ಕೃಷಿ ಇಲಾಖೆಯ ಎಡಿ ಅಭಿಲಾಷ, ಎಸ್‌ಎಡಿಎಚ್ ಯೋಗೀಶ, ಜೆಸ್ಕಾಂ ಶಾಖಾಧಿಕಾರಿಗಳಾದ ಮಲ್ಲಿಕಾರ್ಜುನ, ಸಿದ್ದಲಿಂಗಪ್ಪ ಪ್ರತಿಭಟನಾಕಾರರ ಸಮಸ್ಯೆ ಆಲಿಸಿದರು. ಕನಕಗಿರಿ ಹೋಬಳಿ ಘಟಕದ ಅಧ್ಯಕ್ಷ ಹನುಮಂತಪ್ಪ ಬಂಡ್ರಾಳ ಮಾತನಾಡಿದರು. ರೈತರಾದ ವೆಂಕಟೇಶ ಮಲ್ಲಿಗೆವಾಡ, ಶಿವಕುಮಾರ ಬಡಿಗೇರ, ಬಾಲಪ್ಪ ನಾಡಿಗೇರ, ಲಿಂಗಪ್ಪ ಜಾಲಿಹುಡಾ, ರಾಮಲಿಂಗಪ್ಪ ಗದ್ದಿ, ಸಣ್ಣ ಶೇಖರಪ್ಪ ಗದ್ದಿ, ಸೋಮನಾಥ ನಾಯಕ, ಕನಕಪ್ಪ ಗೊಲ್ಲರ ಇತರರಿದ್ದರು.