ಅಧಿವೇಶನದಲ್ಲಿ ಗಮನಸೆಳೆಯಲು ನಿರ್ಧಾರ

ಗಂಗಾವತಿ ಸರ್ಕಿಟ್‌ಹೌಸ್‌ನಲ್ಲಿ ಭೀಮ ಪ್ರಜಾಸಂಘದಿಂದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆಯನ್ನು ರಾಜ್ಯಾಧ್ಯಕ್ಷ ಮುರುಗೇಶ ಶುಕ್ರವಾರ ಉದ್ಘಾಟಿಸಿದರು. ಜಿಲ್ಲಾಧ್ಯಕ್ಷ ನಾಗರಾಜ ಕಟ್ಟಿಮನಿ, ಉಪಾಧ್ಯಕ್ಷ ನರಸಿಂಹ, ತಾಲೂಕಾಧ್ಯಕ್ಷ ಗಣೇಶ ಬಸಾಪಟ್ಟಣ ಇತರರಿದ್ದರು.

Published on
ಗಂಗಾವತಿ: ನಗರದ ಸರ್ಕಿಟ್‌ಹೌಸ್‌ನಲ್ಲಿ ಭೀಮ ಪ್ರಜಾಸಂಘದಿಂದ ಜಿಲ್ಲಾ ಮತ್ತು ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆ ಸಭೆ ಶುಕ್ರವಾರ ಹಮ್ಮಿಕೊಳ್ಳಲಾಗಿತ್ತು. ಸಭೆಯಲ್ಲಿ ಸಂಘದ ಸಿದ್ಧಾಂತ, ಹೋರಾಟ, ಸಂಘಟನೆ ಮತ್ತು ಪದಾಧಿಕಾರಿಗಳ ಜವಾಬ್ದಾರಿ ಕುರಿತು ಚರ್ಚಿಸಲಾಯಿತು.
ನೇತೃತ್ವವಹಿಸಿದ್ದ ಸಂಘದ ರಾಜ್ಯಾಧ್ಯಕ್ಷ ಮುರುಗೇಶ ಮಾತನಾಡಿ, ವಿಧಾನಸೌಧದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ನಿರ್ಮಿಸಲು ರಾಜ್ಯ ಸರ್ಕಾರಕ್ಕೆ ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಪುತ್ಥಳಿಗಾಗಿ ಬೀದರ್‌ನಿಂದ ಬೆಂಗಳೂರುವರೆಗೆ ಪಾದಯಾತ್ರೆ ಕೈಗೊಂಡರೂ ಸರ್ಕಾರ ಸ್ಪಂದಿಸಿಲ್ಲ. ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುವ ಅಧಿವೇಶನದಲ್ಲಿ ಗಮನಸೆಳೆಯಲಾಗುತ್ತಿದ್ದು, ಡಿ.16ರಂದು ಮುತ್ತಿಗೆ ಹಾಕಲಾಗುವುದು ಎಂದರು. ಜಿಲ್ಲಾಧ್ಯಕ್ಷ ನಾಗರಾಜ ಕಟ್ಟಿಮನಿ, ಉಪಾಧ್ಯಕ್ಷ ನರಸಿಂಹ, ತಾಲೂಕಾಧ್ಯಕ್ಷ ಗಣೇಶ ಬಸಾಪಟ್ಟಣ, ಪದಾಧಿಕಾರಿಗಳಾದ ಶಾಮೀದ್ ಅಲಿ, ವೀರೇಶ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net