ನೇತ್ರದಾನ ಅರಿವು ಮೂಡಿಸಲು ಡಿಸಿ ಸೂಚನೆ

ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಂಧತ್ವ ನಿವಾರಣೆ ಜಾಗೃತಿ ಭಿತ್ತಿ ಪ್ರತ ಬಿಡುಗಡೆಗೊಳಿಸಿದರು. ಡಿಎಚ್​ಒ ಡಾ.ಈಶ್ವರ ಸವಡಿ, ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ರವೀಂದ್ರನಾಥ ಎಂ.ಎಚ್​., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್​, ಡಾ.ಗೋನಾಳ ಕುಮಾರಸ್ವಾಮಿ, ಆಯುಷ್​ ಅಧಿಕಾರಿ ಡಾ.ಪವರ್ತಗೌಡ ಹಿರೇಗೌಡರ ಇದ್ದರು.
ಕೊಪ್ಪಳದಲ್ಲಿ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಂಧತ್ವ ನಿವಾರಣೆ ಜಾಗೃತಿ ಭಿತ್ತಿ ಪ್ರತ ಬಿಡುಗಡೆಗೊಳಿಸಿದರು. ಡಿಎಚ್​ಒ ಡಾ.ಈಶ್ವರ ಸವಡಿ, ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ರವೀಂದ್ರನಾಥ ಎಂ.ಎಚ್​., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್​, ಡಾ.ಗೋನಾಳ ಕುಮಾರಸ್ವಾಮಿ, ಆಯುಷ್​ ಅಧಿಕಾರಿ ಡಾ.ಪವರ್ತಗೌಡ ಹಿರೇಗೌಡರ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಡಿಸಿ ಡಾ.ಸುರೇಶ ಬಿ.ಇಟ್ನಾಳ ಸೂಚನೆ

ಕೊಪ್ಪಳ: ಜನ ಸಮುದಾಯದಲ್ಲಿ ನೇತ್ರದಾನ ಕುರಿತು ಜಾಗೃತಿ ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಸೂಚಿಸಿದರು.

41ನೇ ರಾಷ್ಟ್ರೀಯ ನೇತ್ರದಾನ ಜಾಗೃತಿ ಪಾಕ ಅಂಗವಾಗಿ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದರು.
ನೇತ್ರದಾನ ಕೇವಲ ವೈದ್ಯಕಿಯ ಪ್ರಕ್ರಿಯೆಯಲ್ಲ. ಸಾಮಾಜಿಕ ಕಳಕಳಿ ಮತ್ತು ಮಾನವೀಯ ಜವಾಬ್ದಾರಿ. ನೇತ್ರದಾನ ಅರಿವು ಮೂಡಿಸಿ. ಸಾವಿರಾರು ಜನರು ದೃಷ್ಟಿ ಇಲ್ಲದೇ ಜೀವಿಸುತ್ತಿದ್ದಾರೆ. ದಾನಿಗಳು ಕಡಿಮೆ ಇದ್ದಾರೆ. ಹೆಚ್ಚೆಚ್ಚು ಅರಿವು ಮೂಡಿಸಿ ದಾನ ಮಾಡಲು ಪ್ರೇರೇಪಿಸಿ. ಅಂಧತ್ವ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಿ. ನಿಮಮಿತವಾಗಿ ಸಾರ್ವಜನಿಕರ ತಪಾಸಣೆ ಕೈಗೊಳ್ಳಿ. ಅಗತ್ಯ ಇದ್ದವರಿಗೆ ಸೂಕ್ತ ಚಿಕಿತ್ಸೆ ನೀಡಿ. ಅಂಗಾಂಗ ದಾನ ಬಗ್ಗೆ ತಿಳಿವಳಿಕೆ ನೀಡುವಂತೆ ಸಲಹೆ ನೀಡಿದರು.
ಜಿಲ್ಲಾ ಕುಷ್ಠರೋಗ ನಿಮೂರ್ಲನಾಧಿಕಾರಿ ಡಾ.ಪ್ರಕಾಶ ಎಚ್​. ಮಾತನಾಡಿ, ನೇತ್ರದಾನ ಮಹಾದಾನ. ಪ್ರತಿ ವರ್ಷ ಆ.25ರಿಂದ ಸೆ.8ವರೆಗೆ ಜಾಗೃತಿ ಪಾಕ ಹಮ್ಮಿಕೊಳ್ಳಲಾಗುತ್ತದೆ. ದೇಶದಲ್ಲಿ 46 ಲಕ್ಷ ಜನ ಕಾರ್ನಿಯಲ್​ ಅಂಧತ್ವದಿಂದ ಬಳಲುತ್ತಿದ್ದಾರೆ. ಪ್ರತಿ ವರ್ಷ 20 ಸಾವಿರ ಹೊಸ ಸೇರ್ಪಡೆಯಾಗುತ್ತಿವೆ. ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದಲ್ಲಿ ಇಬ್ಬರಿಗೆ ದೃಷ್ಟಿ ನೀಡಬಹುದು. ದೇಶದಲ್ಲಿ 5.70 ಲಕ್ಷ ಜನ, ರಾಜ್ಯದಲ್ಲಿ 68,765 ಹಾಗೂ ಕೊಪ್ಪಳದಲ್ಲಿ 2003 ಜನ ಅಂಗಾಂಗ ನೋಂದಣಿ ಮಾಡಿಕೊಂಡಿದ್ದಾರೆಂದು ವಿವರ ನೀಡಿದರು.
ಸಭೆಯಲ್ಲಿ ಜಾಗೃತಿ ಭಿತ್ತಿಪತ್ರ ಬಿಡುಗಡೆ ಮಾಡಲಾಯಿತು.
ಡಿಎಚ್​ಒ ಡಾ.ಈಶ್ವರ ಸವಡಿ, ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ರವೀಂದ್ರನಾಥ ಎಂ.ಎಚ್​., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್​, ಡಾ.ಗೋನಾಳ ಕುಮಾರಸ್ವಾಮಿ, ಆಯುಷ್​ ಅಧಿಕಾರಿ ಡಾ.ಪವರ್ತಗೌಡ ಹಿರೇಗೌಡರ ಇತರರಿದ್ದರು.
ಕೊಪ್ಪಳದಲ್ಲಿ ಗುರುವಾರ ಡಿಸಿ ಡಾ.ಸುರೇಶ ಬಿ.ಇಟ್ನಾಳ ಅಂಧತ್ವ ನಿವಾರಣೆ ಜಾಗೃತಿ ಭಿತ್ತಿ ಪ್ರತ ಬಿಡುಗಡೆಗೊಳಿಸಿದರು. ಡಿಎಚ್​ಒ ಡಾ.ಈಶ್ವರ ಸವಡಿ, ಆರ್​ಸಿಎಚ್​ ಅಧಿಕಾರಿ ಡಾ.ಪ್ರಕಾಶ ವಿ., ಕುಟುಂಬ ಕಲ್ಯಾಣಾಧಿಕಾರಿ ರವೀಂದ್ರನಾಥ ಎಂ.ಎಚ್​., ಸರ್ವೇಕ್ಷಣಾಧಿಕಾರಿ ಡಾ.ನಂದಕುಮಾರ್​, ಡಾ.ಗೋನಾಳ ಕುಮಾರಸ್ವಾಮಿ, ಆಯುಷ್​ ಅಧಿಕಾರಿ ಡಾ.ಪವರ್ತಗೌಡ ಹಿರೇಗೌಡರ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net