ಲಂಚ ಕೇಳಿದ ಮುಖ್ಯಾಧಿಕಾರಿ ಅಮಾನತು ಮಾಡಿ

ಕನಕಗಿರಿ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅಮಾನತಿಗೆ ಆಗ್ರಹಿಸಿ ಗುರುವಾರ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಪಪಂ ಸದಸ್ಯ ಶೇಷಪ್ಪ ಪೂಜಾರ, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಅಯ್ಯನಗೌಡ, ಪ್ರಮುಖರಾದ ರಾಮಾಂಜಿನೇಯ, ಕಿರಣ್, ಯಮನೂರಪ್ಪ ಇತರರಿದ್ದರು.
ಕನಕಗಿರಿ ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅಮಾನತಿಗೆ ಆಗ್ರಹಿಸಿ ಗುರುವಾರ ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಸಾರ್ವಜನಿಕರು ಮನವಿ ಸಲ್ಲಿಸಿದರು. ಪಪಂ ಸದಸ್ಯ ಶೇಷಪ್ಪ ಪೂಜಾರ, ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಅಯ್ಯನಗೌಡ, ಪ್ರಮುಖರಾದ ರಾಮಾಂಜಿನೇಯ, ಕಿರಣ್, ಯಮನೂರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಸಾರ್ವಜನಿಕರ ಮನವಿ
ಕನಕಗಿರಿ: ಲೇಔಟ್ ಮಾಲೀಕರಿಗೆ 3 ಲಕ್ಷ ರೂ.ಗೆ ಬೇಡಿಕೆಯಿಟ್ಟಿರುವ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ ಅಮಾನತಿಗೆ ಆಗ್ರಹಿಸಿ ಸಾರ್ವಜನಿಕರು ತಹಸೀಲ್ದಾರ್ ಚಂದ್ರಶೇಖರ ಗಾಳಿಗೆ ಗುರುವಾರ ಮನವಿ ಸಲ್ಲಿಸಿದರು.
ಪಪಂ ಸದಸ್ಯ ಶೇಷಪ್ಪ ಪೂಜಾರ ಮಾತನಾಡಿ, ಪಪಂನಲ್ಲಿ ಲಂಚಾವತಾರ ತಾಂಡವವಾಡುತ್ತಿದೆ. ಮುಖ್ಯಾಧಿಕಾರಿಯೇ ಲೇಔಟ್ ಮಾಲೀಕರಿಗೆ ಹಣ ಕೇಳಿದ್ದಲ್ಲದೇ, ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳೋಣ ಎಂದಿರುವ ಆಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ಜಗ್ಜಾಹೀರವಾಗಿದೆ. ಪತ್ರಿಕೆ, ಮಾಧ್ಯಮಗಳಲ್ಲಿಯೂ ಸುದ್ದಿಗಳು ಪ್ರಕಟವಾಗಿವೆ. ಆದರೂ ಅಧಿಕಾರಿಗಳು ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹಾಕುತ್ತಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದರು.
ಹಿಂದೂ ಜಾಗರಣಾ ವೇದಿಕೆ ಸಂಚಾಲಕ ಅಯ್ಯನಗೌಡ ಮಾತನಾಡಿ, ಪಪಂನಲ್ಲಿನ ಲಂಚಾವತಾರಕ್ಕೆ ಪಟ್ಟಣದ ಜನತೆ ಬೇಸತ್ತು ಹೋಗಿದ್ದಾರೆ. ಲಂಚ ಬೇಡಿಕೆ ಕುಲ್ಲಂಕುಲ್ಲವಾಗಿದೆ. ಬಡ ಜನತೆ ಪಪಂ ಮೆಟ್ಟಿಲೇರಲು ಭಯಪಡುತ್ತಿದ್ದಾರೆ. ಇಲ್ಲಿ ನಿಯಮಗಳೆಲ್ಲವೂ ಗಾಳಿಗೆ ತೂರಿ ಹಣ ಕೊಟ್ಟವರಿಗೆ ಕೆಲಸ ಮಾಡಿಕೊಡಲಾಗುತ್ತಿದೆ. ಗುಂಟೆ ಲೆಕ್ಕದ ಭೂಮಿಗೂ ಹಣ ಪಡೆದು ಫಾರ್ಮ್ 3 ನೀಡಲಾಗುತ್ತಿದೆ. ಶೀಘ್ರವೇ ಮುಖ್ಯಾಧಿಕಾರಿ ಅಮಾನತು ಮಾಡಿ ಕಾನೂನು ಕ್ರಮ ವಹಿಸಬೇಕು. ಇಲ್ಲಿನ ವಿವಿಧ ವಿಭಾಗದ ಸಿಬ್ಬಂದಿಯನ್ನು ಬೇರೆಡೆಗೆ ವರ್ಗಾಯಿಸಿ ಹೊಸ ಸಿಬ್ಬಂದಿ ನಿಯೋಜಿಸಬೇಕು. ಇಲ್ಲದಿದ್ದಲ್ಲಿ ್ಲ ಪಟ್ಟಣ ಬಂದ್ ಮಾಡಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದರು.
ಹನುಮೇಶ ಗಂಗಾಮತ, ಸುರೇಶ ಕುರುಗೋಡು, ಹನುಮಂತರೆಡ್ಡಿ ಮಹಲಿನಮನಿ, ಬಸವರಾಜ, ವೀರೇಶ ಛಲವಾದಿ, ಯಮನೂರಪ್ಪ, ರಾಮಾಂಜಿನೇಯ, ಬಸವರಾಜ ನಾಯಕ, ಆಂಜನೇಯ ಭಜಂತ್ರಿ, ಕಿರಣ್ ಕುರುಬರ, ವೆಂಕಟೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net