ಬೆಳೆ ನಷ್ಟಕ್ಕೆ ಸಿಲುಕುವ ರೈತರಿಗೆ ಬೆಳೆವಿಮೆ ಆಸರೆಯಾಗುವ ಆಸೆ ಮೂಡಿಸಿದೆ. ಬಿತ್ತನೆ ಪ್ರಮಾಣವೂ ಕುಸಿದಿದ್ದು, ಬಿತ್ತಿದ ರೈತರು ಕಡ್ಡಾಯವಾಗಿ ವಿಮೆ ನೋಂದಣಿ ಮಾಡಿಸಿದಲ್ಲಿ ಆಗುವ ನಷ್ಟದಿಂದ ತಪ್ಪಿಸಿಕೊಳ್ಳಬಹುದು. ಹೆಸರು, ಮೆಕ್ಕೆಜೋಳ, ತೊಗರಿ, ಸೂರ್ಯಕಾಂತಿ, ಸಜ್ಜೆ, ಭತ್ತ, ಹತ್ತಿ, ಅಲಸಂದೆ, ಈರುಳ್ಳಿ, ಶೇಂಗಾ, ಟೋಮಾಟೊ, ಎಳ್ಳು, ನವಣೆ, ಜೋಳ, ಹುರುಳಿ ಬೆಳೆಗೆ ವಿಮೆ ಮಾಡಿಸಬಹುದು. ಹೆಸರು ಬೆಳೆಗೆ ಜು.15ಕ್ಕೆ ಅವಧಿ ಮುಗಿದಿದೆ. ಬಾಕಿ ಬೆಳೆಗಳಿಗೆ ಜುಲೈ ಅಂತ್ಯದವರೆಗೆ ಮಾಡಿಸಲು ಅವಕಾಶವಿದೆ. ಜು.14ರ ಅಂತ್ಯಕ್ಕೆ ಗಂಗಾವತಿ ತಾಲೂಕಿನಲ್ಲಿ 643, ಕನಕಗಿರಿ 1,004, ಕಾರಟಗಿ 122, ಕೊಪ್ಪಳ 10,547, ಕುಕನೂರು 4,353 ಹಾಗೂ ಯಲಬುರ್ಗಾ ತಾಲೂಕಿನಲ್ಲಿ 6,249 ಸೇರಿ ಒಟ್ಟು 25,627 ರೈತರು 25,139 ಹೆಕ್ಟೇರ್ ಪ್ರದೇಶಕ್ಕೆ ವಿಮೆ ನೋಂದಾಯಿಸಿದ್ದಾರೆ.