಯಾಗಿದೆ.
ಜನರ ತೆರಿಗೆ ಹಣದಿಂದ ಸಂಬಳ ಪಡೆಯುವ ಅಧಿಕಾರಿಗಳು ಕೇವಲ ಕಚೇರಿ ದಾಖಲೆಗಳಿಗೆ ಸೀಮಿತವಾಗಿದ್ದಾರೆ. ಇವರ ರ್ನಿಲಕ್ಷ್ಯದಿಂದಾಗಿ ಸರ್ಕಾರದ ಖಜಾನೆಗೆ ಸೇರಬೇಕಾದ ಕೋಟ್ಯಂತರ ರೂಪಾಯಿ ತೆರಿಗೆ ಹಣ ಸೋರಿಕೆಯಾಗುತ್ತಿದೆ. ವ್ಯಾಪಾರಸ್ಥರ ತೆರಿಗೆ ವಂಚನೆಯಿಂದಾಗಿ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗುತ್ತಿದೆ ಎಂದರು.
ಪ್ರತಿ ಅಂಗಡಿಯಲ್ಲೂ ದರ ಪ್ರದರ್ಶನ ಮತ್ತು ದಾಸ್ತಾನು ಘೋಷಣೆ ಫಲಕ ಕಡ್ಡಾಯಗೊಳಿಸಬೇಕು. ತೂಕ ಮತ್ತು ಅಳತೆಯಲ್ಲಿ ನಡೆಯುವ ಅಕ್ರಮಗಳನ್ನು ತಡೆಯಬೇಕು. ಹೋಟೆಲ್, ಬಟ್ಟೆ ಅಂಗಡಿ, ಕಿರಾಣಿ ಮಳಿಗೆಗಳಿಗೆ ಅಧಿಕಾರಿಗಳು ಅನಿರೀಕ್ಷಿತ ಭೇಟಿ ನೀಡಿ ತಪಾಸಣೆ ನಡೆಸಬೇಕು. ಪ್ರತಿಯೊಬ್ಬ ಗ್ರಾಹಕರಿಗೂ ಕಡ್ಡಾಯವಾಗಿ ಬಿಲ್ ನೀಡುವಂತೆ ಆದೇಶ ಹೊರಡಿಸಬೇಕು ಮತ್ತು ನಿಯಮ ಉಲ್ಲಂಘಿಸುವವರ ಪರವಾನಗಿ ರದ್ದುಪಡಿಸಬೇಕೆಂದು ಶುಕ್ರವಾರ ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ ಮೂಲಕ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.
ಜನಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಎಸ್.ಎ.ಗಫಾರ್, ಭಾರತೀಯ ಕಾರ್ಮಿಕ ಸಂಘಟನೆಗಳ ಒಕ್ಕೂಟದ ಸಂಚಾಲಕ ಬಸವರಾಜ್ ಶೀಲವಂತರ್, ಗಿಣಿಗೇರಾ ನಾಗರಿಕ ಹೋರಾಟ ಸಮಿತಿ ಸಂಚಾಲಕ ಮಂಗಳೇಶ ರಾಥೋಡ್, ಪಾಸ್ಟರ್ಸ್ ಅಸೋಸಿಯೇಷನ್ ಜಿಲ್ಲಾ ಅಧ್ಯಕ್ಷ ಚನ್ನಬಸಪ್ಪ ಅಪ್ಪಣವರ, ಮೊಹಮ್ಮದ್ ಗೌಸ್ ನೀಲಿ ಇತರರಿದ್ದರು.